ಒಲಿಂಪಿಕ್ಸ್ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನಿನ್ನೆ ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಸಂಸ್ಕಾರಧಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ಆಗಮಿಸಿದ್ದ ಸುಮಾರು 75 ಶಾಲೆಗಳ ಮಕ್ಕಳ ಬಳಿ ಸಂವಾದ ನಡೆಸಿದರು. ಹಾಗೇ, ಜಾವಲಿನ್ ಎಸೆತದ ತರಬೇತಿ ಕೂಡ ನೀಡಿದರು. ಆಟಗಳನ್ನು ಆಡುವ ಮೂಲಕ ಸದಾ ಫಿಟ್ ಆಗಿರಿ ಎಂಬ ಸಲಹೆಯನ್ನೂ ಕೊಟ್ಟರು. ಇದೇವೇಳೆ ಮಕ್ಕಳೊಂದಿಗೆ ಸೇರಿ ಆರ್ಚರಿ, ವಾಲಿಬಾಲ್, ಜಾವಲಿನ್ ಎಸೆತದ ಆಟಗಳನ್ನು ಆಡಿದರು.
ಹೀಗೆ ಸಂಸ್ಕಾರಧಾಮ ಭೇಟಿ ನೀಡಿ ಮಕ್ಕಳೊಂದಿಗೆ ಕಾಲ ಕಳೆದು, ಅವರೊಂದಿಗೆ ಸಂವಾದ ನಡೆಸಿದ ನೀರಜ್ ಚೋಪ್ರಾರನ್ನು ಪ್ರಧಾನಿ ಮೋದಿ ಸರಣಿ ಟ್ವೀಟ್ ಮೂಲಕ ಹೊಗಳಿದ್ದಾರೆ. ಚಿಕ್ಕ ಮಕ್ಕಳ ಬಳಿ ಹೋಗಿ, ಅವರಲ್ಲಿ ಆಟ ಮತ್ತು ಫಿಟ್ನೆಸ್ ಅರಿವು ಮೂಡಿಸುವ ಮೂಲಕ ನೀರಜ್ ಚೋಪ್ರಾ ಒಂದು ಒಳ್ಳೆಯ ಉಪಕ್ರಮ ತೆಗೆದುಕೊಂಡಿದ್ದಾರೆ. ಇಂಥ ಪ್ರಯತ್ನಗಳನ್ನು ಮಾಡಿದರೆ ಮಕ್ಕಳಲ್ಲಿ ಆಟ ಮತ್ತು ವ್ಯಾಯಾಮದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, ನಿನ್ನೆ ನೀರಜ್ ಚೋಪ್ರಾ ತಾವು ಸಂಸ್ಕೃತಧಾಮಕ್ಕೆ ಭೇಟಿಕೊಟ್ಟಿದ್ದಾಗಿ ಮಾಡಿಕೊಂಡಿದ್ದ ಟ್ವೀಟ್ನ್ನೂ ರೀಟ್ವೀಟ್ ಮಾಡಿಕೊಂಡಿದ್ದಾರೆ.
This is a great initiative by @Neeraj_chopra1, to go among young students and motivate them on sports and fitness.
Such efforts will increase curiosity towards sports and exercising. https://t.co/CPlKE1hXJg
— Narendra Modi (@narendramodi) December 5, 2021
ಹಾಗೇ, ನೀರಜ್ ಚೋಪ್ರಾ ಮಕ್ಕಳಿಗೆ ಶೇಕ್ ಹ್ಯಾಂಡ್ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಡಿಡಿ ನ್ಯೂಸ್ ಶೇರ್ ಮಾಡಿಕೊಂಡಿತ್ತು. ಅದನ್ನು ಕೂಡ ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇದನ್ನು ನೋಡಿದರೆ ಖಂಡಿತ ನಿಮಗೆಲ್ಲರಿಗೂ ಸಂತೋಷವಾಗದೆ ಇರದು. ಇದೇ ಕ್ರಮ ಮುಂದುವರಿಸೋಣ ಮತ್ತು ನಮ್ಮ ಯುವಜನತೆ ಕ್ರೀಡೆಯಲ್ಲಿ ಮಿಂಚುವಂತೆ ಪ್ರೇರೇಪಿಸೋಣ ಎಂದಿದ್ದಾರೆ. ಹಾಗೇ, ನೀರಜ್ ಚೋಪ್ರಾ ಸಣ್ಣ ಬಾಲಕನಿಗೆ ಜಾವಲಿನ್ ಎಸೆತದ ಟ್ರೇನಿಂಗ್ ಕೊಟ್ಟ ವಿಡಿಯೋವೊಂದನ್ನು ಸಂಸ್ಕಾರಧಾಮ ಶೇರ್ ಮಾಡಿಕೊಂಡಿದ್ದು, ಅದನ್ನು ಕೂಡ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಅದ್ಭುತ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
This thread will make you happy.
Let us keep up the momentum and inspire our youth to shine on the games field. https://t.co/1lWgRitoZP
— Narendra Modi (@narendramodi) December 5, 2021
ಯುವಜನರಿಗೆ ವ್ಯಾಯಾಮ ಚಟುವಟಿಕೆಗಳು ಮತ್ತು ಸಮತೋಲಿತ ಆಹಾರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರಧಾನಿ ಪ್ರಾರಂಭಿಸಿರುವ, ಯುವಜನರು, ಮಕ್ಕಳೊಂದಿಗೆ ಕ್ರೀಡಾಪಟುಗಳ ಸಂವಾದ ಕಾರ್ಯಕ್ರಮ ನೀರಜ್ ಚೋಪ್ರಾ ಉದ್ಘಾಟಿಸಿದ್ದಾರೆ. ನಂತರ ಟ್ವೀಟ್ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.
Had a wonderful day at @sanskardham_In interacting with students, playing sports with them and speaking to them about the importance of exercise and diet in fitness. It’s great to see a school that offers such a balance of sports & academics. @PMOIndia @ianuragthakur https://t.co/4IjftkLpYr
— Neeraj Chopra (@Neeraj_chopra1) December 4, 2021
ಇದನ್ನೂ ಓದಿ: ಶ್ರೀ ವಿಷ್ಣುಸಹಸ್ರನಾಮದಲ್ಲಿ ಶ್ರೀ ರಾಮ ರಾಮ ರಾಮೇತಿ ಶ್ಲೋಕದ ಮಹಿಮೆ, ಇದೊಂದು ಮಂತ್ರ ಶ್ರೀ ವಿಷ್ಣುಸಹಸ್ರನಾಮಕ್ಕೆ ಸಮ ಹೇಗೆ?