
ದೆಹಲಿ:ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏಪ್ರಿಲ್ 21) ರಾತ್ರಿ ಸಿಖ್ ಗುರು ತೇಗ್ ಬಹದ್ದೂರ್ (Sikh guru Tegh Bahadur) ಅವರ 400 ನೇ ಪ್ರಕಾಶ್ ಪುರಬ್ (ಜನ್ಮ ದಿನಾಚರಣೆ) ಸಂದರ್ಭದಲ್ಲಿ (400th Parkash Purab) ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೀರಿ. ಈ ಬಗ್ಗೆ ಮೋದಿ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸಹಯೋಗದೊಂದಿಗೆ ಕೆಂಪು ಕೋಟೆಯಲ್ಲಿ ಸಚಿವಾಲಯವು ಆಯೋಜಿಸಿರುವ ಎರಡು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣವು ಕೇಂದ್ರ ಬಿಂದುವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. 400 ಸಿಖ್ ಸಂಗೀತಗಾರರು ‘ಶಾಬಾದ್ ಕೀರ್ತನೆ’ಗಳನ್ನು ಹಾಡಿದ್ದಾರೆ.
#WATCH | Prime Minister Narendra Modi at the 400th Parkash Purab celebrations of Sri Guru Teg Bahadur at Red Fort, Delhi. pic.twitter.com/EW4VtCIi0k
— ANI (@ANI) April 21, 2022
ಹೊಸ ಚಿಂತನೆ, ನಿರಂತರ ಶ್ರಮ ಮತ್ತು 100% ಸಮರ್ಪಣೆ, ಇದು ಇಂದಿಗೂ ನಮ್ಮ ಸಿಖ್ ಸಮಾಜದ ಗುರುತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಇಂದು ಭಾರತವು ತನ್ನ ಗುರುಗಳ ಆದರ್ಶಗಳೊಂದಿಗೆ ಮುನ್ನಡೆಯುತ್ತಿದೆ ಎಂದು ನನಗೆ ಸಂತೋಷವಾಗಿದೆ. ಕೀರ್ತನೆಯನ್ನು ಕೇಳುವಾಗ ಅನುಭವಿಸಿದ ಶಾಂತಿಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಕೆಂಪು ಕೋಟೆಯು ಅನೇಕ ಪ್ರಮುಖ ಅವಧಿಗಳಿಗೆ ಸಾಕ್ಷಿಯಾಗಿದೆ. ಈ ಕೋಟೆಯು ಗುರು ತೇಜ್ ಬಹದ್ದೂರ್ ಜಿಯವರ ಹುತಾತ್ಮತೆಯನ್ನು ನೋಡಿದೆ ಮತ್ತು ದೇಶಕ್ಕಾಗಿ ಮಡಿದವರ ಧೈರ್ಯವನ್ನು ಸಹ ಪರೀಕ್ಷಿಸಿದೆ: ಪ್ರಧಾನಿ ಮೋದಿ
ಈ ಭಾರತ-ಭೂಮಿ ಒಂದು ದೇಶ ಮಾತ್ರವಲ್ಲ, ಇದು ನಮ್ಮ ಶ್ರೇಷ್ಠ ಪರಂಪರೆ, ಶ್ರೇಷ್ಠ ಸಂಪ್ರದಾಯ ಎಂದು ಪ್ರಧಾನಿ ಹೇಳಿದ್ದಾರೆ. ಭಾರತದಲ್ಲಿ ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ಕಾಲವೊಂದಿತ್ತು ಎಂದು ಔರಂಗಜೇಬ್‌ನ ಆಡಳಿತವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಔರಂಗಜೇಬ್ ಅನೇಕರನ್ನು ಕೊಂದಿರಬಹುದು, ಆದರೆ ನಮ್ಮ ನಂಬಿಕೆಯನ್ನು ನಾಶಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ನಮ್ಮ ಸರ್ಕಾರಕ್ಕೆ ನಮ್ಮ ಗುರುಗಳನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಕೆಂಪು ಕೋಟೆಯ ಸಮೀಪದಲ್ಲಿರುವ ಗುರುದ್ವಾರ ಶಿಶ್‌ಗಂಜ್ ಸಾಹಿಬ್ ಗುರು ತೇಗ್ ಬಹದ್ದೂರ್ ಜಿ ಅವರ ಅಮರ ತ್ಯಾಗದ ಸಂಕೇತವಾಗಿದೆ. ಈ ಪವಿತ್ರ ಗುರುದ್ವಾರವು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ರಕ್ಷಿಸಲು ಗುರು ತೇಗ್ ಬಹದ್ದೂರ್ ಜಿಯವರ ಮಹಾತ್ಯಾಗವನ್ನು ನೆನಪಿಸುತ್ತದೆ- ಮೋದಿ
