ಶ್ರೀ ವಿಷ್ಣುಸಹಸ್ರನಾಮದಲ್ಲಿ ಶ್ರೀ ರಾಮ ರಾಮ ರಾಮೇತಿ ಶ್ಲೋಕದ ಮಹಿಮೆ, ಇದೊಂದು ಮಂತ್ರ ಶ್ರೀ ವಿಷ್ಣುಸಹಸ್ರನಾಮಕ್ಕೆ ಸಮ ಹೇಗೆ?

ಮಾರ್ಗಶಿರ ಮಾಸವು 2021ರ ಡಿಸೆಂಬರ್ 5ರಿಂದ ಆರಂಭವಾಗಿ 2022ರ ಜನವರಿ 2ಕ್ಕೆ ಮುಕ್ತಾಯಗೊಳ್ಳಲಿದೆ. ಈ ಮಾಸದಲ್ಲಿ ಶಂಖಪೂಜೆ, ನದಿ ಸ್ನಾನ, ದಾನ, ಭಜನೆ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ.

ಶ್ರೀ ವಿಷ್ಣುಸಹಸ್ರನಾಮದಲ್ಲಿ ಶ್ರೀ ರಾಮ ರಾಮ ರಾಮೇತಿ ಶ್ಲೋಕದ ಮಹಿಮೆ, ಇದೊಂದು ಮಂತ್ರ ಶ್ರೀ ವಿಷ್ಣುಸಹಸ್ರನಾಮಕ್ಕೆ ಸಮ ಹೇಗೆ?
ವಿಷ್ಣು
Follow us
TV9 Web
| Updated By: preethi shettigar

Updated on:Dec 06, 2021 | 7:06 AM

ಮಾರ್ಗಶಿರ ಮಾಸದಲ್ಲಿ ಶ್ರೀ ಕೃಷ್ಣ ಮತ್ತು ವಿಷ್ಣುವಿನ ಆರಾಧನೆ ಮಾಡಲಾಗುತ್ತೆ. ಮಾರ್ಗಶಿರ ಅಂದರೆ ಅಘನ ಮಾಸದಲ್ಲಿ ಕೃಷ್ಣ ಮತ್ತು ವಿಷ್ಣುವಿನ ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಮಾರ್ಗಶಿರ ಮಾಸವು 2021ರ ಡಿಸೆಂಬರ್ 5ರಿಂದ ಆರಂಭವಾಗಿ 2022ರ ಜನವರಿ 2ಕ್ಕೆ ಮುಕ್ತಾಯಗೊಳ್ಳಲಿದೆ. ಈ ಮಾಸದಲ್ಲಿ ಶಂಖಪೂಜೆ, ನದಿ ಸ್ನಾನ, ದಾನ, ಭಜನೆ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ.

“ಶ್ರೀ ವಿಷ್ಣುಸಹಸ್ರನಾಮದಲ್ಲಿ ಶ್ರೀ ರಾಮ ರಾಮ ರಾಮೇತಿ ಶ್ಲೋಕದ ಮಹಿಮೆ” ಅದೊಂದು ಆಶ್ರಮ ಅಲ್ಲಿ ಗುರುವೊಬ್ಬರು ಶಿಷ್ಯರಿಗೆ ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಹೇಳಿಕೊಡುತ್ತಿದ್ದರು ಫಲಶೃತಿಯಲ್ಲಿ ಬರುವ “ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ” ಎಂಬ ಶ್ಲೋಕವನ್ನು ಮೂರು ಬಾರಿ ಪಠಿಸಬೇಕೆಂದು, ಹೀಗೆ ಮೂರು ಬಾರಿ ಪಠಿಸುವುದರಿಂದ ಇಡೀ ಶ್ರೀವಿಷ್ಣುಸಹಸ್ರನಾಮವನ್ನು ಪಠಿಸಿದಂತಾಗುತ್ತದೆ ಎಂದು ಹೇಳಿದನು. ಆದರೆ ಶಿಷ್ಯವೃಂದದಲ್ಲಿದ್ದ ಒಂದು ಹುಡುಗನಿಗೆ ಮಾತ್ರ ಗುರುಗಳು ಹೇಳಿದ್ದು ಸರಿ ಎನಿಸಲಿಲ್ಲ ಹಾಗಾಗಿ ಗುರುಗಳಿಗೆ ಕೇಳಿಯೇಬಿಟ್ಟ! ಗುರುಗಳೆ ಅದು ಹೇಗೆ ಮೂರು ಬಾರಿ ಪಠಿಸುವುದು ಸಾವಿರಕ್ಕೆ ಸಮವಾಗಲು ಸಾಧ್ಯ? ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ ಎಂದನು. ಇದನ್ನು ಕೇಳಿದ ಗುರು ಮುಗುಳ್ನಕ್ಕರು.

