ರಾಜಕಾರಣದಲ್ಲಿ ನಿವೃತ್ತಿ ಅಂತಿಲ್ಲ, ಹಾಗಾಗೇ ಸಿದ್ದರಾಮಯ್ಯ 2028ರಲ್ಲೂ ತಮ್ಮದೇ ನಾಯಕತ್ವ ಅಂದಿರಬಹುದು: ಡಿಕೆ ಸುರೇಶ್
ಶಿವಕುಮಾರ್ ಕಾಂಗ್ರೆಸ್ ಪಕ್ಷದ ಒಬ್ಬ ಪ್ರಾಮಾಣಿಕ ಕಾರ್ಯಕರ್ತ, ಬಲಾಬಲದ ಪ್ರದರ್ಶನ ಮಾಡುವ ಅವಶ್ಯಕತೆ ಅವರಿಗಿಲ್ಲ, ಹೈಕಮಾಂಡ್ ಆದೇಶಕ್ಕೆ ಮನ್ನಣೆ ನೀಡುವ ವ್ಯಕ್ತಿಯಾಗಿದ್ದಾರೆ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಕಾಯಕರ್ತರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿದರು.
ಬೆಂಗಳೂರು, ಜುಲೈ 12: ರಾಜಕಾರಣದಲ್ಲಿ ನಿವೃತ್ತಿ ಅಂತಿಲ್ಲ, ಹಾಗಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2028ರಲ್ಲೂ ತನ್ನದೇ ನಾಯಕತ್ವ ಅಂತ ಹೇಳಿರಬಹುದು ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೇಳಿದರು. ಶಾಸಕಾಂಗದ ಬೆಂಬಲದೊಂದಿಗೆ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ, ಎರಡು ವರ್ಷದಿಂದ ಅಧಿಕಾರ ನಡೆಸಿಕೊಂಡು ಹೋಗುತ್ತಿದ್ದಾರೆ, ಮುಂದೆಯೂ ನಡೆಸುತ್ತಾರೆ, ಡಿಕೆ ಶಿವಕುಮಾರ್ ಅವರು ಶಾಸಕರ ಬೆಂಬಲ ಪಡೆದುಕೊಳ್ಳಲು ಅಥವಾ ಕೇಳಲು ಇದು ಸಮಯ ಅಲ್ಲ, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಯಾಕೆ ಪದೇಪದೆ ಉದ್ಭವಿಸುತ್ತಿದೆಯೋ ಗೊತ್ತಿಲ್ಲ ಎಂದು ಡಿಕೆ ಸುರೇಶ್ ಹೇಳಿದರು.
ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