Corbevax Vaccine: ಕೊವಿಡ್ ಹೆಚ್ಚಳದ ನಡುವೆ 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಬಳಕೆಗೆ ಶಿಫಾರಸು
ಭಾರತವು ಪ್ರಸ್ತುತ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಎರಡು ಕೋವಿಡ್-19 ಲಸಿಕೆಗಳನ್ನು ನೀಡುತ್ತಿದೆ. ಕಾರ್ಬ್ವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ನೀಡಲಾಗುತ್ತಿದೆ.
ನವದೆಹಲಿ: ಭಾರತದಲ್ಲಿ ಮತ್ತೆ ಕೊವಿಡ್ ಕೇಸುಗಳು ಹೆಚ್ಚುತ್ತಿವೆ. ಹೀಗಾಗಿ, ಕೆಲವು ರಾಜ್ಯಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಇದರ ನಡುವೆ DCGIನ ವಿಷಯ ತಜ್ಞರ ಸಮಿತಿ (SEC) 5ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ಬಯೋ ಇ ಕಾರ್ಬ್ವ್ಯಾಕ್ಸ್ (Corbevax) ಲಸಿಕೆಯ ಬಳಕೆಯನ್ನು ಶಿಫಾರಸು ಮಾಡಿದೆ. 5ರಿಂದ 12 ವರ್ಷದ ಮಕ್ಕಳಲ್ಲಿ ಕಾರ್ಬ್ವ್ಯಾಕ್ಸ್ ಲಸಿಕೆಯ ಬಳಕೆಯನ್ನು ಚರ್ಚಿಸಲು ಸಮಿತಿ ಸಭೆ ಸೇರಿತ್ತು.
ನ್ಯೂಸ್ 18 ಈ ಹಿಂದೆ ವರದಿ ಮಾಡಿದಂತೆ 5-12 ವರ್ಷ ವಯಸ್ಸಿನ ಮಕ್ಕಳಲ್ಲಿ ಬಯೋ ಇ ಕಾರ್ಬ್ವ್ಯಾಕ್ಸ್ ಲಸಿಕೆಯ ಬಳಕೆಯನ್ನು ಚರ್ಚಿಸಲು ಸಮಿತಿಯು ಸಭೆ ನಡೆಸಿ, ಶಿಫಾರಸುಗಳನ್ನು ಈಗ SECಯಿಂದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಕಳುಹಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಅಂತಿಮ ಅನುಮೋದನೆ ನೀಡುವ ಮೊದಲು DCGIಯ ಅನುಮೋದನೆಯನ್ನು ಈಗ ಕಾಯಲಾಗುತ್ತಿದೆ.
ಕಾರ್ಬ್ವ್ಯಾಕ್ಸ್ ಅನ್ನು ಪ್ರಸ್ತುತ 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತಿದೆ. ಭಾರತವು ಪ್ರಸ್ತುತ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಎರಡು ಕೋವಿಡ್-19 ಲಸಿಕೆಗಳನ್ನು ನೀಡುತ್ತಿದೆ. ಭಾರತದಲ್ಲಿ ಮಕ್ಕಳ ಲಸಿಕೆಗಳ ಮೊದಲ ಹಂತದಲ್ಲಿ – ಈ ವರ್ಷ ಜನವರಿ 3ರಂದು ಪ್ರಾರಂಭವಾಯಿತು. ಕೋವಿಡ್ ಲಸಿಕೆಯನ್ನು 15-18 ವರ್ಷ ವಯಸ್ಸಿನ ಮಕ್ಕಳಿಗೆ ಘೋಷಿಸಲಾಯಿತು. ನಂತರ ಇದನ್ನು ಮಾರ್ಚ್ 16ರಿಂದ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ವಿಸ್ತರಿಸಲಾಯಿತು ಎಂದು ನ್ಯೂಸ್18 ವರದಿ ಮಾಡಿದೆ.
ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಅನ್ನು ಪ್ರಸ್ತುತ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಖಾಸಗಿ ಮತ್ತು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಆದರೆ. ಕಾರ್ಬ್ವ್ಯಾಕ್ಸ್ ಅನ್ನು 12-14 ವರ್ಷ ವಯಸ್ಸಿನ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ನೀಡಲಾಗುತ್ತಿದೆ. Corbevax ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ನೊಂದಿಗೆ ಇಂಟ್ರಾಮಸ್ಕುಲರ್ ಮಾರ್ಗದ ಮೂಲಕ ನಿರ್ವಹಿಸಲಾಗುತ್ತದೆ.
5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯಾಲಾಜಿಕಲ್ ಇ (Biological E) ಸಂಸ್ಥೆಯ ಕಾರ್ಬ್ವ್ಯಾಕ್ಸ್ (Corbevax) ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ಅನುಮೋದನೆಗಾಗಿ ವಿಷಯ ತಜ್ಞರ ಸಮಿತಿಗೆ ಕಂಪನಿಯಿಂದ ಡೇಟಾವನ್ನು ಸಲ್ಲಿಸಲಾಗಿತ್ತು. ಇತ್ತೀಚೆಗಷ್ಟೆ ವಿಷಯ ತಜ್ಞರ ಸಮಿತಿಯು 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಕಾರ್ಬ್ವ್ಯಾಕ್ಸ್ ಲಸಿಕೆಯನ್ನು 5ರಿಂದ 12 ವರ್ಷದೊಳಗಿನವರಿಗಾಗಿ ತಯಾರಿಸಲಾಗಿದೆ. ಈ ಲಸಿಕೆಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ಇರಲಿದೆ. ಇದು ಎರಡು ಡೋಸ್ನ ಕೊವಿಡ್ ಲಸಿಕೆಯಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಸುಮಾರು 5 ಕೋಟಿ ಬಯೋಲಾಜಿಕಲ್ ಇ ಕಂಪನಿಯ ಕಾರ್ಬ್ವ್ಯಾಕ್ಸ್ ಕೊವಿಡ್ ಲಸಿಕೆಗಳನ್ನು ಖರೀದಿಸಿದೆ. ಅವುಗಳನ್ನು ಕೆಲವು ರಾಜ್ಯಗಳಿಗೆ ತಲುಪಿಸಿದೆ.
ಇದನ್ನೂ ಓದಿ: Corbevax: 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಲು ಮನವಿ
Corbevax: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಲಸಿಕೆ ನೀಡಲು ಅನುಮತಿ