ಗುರು ತೇಗ್ ಬಹದ್ದೂರ್ ಜಿ ಅವರ ತ್ಯಾಗವು ಭಾರತದ ಅನೇಕ ತಲೆಮಾರುಗಳಿಗೆ ತಮ್ಮ ಸಂಸ್ಕೃತಿಯ ಘನತೆಯನ್ನು ರಕ್ಷಿಸಲು ಮತ್ತು ಅದರ ಗೌರವ ಮತ್ತು ಗೌರವಕ್ಕಾಗಿ ಬದುಕಲು ಮತ್ತು ಸಾಯಲು ಪ್ರೇರೇಪಿಸಿದೆ
ಸಿಖ್ ಸಂಪ್ರದಾಯಕ್ಕೆ ಸಂಬಂಧಿಸಿದ ಪವಿತ್ರ ಯಾತ್ರಾ ಸ್ಥಳಗಳನ್ನು ಜೋಡಿಸಲು ನಮ್ಮ ಸರ್ಕಾರವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ: ಪ್ರಧಾನಿ
ಭಾರತ ಎಂದಿಗೂ ಯಾವುದೇ ದೇಶ ಅಥವಾ ಸಮಾಜಕ್ಕೆ ಬೆದರಿಕೆಯನ್ನು ಒಡ್ಡಿಲ್ಲ. ಇಂದಿಗೂ ನಾವು ಇಡೀ ಪ್ರಪಂಚದ ಕಲ್ಯಾಣದ ಬಗ್ಗೆ ಯೋಚಿಸುತ್ತೇವೆ- ಮೋದಿ
ಇಂದು ನಮ್ಮ ದೇಶವು ನಮ್ಮ ಗುರುಗಳ ಆದರ್ಶಗಳ ಮೇಲೆ ಸಂಪೂರ್ಣ ಶ್ರದ್ಧೆಯಿಂದ ಮುನ್ನಡೆಯುತ್ತಿದೆ ಎಂದು ನನಗೆ ಸಂತೋಷವಾಗಿದೆ. ಈ ಪುಣ್ಯ ಸಂದರ್ಭದಲ್ಲಿ ನಾನು ಎಲ್ಲಾ ಹತ್ತು ಗುರುಗಳ ಪಾದಗಳಿಗೆ ನಮಸ್ಕರಿಸುತ್ತೇನೆ. ಪ್ರಕಾಶ್ ಪರ್ವ್ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
We bow to Sri Guru Tegh Bahadur Ji on his Parkash Purab. https://t.co/c1uRCOSZta
— Narendra Modi (@narendramodi) April 21, 2022
ದೆಹಲಿಯ ಕೆಂಪು ಕೋಟೆಯಲ್ಲಿ ತೇಗ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪುರಬ್ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
Prime Minister Narendra Modi releases a commemorative coin and postage stamp on the occasion of the 400th Parkash Purab celebrations at Red Fort, Delhi. pic.twitter.com/voE4KWRO5Q
— ANI (@ANI) April 21, 2022
ದೆಹಲಿಯ ಕೆಂಪು ಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ
Prime Minister Narendra Modi attends the 400th Parkash Purab celebrations of Sri Guru Teg Bahadur at Red Fort, Delhi pic.twitter.com/3pGZpLAWZK
— ANI (@ANI) April 21, 2022
ಚಕ್ರವರ್ತಿ ಔರಂಗಜೇಬನಿಂದ ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ ನಂತರ ಗುರು ತೇಜ್ ಬಹದ್ದೂರ್ ಅವರ ಸಹಾಯವನ್ನು ಕೋರಿದ ಕಾಶ್ಮೀರದ ಹಲವಾರು ಹಿಂದೂ ಧಾರ್ಮಿಕ ವ್ಯಕ್ತಿಗಳಿಗೆ ಸಹಾಯ ಮತ್ತು ಆಶ್ರಯ ನೀಡುವ ಮೂಲಕ ಗುರು ತೇಗ್ ಬಹದ್ದೂರ್ ಮೊಘಲ್ ಅಧಿಕಾರಿಗಳಿಗೆ ಕೋಪವನ್ನುಂಟುಮಾಡಿದರು. ತೇಗ್ ಬಹದ್ದೂರ್ ನ್ನು ಸೆರೆ ಹಿಡಿದ ಮೊಘಲ್ ಅಧಿಕಾರಿಗಳು ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಅಥವಾ ಜೈಲಿನಲ್ಲಿರುವಾಗ ಚಿತ್ರಹಿಂಸೆ ನೀಡುವ ಆಯ್ಕೆಯನ್ನು ನೀಡಿದರು. ಬಹದ್ದೂರ್ ಅವರು ಮತಾಂತರಗೊಳ್ಳಲು ನಿರಾಕರಿಸಿದ್ದು ಅವರಿಗೆ ನಂತರ ಮರಣದಂಡನೆ ವಿಧಿಸಲಾಯಿತು.
