‘ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ’: ಇಂಡಿಯಾ ಮೈತ್ರಿಕೂಟದ ಮಾಧ್ಯಮ ನೀತಿ ಕುರಿತು ಪವನ್ ಖೇರಾ

ಸಮಾಜದಲ್ಲಿ ದ್ವೇಷವನ್ನು ಹರಡುವ ಯಾರೊಂದಿಗೂ ನಾವು ಸಹಕರಿಸುವುದಿಲ್ಲ.ಅವರು ನಮ್ಮ ಶತ್ರುಗಳಲ್ಲ. ಯಾವುದೂ ಶಾಶ್ವತವಲ್ಲ, ನಾಳೆ ಅವರು ಮಾಡುತ್ತಿರುವುದು ಭಾರತಕ್ಕೆ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.

‘ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ’: ಇಂಡಿಯಾ ಮೈತ್ರಿಕೂಟದ ಮಾಧ್ಯಮ ನೀತಿ ಕುರಿತು ಪವನ್ ಖೇರಾ
ಪವನ್ ಖೇರಾ
Follow us
|

Updated on: Sep 16, 2023 | 6:50 PM

ದೆಹಲಿ ಸೆಪ್ಟೆಂಬರ್ 16: “ದ್ವೇಷ ತುಂಬಿದ” ಸುದ್ದಿಗಳು ಪ್ರಚೋದನಾಕಾರಿ ಚರ್ಚೆಗಳಲ್ಲಿ ಭಾಗವಹಿಸದಿರುವುದರ ಬಗ್ಗೆ ವಿಪಕ್ಷ ಮೈತ್ರಿಕೂಟ ಇಂಡಿಯಾದ (INDIA bloc) ನಿರ್ಧಾರವನ್ನು ಸಮರ್ಥಿಸಿಕೊಂಡ , ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ ಮತ್ತು ಪಕ್ಷದ ಹಿರಿಯ ನಾಯಕ ಪವನ್ ಖೇರಾ (Pawan Khera), ಪ್ರತಿಪಕ್ಷಗಳು ಕೆಲವು ವಿಭಾಗಗಳನ್ನು ಬಹಿಷ್ಕರಿಸುತ್ತಿಲ್ಲ ಅಥವಾ ನಿಷೇಧಿಸುತ್ತಿಲ್ಲ. ಇದು ಅಸಹಕಾರ ಚಳವಳಿ ಎಂದು ಹೇಳಿದ್ದಾರೆ.ಇಂದು (ಶನಿವಾರ) ಹೈದರಾಬಾದ್‌ನಲ್ಲಿ ನಡೆದ ಸಿಡಬ್ಲ್ಯುಸಿ ಸಭೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖೇರಾ ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ ಅಥವಾ ಕಪ್ಪು ಪಟ್ಟಿಗೆ ಸೇರಿಸಿಲ್ಲ” ಎಂದು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ದ್ವೇಷವನ್ನು ಹರಡುವ ಯಾರೊಂದಿಗೂ ನಾವು ಸಹಕರಿಸುವುದಿಲ್ಲ.ಅವರು ನಮ್ಮ ಶತ್ರುಗಳಲ್ಲ. ಯಾವುದೂ ಶಾಶ್ವತವಲ್ಲ, ನಾಳೆ ಅವರು ಮಾಡುತ್ತಿರುವುದು ಭಾರತಕ್ಕೆ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟವು ಇತ್ತೀಚಿಗೆ ತೆಗೆದುಕೊಂಡ ನಿರ್ಧಾರಗಳಲ್ಲಿ, 14 ಟಿವಿ ಆಂಕರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಇವರು “ದ್ವೇಷ ತುಂಬಿದ” ಸುದ್ದಿ ಚರ್ಚೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. 11 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಇಂಡಿಯಾ ಮೈತ್ರಿಕೂಟ, ನ್ಯೂಸ್ 18 ನ ಅಮನ್ ಚೋಪ್ರಾ, ಅಮಿಶ್ ದೇವಗನ್ ಮತ್ತು ಆನಂದ್ ನರಸಿಂಹನ್ ಒಳಗೊಂಡ ಕಾರ್ಯಕ್ರಮಗಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ. ಅದೇ ವೇಳೆ ಆಜ್ ತಕ್ ನ ಚಿತ್ರಾ ತ್ರಿಪಾಠಿ ಮತ್ತು ಸುಧೀರ್ ಚೌಧರಿ, ಗೌರವ್ ಸಾವಂತ್ ಮತ್ತು ಇಂಡಿಯಾ ಟುಡೆಯ ಶಿವ ಆರೂರ್, ಇಂಡಿಯಾ ಟಿವಿಯ ಪ್ರಾಚಿ ಪರಾಶರ್,  ರಿಪಬ್ಲಿಕ್ ಭಾರತದ ಅರ್ನಾಬ್ ಗೋಸ್ವಾಮಿ, ಭಾರತ್ 24ನ ರುಬಿಕಾ ಲಿಯಾಕತ್ , ಟೈಮ್ಸ್ ನೌ ನವಭಾರತ್‌ನ ನವಿಕ ಕುಮಾರ್ ಮತ್ತು ಸುಶಾಂತ್ ಸಿನ್ಹಾ, ಭಾರತ್ ಎಕ್ಸ್‌ಪ್ರೆಸ್‌ನ ಅದಿತಿ ತ್ಯಾಗಿ ಮತ್ತು ಡಿಡಿ ನ್ಯೂಸ್‌ನ ಅಶೋಕ್ ಶ್ರೀವಾಸ್ತವ್ ಇಂಡಿಯಾ ಮೈತ್ರಿಕೂಟ ಬಿಡುಗಡೆ ಮಾಡಿದ ಪಟ್ಟಿಯಲ್ಲಿರುವ ಇತರ ಹೆಸರುಗಳು.

