Prime Minister Modi’s Childhood: ಪ್ರಧಾನಿ ಮೋದಿಯವರ ಬಾಲ್ಯದ ಕಥೆ, ಹೇಗಿತ್ತು ಗೊತ್ತ ಅವರ ತುಂಟಾಟ, ಚೇಷ್ಟೆಗಳು?

|

Updated on: Sep 16, 2023 | 6:26 PM

ಫೇಸ್‍ಬುಕ್ ಸಂಸ್ಥೆಯ ಮಾಲೀಕರಾದ ಮಾರ್ಕ್ ಜುಕರ್‌ಬರ್ಗ್‌ ಅವರು ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಮಾಡಿದ್ದರು. ಆ ವೇಳೆ ಮೋದಿಯವರು ಭಾವುಕರಾಗಿ ತಮ್ಮ ಬಾಲ್ಯದ ನೆನಪುಗಳ ಪುಟಗಳನ್ನು ಎಳೆ ಎಳೆಯಾಗಿ ತೆರೆದು ಜನರ ಮುಂದಿಟ್ಟಿದ್ದರು. ಅವರ ಮಾತುಗಳಲ್ಲೇ ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕೋಣ.

Prime Minister Modis Childhood: ಪ್ರಧಾನಿ ಮೋದಿಯವರ ಬಾಲ್ಯದ ಕಥೆ, ಹೇಗಿತ್ತು ಗೊತ್ತ ಅವರ ತುಂಟಾಟ, ಚೇಷ್ಟೆಗಳು?
ಪ್ರಧಾನಿ ನರೇಂದ್ರ ಮೋದಿ
Follow us on

ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿ ಪುಟ್ಟದೊಂದು ಅಂಗಡಿಯಲ್ಲಿ ಚಾಹಾ ಮಾರುತ್ತ ಇಡೀ ಪ್ರಪಂಚವನ್ನೇ ತನ್ನತ್ತ ನೋಡುವಂತೆ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಜೀವನ ಮುಳ್ಳಿನ ಹಾದಿಯಂತಾನೇ ಹೇಳಬಹುದು. ವಿಶ್ವದ ಪ್ರಭಾವಿ ನಾಯಕರಲ್ಲಿ ಸ್ಥಾನ ಪಡೆದಿರುವ ಮೋದಿಯವರು ಬಡತನ, ನೋವು, ಸಂಕಷ್ಟಗಳನ್ನೆಲ್ಲಾ ಮೆಟ್ಟಿನಿಂತು ಇಂದು ಇಡೀ ದೇಶ ತಮ್ಮನ್ನು ನೋಡಿ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಒಬ್ಬ ಚಾಯ್ ಮಾರುವ ಹುಡುಗ ಕೂಡ ದೇಶದ ಪ್ರಧಾನಿಯಾಗಬಹುದು. ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಉದಾಹರಣೆಯಾಗಿದ್ದಾರೆ. ಉಳಿ ಪೆಟ್ಟು ತಿಂದ ಕಲ್ಲು ಶಿಲೆಯಾದಂತೆ ಬಾಲ್ಯದಿಂದಲೇ ಕಷ್ಟದ ಹಾದಿಯಲ್ಲಿ ನಡೆದು ಬಂದ ಮೋದಿಯವರು ಯಶಸ್ವಿ ರಾಜಕಾರಣಿಯಾಗಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷಕ್ಕೆ ಅವರ ಬಾಲ್ಯದ ಜೀವನ ಹೇಗಿತ್ತು ಎಂಬ ಬಗ್ಗೆ ಅವರ ಮಾತುಗಳಲ್ಲೇ ತಿಳಿಯಿರಿ(Narendra Modi Childhood).

ಫೇಸ್‍ಬುಕ್ ಸಂಸ್ಥೆಯ ಮಾಲೀಕರಾದ ಮಾರ್ಕ್ ಜುಕರ್‌ಬರ್ಗ್‌ ಅವರು ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಮಾಡಿದ್ದರು. ಆ ವೇಳೆ ಮೋದಿಯವರು ಭಾವುಕರಾಗಿ ತಮ್ಮ ಬಾಲ್ಯದ ನೆನಪುಗಳ ಪುಟಗಳನ್ನು ಎಳೆ ಎಳೆಯಾಗಿ ತೆರೆದು ಜನರ ಮುಂದಿಟ್ಟಿದ್ದರು. ಅವರ ಮಾತುಗಳಲ್ಲೇ ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕೋಣ.