ಸಿಖ್ ಗುರು ತೇಗ್ ಬಹದ್ದೂರ್ ಗ್ರಂಥ ಸಾಹಿಬ್‌ಗೆ ಹಲವಾರು ಸ್ತೋತ್ರಗಳನ್ನು ಬರೆದರು. ಅವರು 116 ಶಬ್ದಗಳು, 15 ರಾಗಗಳು ಮತ್ತು 782 ಸಂಯೋಜನೆಗಳನ್ನು ಮಾಡಿದ್ದಾರೆ, ಇವೆಲ್ಲವನ್ನೂ ಪವಿತ್ರ ಸಿಖ್ ಪುಸ್ತಕ ಗ್ರಂಥ ಸಾಹಿಬ್‌ನಲ್ಲಿ ಸೇರಿಸಲಾಗಿದೆ. ದೇವರು, ಮಾನವ ಸಂಬಂಧಗಳು, ಮಾನವ ಸ್ಥಿತಿ, ದೇಹ ಮತ್ತು ಮನಸ್ಸು, ಭಾವನೆಗಳು, ಸೇವೆ, ಸಾವು ಮತ್ತು ಘನತೆ, ಇತರ ವಿಷಯಗಳ ಮೇಲೆ ತೇಗ್ ಬರೆದಿದ್ದಾರೆ. ಗುರು ತೇಗ್ ಬಹದ್ದೂರ್ ಅವರು ಮೊಘಲ್ ಸಾಮ್ರಾಜ್ಯದಾದ್ಯಂತ ಪ್ರಯಾಣಿಸಿ ಸಿಖ್ ದೇವಾಲಯಗಳನ್ನು ನಿರ್ಮಿಸಲು ಸಹಾಯ ಮಾಡಿದರು.
ಗುರು ತೇಗ್ ಬಹದ್ದೂರ್ ಜಿ ಅವರ 400 ನೇ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ ಅವರು ಇಂದು ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಕ್ಕಳಿಗಾಗಿ ಕಾಮಿಕ್ ಮತ್ತು ಅನಿಮೇಷನ್ ಚಲನಚಿತ್ರವನ್ನು ದೆಹಲಿಯ ಕೆಂಪುಕೋಟೆಯಲ್ಲಿ ಪ್ರದರ್ಶಿಸಲಾಗುತ್ತದೆ.
Joined Hon HM @AmitShah ji on Day 1 of the 400th Parkash Purab celebrations of Shri Guru Tegh Bahadur Ji today at Red Fort in New Delhi.