ಈ ನಿರ್ಧಾರವು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಯಿತು. ಕಾಂಗ್ರೆಸ್ “ತುರ್ತು ಕಾಲದ ಮನಸ್ಥಿತಿ” ಹೊಂದಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿಹಿಂಸಾತ್ಮಕ ಘಟನೆಗಳಿಂದ ಭಾರತದ ಪ್ರಗತಿಪರ, ಜಾತ್ಯತೀತ ಚಿತ್ರಣ ಹಾಳಾಗಿದೆ, ಬಿಜೆಪಿ ಬೆಂಕಿಗೆ ತುಪ್ಪ ಸುರಿಯುತ್ತಿದೆ: ಸಿಡಬ್ಲ್ಯುಸಿ ಸಭೆಯಲ್ಲಿ ಖರ್ಗೆ

”ಮಾಧ್ಯಮಗಳು ಪ್ರಜಾಪ್ರಭುತ್ವದ ರಕ್ಷಕರು.  ಸರ್ಕಾರದ ತಪ್ಪುಗಳನ್ನು ತಿದ್ದುವುದು ಮಾಧ್ಯಮಗಳ ಪಾತ್ರ. ಹಾಗೆಯೇ ಪ್ರತಿಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳು ಬೆಂಬಲ ನೀಡುತ್ತಿದ್ದವು. ಆದರೆ ದುರದೃಷ್ಟವಶಾತ್ ಕೆಲವು ಮಾಧ್ಯಮಗಳು ಸರ್ಕಾರವನ್ನು ಬೆಂಬಲಿಸಿ ವಿರೋಧ ಪಕ್ಷಗಳ ದನಿಯನ್ನು ನಾಶಮಾಡುತ್ತಿವೆ. ಇದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರಾಯೋಜಿತ ಪತ್ರಿಕೋದ್ಯಮವಾಗಿದೆ, ಅದಕ್ಕಾಗಿಯೇ ಇಂಡಿಯಾ ಮೈತ್ರಿಕೂಟ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