ಮೋದಿಯವರು ತಮ್ಮ ಬಾಲ್ಯದ ದಿನಗಳು ಹಾಗೂ ತಾಯಿಯ ಬಗ್ಗೆ ಮಾತನಾಡುವಾಗ ಅವರ ಕಣ್ಣಾಲೆಯಲ್ಲಿ ಕಣ್ಣೀರು ಸುಳಿದಾಡುತ್ತಿತ್ತು. ಭಾವುಕ ನುಡಿಯಲ್ಲಿ, “ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ನನ್ನ ತಾಯಿ ನೆರೆಹೊರೆಯ ಮನೆಗಳಲ್ಲಿ ಪಾತ್ರೆ ತೊಳೆಯುವುದು, ನೀರು ತುಂಬಿಸುವುದು ಸೇರಿದಂತೆ ಮನೆ ಕೆಲಸಗಳನ್ನು ಮಾಡಿ ನಮ್ಮನ್ನು ಸಾಕಿದ್ದಾರೆ. ಇದರಿಂದ ನೀವು ಊಹಿಸಬಹುದು ಒಬ್ಬ ತಾಯಿ ತನ್ನ ಮಕ್ಕಳನ್ನು ಬೆಳೆಸಲು ಏನೆಲ್ಲ ಮಾಡುತ್ತಾಳೆಂದು. ಇದರಿಂದಲೇ ತಿಳಿಯುತ್ತೆ ಆಕೆ ಎಂತಹ ಪರಿಸ್ಥಿತಿಗಳನ್ನು ಅನುಭವಿಸಿದ್ದಾಳೆಂದು ಎಂದು ಗಂಟಲು ಬಿಗಿಯಾದ ಧ್ವನಿಯಲ್ಲಿ ಮೋದಿಯವರು ಹೇಳಿದರು.

ಇದನ್ನೂ ಓದಿ: PM Modi’s Birthday; 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ 10 ಪ್ರಮುಖ ನಿರ್ಧಾರಗಳು

ಬಾಲ್ಯದಲ್ಲಿ ಮೋದಿ ತುಂಟಾಟ ಹೇಗಿತ್ತು?

ಇನ್ನು ಮತ್ತೊಂದು ಕಡೆ ಮೋದಿಯವರು ಬಾಲ್ಯದಲ್ಲಿ ತುಂಬಾ ಚೇಷ್ಟೆಗಳನ್ನು ಮಾಡುತ್ತಿದ್ದರಂತೆ. ಈ ಬಗ್ಗೆ ಅವರೇ ಕಾರ್ಯಕ್ರಮಯೊಂದರಲ್ಲಿ ತಿಳಿಸಿದ್ದಾರೆ. ನಾನು ಬಾಲ್ಯದಲ್ಲಿದ್ದಾಗ ಯಾರದಾದರು ಮದುವೆ ಕಾರ್ಯಕ್ರಮವಿದ್ದರೆ ಅಲ್ಲಿಗೆ ನನ್ನ ಸ್ನೇಹಿತರ ಜೊತೆ ಹೋಗುತ್ತಿದೆ. ಮಂಟಪದಲ್ಲಿ ಶೆಹನಾಯಿ ಊದುವವರ ಮುಂದೆ ನಿಂತು ಹುಣಸೆಹಣ್ಣು ತೋರಿಸುತ್ತಿದ್ದೆ. ಆಗ ಅವರ ಬಾಯಲ್ಲಿ ನೀರು ಬರುತ್ತಿತ್ತು. ವಾದ್ಯ ಊದಲು ಆಗುತ್ತಿರಲಿಲ್ಲ. ಆಗ ಅವರು ನನ್ನನ್ನು ಹೊಡೆಯಲು ನನ್ನ ಹಿಂದೆ ಓಡಿ ಬರುತ್ತಿದ್ದರು. ಇನ್ನೂ ಕೆಲವೊಮ್ಮೆ ಮದುವೆ ಸಮಾರಂಭಗಳಲ್ಲಿ ನೆರದಿದ್ದ ಜನರ ನಡುವೆ ಹೋಗಿ ಒಬ್ಬರ ಬಟ್ಟೆ ಇನ್ನೊಬ್ಬರ ಬಟ್ಟೆಯನ್ನು ಜೋಡಿಸಿ ಸ್ಟೆಪ್ಲರ್ ಪಿನ್ ಹೊಡೆಯುತ್ತಿದ್ದೆ. ಆದರೆ ಈಗಿನ ಮಕ್ಕಳು ಯಾರು ಈ ರೀತಿ ಮಾಡಬಾರದು ಎಂದು ಮಕ್ಕಳ ಜೊತೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮೋದಿಯವರು ಬಾಲ್ಯದಲ್ಲಿ ಮಾಡಿದ ತುಂಟಾಟ, ಚೇಷ್ಟೆಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳುತ್ತ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದರು.