Sh Amit Shah in his address spoke on the spiritual journey, life & sacrifice of Guru Tegh Bahadur Ji & how it continues to inspire generations pic.twitter.com/x9kzRl8m6W
— G Kishan Reddy (@kishanreddybjp) April 20, 2022
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನದ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದರು. ಒಂಬತ್ತನೇ ಸಿಖ್ ಗುರುಗಳು ಪ್ರಚಾರ ಮಾಡಿದ ಸಾರ್ವತ್ರಿಕ ಭ್ರಾತೃತ್ವ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಮನುಕುಲದ ಕಲ್ಯಾಣ ಎಂಬ ಶಾಶ್ವತ ಸಂದೇಶವನ್ನು ಅನುಸರಿಸುವಂತೆ ಮುಖ್ಯಮಂತ್ರಿಗಳು ಸಂದೇಶದಲ್ಲಿ ಜನರಿಗೆ ಕರೆ ನೀಡಿದರು. ಗುರುಗಳು ಬಾಲ್ಯದಿಂದಲೂ ಮಾನವೀಯತೆ ಮತ್ತು ಧಾರ್ಮಿಕ ಸಹಿಷ್ಣುತೆಗಾಗಿ ಹುತಾತ್ಮರಾಗುವವರೆಗೆ ಅವರ ಜೀವನ ಮತ್ತು ತತ್ವಶಾಸ್ತ್ರದ ಮೇಲೆ ಬೆಳಕು ಚೆಲ್ಲಿದ್ದು, “ಗುರು ಜಿಯವರ ಸರ್ವೋಚ್ಚ ತ್ಯಾಗವು ಜಗತ್ತಿಗೆ ಸ್ಫೂರ್ತಿಯ ದಾರಿದೀಪವಾಗಿ ಉಳಿಯುತ್ತದೆ” ಎಂದು ಮಾನ್ ಹೇಳಿದ್ದಾರೆ.
ਸ੍ਰੀ ਗੁਰੂ ਤੇਗ਼ ਬਹਾਦਰ ਜੀ ਦੇ ਪਾਵਨ ਪ੍ਰਕਾਸ਼ ਪੁਰਬ ਮੌਕੇ ਗੁਰਦੁਆਰਾ ਸ੍ਰੀ ਨਾਭਾ ਸਾਹਿਬ ਵਿਖੇ ਨਤਮਸਤਕ ਹੋਏ ਅਤੇ ਪੰਜਾਬ ਦੀ ਤਰੱਕੀ, ਖ਼ੁਸ਼ਹਾਲੀ ਤੇ ਭਾਈਚਾਰਕ ਸਾਂਝ ਲਈ ਅਰਦਾਸ ਕੀਤੀ।
ਗੁਰਦੁਆਰਾ ਨਾਭਾ ਸਾਹਿਬ ਉਹ ਪਵਿੱਤਰ ਅਸਥਾਨ ਹੈ, ਜਿਥੇ ਸ੍ਰੀ ਗੁਰੂ ਤੇਗ ਬਹਾਦਰ ਸਾਹਿਬ ਜੀ ਦਾ ਪਵਿੱਤਰ ਸੀਸ ਉਹਨਾਂ ਦੀ ਸ਼ਹੀਦੀ ਤੋਂ ਬਾਅਦ ਲਿਆਂਦਾ ਗਿਆ ਸੀ। pic.twitter.com/3VwvrhgmkW
— Bhagwant Mann (@BhagwantMann) April 21, 2022
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಸಿಖ್ ಗುರು ತೇಜ್ ಬಹದ್ದೂರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಗುರು ತೇಗ್ ಬಹದ್ದೂರ್ ಮತ್ತು ಗುರು ಗೋವಿಂದ್ ಸಿಂಗ್ ಅವರ ಅತ್ಯುನ್ನತ ತ್ಯಾಗದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಲು ಬಯಸುತ್ತೇನೆ. ದೇಶವು ಈಗ ಸ್ವಾತಂತ್ರ್ಯದ 75 ನೇ ವರ್ಷದಲ್ಲಿದೆ. ಗುರು ನಾನಕ್ ದೇವ್ ಅವರ 550 ನೇ ಜನ್ಮದಿನಾಚರಣೆ, ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನಾಚರಣೆ ಮತ್ತು ಗುರು ಗೋವಿಂದ್ ಸಿಂಗ್ ಅವರ 350 ನೇ ಜಯಂತಿಯನ್ನು ಆಯೋಜಿಸಿದ ಅದೃಷ್ಟಶಾಲಿ ಪ್ರಧಾನಿ ಮೋದಿ ಎಂದು ಶಾ ಹೇಳಿದರು.
Joined Hon HM @AmitShah ji on Day 1 of the 400th Parkash Purab celebrations of Shri Guru Tegh Bahadur Ji today at Red Fort in New Delhi.
