
ದೆಹಲಿ, ಸೆ.16: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ 76ನೇ ಜನ್ಮದಿನದ ಹೊಸ್ತಿಲಲ್ಲಿದ್ದು, ಈ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು ಭಾರತೀಯ ಜನತಾ ಪಾರ್ಟಿ (BJP) ದೇಶಾದ್ಯಂತ ಬೃಹತ್ ಅಭಿಯಾನಗಳನ್ನು ಘೋಷಿಸಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದರ ಮೇಲೊಂದರಂತೆ ಜಾಗತಿಕ ದಾಖಲೆಗಳನ್ನು ಮುರಿಯುವ ಮೂಲಕ ‘ಡಿಜಿಟಲ್ ಜಗತ್ತಿನ ಕಿರೀಟವಿಲ್ಲದ ಸುಲ್ತಾನ’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. “ಸೆಪ್ಟೆಂಬರ್ 17 ರ ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ನಡುವೆ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಹಚ್ಚಿ ಪ್ರಧಾನಿಯವರನ್ನು ಹಾರೈಸಬೇಕು,” ಎಂದು ನಿತಿನ್ ನವೀನ್ ವೀಡಿಯೊ ಸಂದೇಶ ನೀಡಿದ್ದಾರೆ. 2014 ರಿಂದ ಭಾರತವು ಪರಿವರ್ತನಾತ್ಮಕ ಬದಲಾವಣೆಗಳನ್ನು ಕಂಡಿದ್ದು, 2047 ರ ವೇಳೆಗೆ ವಿಕಸಿತ ಭಾರತ ಕಟ್ಟುವತ್ತ ಹೆಜ್ಜೆ ಇಡುತ್ತಿದೆ ಎಂದು ಬಿಜೆಪಿ ಹೇಳಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಸಾಮಾಜಿಕ ಜಾಲತಾಣಗಳ ಜಾಗತಿಕ ರಂಗದಲ್ಲಿ ಪ್ರಧಾನಿ ಮೋದಿ ತಮ್ಮ ನಾಯಕತ್ವದ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬರ್ಸ್ ಸಂಖ್ಯೆ 3 ಕೋಟಿ ಗಡಿ ದಾಟಿದ್ದು, ಜಗತ್ತಿನ ಯಾವುದೇ ಪ್ರಭಾವಿ ನಾಯಕನಿಗಿಂತ ಬಹು ಎತ್ತರದಲ್ಲಿದ್ದಾರೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸೋನಾರೊ (ಎರಡನೇ ಸ್ಥಾನ) ಅವರ ಸಬ್‌ಸ್ಕ್ರೈಬರ್ಸ್ ಸಂಖ್ಯೆ ಮೋದಿ ಅವರ ನಾಲ್ಕನೇ ಒಂದು ಭಾಗದಷ್ಟಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ 7 ಪಟ್ಟು ಹೆಚ್ಚು ಹಾಗೂ ಭಾರತದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ 3 ಪಟ್ಟು ಹೆಚ್ಚು ಯೂಟ್ಯೂಬ್ ಸಬ್‌ಸ್ಕ್ರೈಬರ್‌ಗಳನ್ನು ಮೋದಿ ಹೊಂದಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ ಫಾಲೋವರ್ಸ್ ಹೊಂದಿದ ವಿಶ್ವದ ಮೊದಲ ರಾಜಕಾರಣಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದರು.
ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಮೇ 1 ರಿಂದ ಆಗಸ್ಟ್ 15, 2026 ರವರೆಗಿನ ಅವಧಿಯ ಸಚಿವರ ಸೋಶಿಯಲ್ ಮೀಡಿಯಾ ಪರ್ಫಾರ್ಮೆನ್ಸ್ ವರದಿಯನ್ನು ಪ್ರಸ್ತುತಪಡಿಸಲಾಗಿದ್ದು, ಈ ಪಟ್ಟಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರೇ ಅಗ್ರಸ್ಥಾನದಲ್ಲಿದ್ದಾರೆ. ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಹಾಗೂ ಫೇಸ್‌ಬುಕ್‌ನಲ್ಲಿ ಅವರ ದಿನನಿತ್ಯದ ಪೋಸ್ಟ್‌ಗಳು, ಸರಾಸರಿ ಇಂಗೇಜ್‌ಮೆಂಟ್, ಲೈಕ್ಸ್ ಹಾಗೂ ಫಾಲೋವರ್ಸ್ ಆಧಾರದ ಮೇಲೆ ಈ ಶ್ರೇಯಾಂಕ ನೀಡಲಾಗಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರವು ಯುವಕರನ್ನು ತಲುಪಲು ‘ಜನ್-ಝಿ’ (Gen Z) ಹಾಗೂ ಸೃಷ್ಟಿಕರ್ತರ (Creators) ಶೈಲಿಯ ಕಿರು ವೀಡಿಯೊಗಳು ಮತ್ತು ‘ಸ್ನ್ಯಾಪ್‌ಚಾಟ್’ (Snapchat) ನಂತಹ ಪ್ಲಾಟ್‌ಫಾರ್ಮ್‌ಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ.
ಇದನ್ನೂ ಓದಿ: ಸ್ವಚ್ಛ ಭಾರತದಿಂದ ಪಿಎಂ ಇಂಟರ್ನ್‌ಶಿಪ್‌ವರೆಗೆ: ಪ್ರಧಾನಿ ಮೋದಿ ಘೋಷಿಸಿದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ
ನೀಟ್ ಪರೀಕ್ಷೆ ಅಕ್ರಮದ ವಿರೋಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ರಾತ್ರಿ 12 ಗಂಟೆಗೆ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಮಾಡಿದರು. ಈ ರೀಲ್ಸ್ನಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳ ಹಲವು ಪ್ರಮುಖ ಆತಂಕ ಹಾಗೂ ಕಾಳಜಿಗಳಿಗೆ ಸ್ಪಂದಿಸಿ, ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಕುರಿತು ವೀಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಈ ಏಕೈಕ ವೀಡಿಯೊ 300 ಮಿಲಿಯನ್ (30 ಕೋಟಿ) ವೀಕ್ಷಣೆಗಳನ್ನು (Views) ಹಾಗೂ 16 ಮಿಲಿಯನ್ (1.6 ಕೋಟಿ) ಲೈಕ್ಸ್‌ಗಳನ್ನು ಗಳಿಸಿ ಹೊಸ ದಾಖಲೆ ಬರೆದಿತ್ತು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