ಅಪ್ಪನ ಸಹಾಯಕ್ಕೆ ಚಹಾ ಮಾರುತ್ತಿದ್ದ ಮೋದಿ

ನರೇಂದ್ರ ದಾಮೋದರ ದಾಸ್‌ ಮೋದಿ ಅವರು ಹುಟ್ಟಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು​ ಜನಿಸಿದ ಗುಜರಾತ್‌ನಲ್ಲಿ. 17 ಸೆಪ್ಟೆಂಬರ್, 1950 ರಂದು ಬಾಂಬೆ ರಾಜ್ಯದ (ಈಗಿನ ಗುಜರಾತ್) ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಜನಿಸಿದರು. ತಂದೆಯ ಹೆಸರು ದಾಮೋದರದಾಸ್ ಮುಲ್ಚಂದ್ ಮೋದಿ ಮತ್ತು ತಾಯಿಯ ಹೆಸರು ಹೀರಾಬೆನ್ ಮೋದಿ. ಮೋದಿ ಅವರ ಮುತ್ತಜ್ಜ ಮಂಗನ್‌ಲಾಲ್‌ ರಾಂಚೋಡ್‌ ದಾಸ್‌ ಅವರು ಹೊಸ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಹುಟ್ಟೂರು ತೊರೆದು ಮೆಹ್ಸಾನಾ ಜಿಲ್ಲೆಯ ವಡ್‌ನಗರಕ್ಕೆ ಬಂದು ನೆಲೆಸಿ ಅಲ್ಲೊಂದು ದಿನಸಿ ಅಂಗಡಿ ತೆರೆದಿದ್ದರು. ನರೇಂದ್ರ ಮೋದಿ ಅವರು ಹೀರಾಬೆನ್‌ ದಂಪತಿಯ 6 ಮಕ್ಕಳ ಪೈಕಿ ಮೂರನೆಯವರು. ನರೇಂದ್ರ ಮೋದಿಯವರು ತಮ್ಮ ಬಾಲ್ಯದ ದಿನಗಳಲ್ಲಿ ತಮ್ಮ ತಂದೆಗೆ ವಡ್ನಗರ ರೈಲು ನಿಲ್ದಾಣದಲ್ಲಿ ಚಹಾ ಮಾರಲು ಸಹಾಯ ಮಾಡುತ್ತಿದ್ದರು.

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಓಪನ್ ಲರ್ನಿಂಗ್‌ನಿಂದ ರಾಜಕೀಯ ವಿಜ್ಞಾನದಲ್ಲಿ ಬಿಎ ಮಾಡಿದ್ದಾರೆ. ನಂತರ ಗುಜರಾತ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 13 ನೇ ವಯಸ್ಸಿನಲ್ಲಿ, ನರೇಂದ್ರ ಮೋದಿಯವರು ಜಸೋದಾ ಬೆನ್ ಚಮನ್‌ಲಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ನಂತರ 17 ವರ್ಷದಲ್ಲಿ ಮದುವೆಯಾದರು. ಆದರೆ ಅವರು ಒಟ್ಟಿಗೆ ಸಂಸಾರ ಮಾಡಲಿಲ್ಲ. ಮದುವೆಯಾದ ಕೆಲವು ವರ್ಷಗಳ ನಂತರ ಮನೆ ತೊರೆದರು. ಬಳಿಕ ಎರಡು ವರ್ಷಗಳ ಕಾಲ ದೇಶ ಸುತ್ತಿದರು. 1970-71 ರ ದಶಕದಲ್ಲಿ ಅಂದರೆ ಅವರಿಗೆ ಸುಮಾರು 20 ವರ್ಷ ವಯಸ್ಸಿನಲ್ಲಿ ಅವರು ಆರ್‌ಎಸ್‌ಎಸ್‌ ಸೇರಿದರು. ಪೂರ್ಣಾವಧಿ ಪ್ರಚಾರಕರಾದರು. ವಿಶೇಷವೆಂದರೆ ಅಟಲ್ ಬಿಹಾರಿ ವಾಜಪೇಯಿ ಅವರಂತೆ ಮೋದಿಯವರು ರಾಜಕಾರಣಿ ಅಲ್ಲದೆ ಕವಿ ಕೂಡ. ಗುಜರಾತಿ, ಹಿಂದಿಯಲ್ಲಿ ಕೆಲವು ದೇಶಭಕ್ತಿಯ ಕವನಗಳನ್ನು ಬರೆದಿದ್ದಾರೆ. ಆಗಾಗ ಬರೆಯುತ್ತಿರುತ್ತಾರೆ.

ರಾಷ್ಟ್ರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