Sh Amit Shah in his address spoke on the spiritual journey, life & sacrifice of Guru Tegh Bahadur Ji & how it continues to inspire generations pic.twitter.com/x9kzRl8m6W
— G Kishan Reddy (@kishanreddybjp) April 20, 2022
ನಾಳೆ, ಏಪ್ರಿಲ್ 21 ರಂದು ರಾತ್ರಿ 9:15 ಗಂಟೆಗೆ, ಶ್ರೀ ಗುರು ತೇಗ್ ಬಹದ್ದೂರ್ ಜಿಯವರ 400 ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಭಾಗವಹಿಸುವ ಗೌರವವನ್ನು ನಾನು ಹೊಂದಿದ್ದೇನೆ. ಐತಿಹಾಸಿಕ ಕೆಂಪು ಕೋಟೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಾಗುವುದು ಎಂದು ಮೋದಿ ನಿನ್ನೆ ಟ್ವೀಟ್ ಮಾಡಿದ್ದಾರೆ.
At 9:15 PM tomorrow, 21st April, l will have the honour of taking part in the 400th Parkash Purab celebrations of Sri Guru Teg Bahadur Ji. The programme will be held at the iconic Red Fort. A commemorative coin and postage stamp will also be released. https://t.co/zmejDPbhJz
— Narendra Modi (@narendramodi) April 20, 2022
ಮೊಘಲ್ ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯ ಸಂದರ್ಭದಲ್ಲಿ ಜನರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು. ಆ ಸಮಯದಲ್ಲಿ, ಗುರು ತೇಗ್ ಬಹದ್ದೂರ್ ಬಲವಂತದ ಮತಾಂತರವನ್ನು ವಿರೋಧಿಸಿ ಹೋರಾಟ ನಡೆಸಿದರು. 1675 ರಲ್ಲಿ ದೆಹಲಿಯಲ್ಲಿ ಗುರು ತೇಜ್ ಬಹದ್ದೂರ್ ಅವರಿಗೆ ಮರಣದಂಡನೆ ವಿಧಿಸಲಾಯಿತು.
1621 ರಲ್ಲಿ ಜನಿಸಿದ ತೇಗ್ ಬಹದ್ದೂರ್ ಗುರು ಹರಗೋವಿಂದ್ ಅವರ ಕಿರಿಯ ಮಗ. ಗುರು ತೇಗ್ ಬಹದ್ದೂರ್ ಅವರನ್ನು ಯೋಧ ಗುರು ಎಂದು ಸ್ಮರಿಸಲಾಗುತ್ತದೆ. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರು ವಿದ್ವಾಂಸ ಮತ್ತು ಕವಿಯೂ ಆಗಿದ್ದರು. ಸಿಖ್ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹಿಬ್‌ಗೆ ಹೆಚ್ಚಿನ ಕೊಡುಗೆಯನ್ನೂ ತೇಜ್ ಬಹದ್ದೂರ್ ನೀಡಿದ್ದಾರೆ.
ಮೊದಲನೆಯದಾಗಿ, ಮೊಘಲ್ ದೊರೆ ಔರಂಗಜೇಬ್ 1675 ರಲ್ಲಿ ಗುರು ತೇಜ್ ಬಹದ್ದೂರ್ ಅವರನ್ನು ಗಲ್ಲಿಗೇರಿಸಲು ಆದೇಶ ನೀಡಿದ ಸ್ಥಳ ಇದಾಗಿದೆ. ಎರಡನೆಯದಾಗಿ, ಕೆಂಪು ಕೋಟೆಯ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಸ್ಥಳ. ಸರ್ವಧರ್ಮ ಶಾಂತಿಯ ಸಂದೇಶವನ್ನು ಜನರಿಗೆ ತಲುಪಿಸಲು ಇದು ಸೂಕ್ತವಾಗಿದೆ’’ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
‘ಮೊದಲನೆಯದಾಗಿ, ಮೊಘಲ್ ದೊರೆ ಔರಂಗಜೇಬ್ 1675 ರಲ್ಲಿ ಗುರು ತೇಜ್ ಬಹದ್ದೂರ್ ಅವರನ್ನು ಗಲ್ಲಿಗೇರಿಸಲು ಆದೇಶ ನೀಡಿದ ಸ್ಥಳ ಇದಾಗಿದೆ. ಎರಡನೆಯದಾಗಿ, ಕೆಂಪು ಕೋಟೆಯ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಸ್ಥಳ. ಸರ್ವಧರ್ಮ ಶಾಂತಿಯ ಸಂದೇಶವನ್ನು ಜನರಿಗೆ ತಲುಪಿಸಲು ಇದು ಸೂಕ್ತವಾಗಿದೆ’’ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
Published On - 7:35 pm, Thu, 21 April 22