ಗುರುಗಳು ಮಹಾಪಂಡಿತರಾಗಿದ್ದರು ಹಾಗಾಗಿ ಶಿಷ್ಯನ ಪ್ರಶ್ನೆಗೆ ಉತ್ತರಿಸಲು ಆ ಗುರುವಿಗೆ ಕಷ್ಟವಾಗಲಿಲ್ಲ. ಮಗೂ “ರಾಮ” ನಾಮ ಅತ್ಯಂತ ಸವಿಯಾದ ಪದವಾಗಿದೆ ಎಂದು ಶಿವ ವರ್ಣಿಸಿದ್ದಾನೆ ಇದನ್ನು ಮೂರು ಬಾರಿ ಜಪಿಸುವುದು ಶ್ರೀ ವಿಷ್ಣುಸಹಸ್ರನಾಮಗಳನ್ನು ಪಠಿಸಿದಂತೆ ಅದು ಹೇಗೆ ಎಂಬುದನ್ನು ನಾನು ವಿವರಿಸುತ್ತೇನೆ. ಈ ಶ್ಲೋಕದಲ್ಲಿ ಬರುವ ರಾಮ ಎಂಬ ಪದವನ್ನು ತೆಗೆದುಕೋ ಇದು ಸಂಸ್ಕೃತದ “ರಾ” ಹಾಗೂ “ಮ” ಎಂಬ ಅಕ್ಷರಗಳಿಂದ ಆದ ಪದವಾಗಿದೆ.

ಪದ ರ – ಯ,ರ, ಲ, ವ ವ್ಯಂಜನದಲ್ಲಿ ಬರುವ 2 ನೇ ಪದ ಮ – ಪ, ಫ, ಬ, ಭ, ಮ ವ್ಯಂಜನ 5 ನೇ ಪದ ಈ ರಾ ಹಾಗೂ ಮ ವನ್ನು ಸೇರಿಸಿದರೆ ಬರುವುದು “ರಾಮ” ಮೇಲೆ ಹೇಳಿದಂತೆ ರ- ಯ, ರ, ಲ, ವ ದಲ್ಲಿ ಬರುವ 2 ನೆ ವ್ಯಂಜನ ಹಾಗೂ “ಮ” ಪ, ಫ, ಬ, ಭ, ಮ ದ 5 ನೆ ವ್ಯಂಜನ ಈ 2 ಹಾಗೂ 5 ನ್ನು ಗುಣಿಸಿದರೆ ಬರುವುದು ಹತ್ತು.

ಈ ಶ್ಲೋಕದಲ್ಲಿ ರಾಮ ಪದ 3 ಬಾರಿ ಬರುತ್ತದೆ ಅಂದರೆ 2,5,2,5,2,5=10x10x10=1000 ವಾಗುತ್ತದೆ. ರಾಮನಾಮವನ್ನು 3 ಬಾರಿ ಪಠಿಸಿದರೆ ಅದು ಶ್ರೀ ವಿಷ್ಣುವಿನ ಸಹಸ್ರನಾಮ ಪಠಿಸಿದಂತೆ ಆಗುತ್ತದೆ ಎಂದು ಗುರು ವಿವರಿಸಿದರು. ಗುರುವಿನ ಈ ಉತ್ತರದಿಂದ ಶಿಷ್ಯನಿಗೆ ಸಂತೋಷವಾಯಿತಲ್ಲದೆ ಭಯಭಕ್ತಿಯಿಂದ ಶ್ರೀ ವಿಷ್ಣುಸಹಸ್ರನಾಮವನ್ನು ಕಲಿಯಲಾರಂಭಿಸಿದನು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ

Published On - 6:40 am, Mon, 6 December 21