ದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಲಾಕ್ಡೌನ್ ರಿಲೀಫ್ ಕೊಟ್ಟಿದ್ದೇ ಕೊಟ್ಟಿದ್ದು, ಕೊರೊನಾ ಬಾಂಬ್ ಮಹಾಸ್ಫೋಟವಾಗ್ತಿದೆ. ಭಾರತದಲ್ಲಿ ಸೋಂಕಿನ ಸುನಾಮಿ ಒಂದೂ ಲಕ್ಷದ ಗಡಿದಾಟಿ ಮುನ್ನುಗ್ತಿದೆ. ಲಕ್ಷದ ಲಕ್ಷ್ಯ ದಾಟಿ ಹೆಮ್ಮಾರಿ ಹೆಜ್ಜೆ ಇಡ್ತಿರೋ ಏಟಿಗೆ ಎಲ್ರೂ ಅದುರಿ ಹೋಗಿದ್ದಾರೆ. ಕೊರೊನಾ ಆರ್ಭಟದಿಂದ ಟೆನ್ಷನ್ ಆಗಿರೋ ಪ್ರಧಾನಿ ನರೇಂದ್ರ ಮೋದಿ ಇವತ್ತು 11 ಗಂಟೆಗೆ ಮಹತ್ವದ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ.
ಇಂದು ಪ್ರಧಾನಿ ಮೋದಿ ಮಹತ್ವದ ಸಚಿವ ಸಂಪುಟ ಸಭೆ!
ಯೆಸ್.. ದೇಶದಲ್ಲಿ ಕೊರೊನಾ ಕಂಟ್ರೋಲ್ಗೆ ಬಂತು. ಲಾಕ್ಡೌನ್ ಮಾಡಿದ್ಮೇಲೆ ಹೆಮ್ಮಾರಿ ವೈರಸ್ ಆಟ ಅಡಗಿ ಹೋಯ್ತು ಅಂತ ಎಲ್ರೂ ಊಹಿಸಿದ್ರೇನೋ. ಆದ್ರೆ, ಪ್ರಧಾನಿ ಮೋದಿ ನಾಲ್ಕನೇ ಹಂತದ ಲಾಕ್ಡೌನ್ ರಿಲೀಫ್ ನೀಡ್ತಿದ್ದಂತೆ ಕೊರೊನಾ ಅಟ್ಟಹಾಸಗೈತಿದೆ.
ದೇಶದಲ್ಲಿ ಸೊಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು ಕೇಂದ್ರ ಸರ್ಕಾರಕ್ಕೆ ಆತಂಕ ಹೆಚ್ಚಿಸಿದೆ. ಲಾಕ್ಡೌನ್ ಮಾಡಿದ್ರೆ ಆರ್ಥಿಕ ಹೊಡೆತ, ಲಾಕ್ಡೌನ್ ಮಾಡದಿದ್ರೆ ಕ್ರೂರಿ ಅಟ್ಟಹಾಸ ಇದೆರಡರ ಮಧ್ಯೆ ಸಿಲುಕಿರೋ ಮೋದಿ ಅಂಡ್ ಟೀಂ ತಲೆಕೆಡಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ಕರೆದಿದ್ದು, ಕುತೂಹಲ ಹೆಚ್ಚಿಸಿದೆ. ಇನ್ನು ಕ್ಯಾಬಿನೆಟ್ ಮೀಟಿಂಗ್ನಲ್ಲಿ ಏನೆಲ್ಲಾ ಚರ್ಚೆ ನಡೀಬೋದು.. ಕೊರೊನಾ ಒದ್ದೋಡಿಸೋಕೆ ಯಾವ್ಯಾವ ಮಹತ್ವದ ನಿರ್ಣಯ ಕೈಗೊಳ್ಬೋದು ಅನ್ನೋದನ್ನ ನೋಡೋದಾದ್ರೆ.
ಕ್ಯಾಬಿನೆಟ್ ಸಭೆಯಲ್ಲಿ ಏನೇನ್ ಚರ್ಚೆ?
ದೇಶದಲ್ಲಿ ಆರ್ಭಟಿಸುತ್ತಿರೋ ಕೊರೊನಾ ವೈರಸ್ ನಿಯಂತ್ರಣದ ಬಗ್ಗೆ ಕ್ಯಾಬಿನೆಟ್ ಮಿಟಿಂಗ್ನಲ್ಲಿ ಚರ್ಚೆ ನಡೆಸೋ ಸಾಧ್ಯತೆ ಇದೆ. ಈಗಾಗಲೇ ಘೋಷಿಸಿರೋ 20 ಲಕ್ಷ ಕೋಟಿ ಪ್ಯಾಕೇಜ್, ಹಾಗೂ ಯೋಜನೆಗಳಿಗೆ ಹಣ ಬಿಡುಗಡೆ ಬಗ್ಗೆ ಚರ್ಚಿಸೋ ಸಾಧ್ಯತೆ ಇದೆ.
ಎಲ್ಲಾ ಯೋಜನೆ ಮುಂದುವರಿಸುವ ಪ್ರಕ್ರಿಯೆಗಳು ಹೇಗಿರ್ಬೇಕು ಅನ್ನೋ ಬಗ್ಗೆ ಪ್ಲ್ಯಾನ್ ಮಾಡ್ಬೋದು. ಅಲ್ದೇ, ಲಾಕ್ಡೌನ್ನಿಂದ ಕಂಗೆಟ್ಟಿರೋ ವಲಸೆ ಕಾರ್ಮಿಕರ ಸಮಸ್ಯೆಗಳನ್ನ ಬಗೆಹರಿಸೋಕೆ ಮಾಸ್ಟರ್ ಪ್ಲ್ಯಾನ್ ರೂಪಿಸೋ ಬಗ್ಗೆ ಚರ್ಚಿಯಾಗ್ಬೋದು. ಕೊರೊನಾ ಜೊತೆಜೊತೆಗೆ ಆತಂಕ ಹೆಚ್ಚಿಸಿರೋ ಅಂಫಾನ್ ಸೈಕ್ಲೋನ್ ಕಂಟ್ರೋಲ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮೀಟಿಂಗ್ನಲ್ಲಿ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ.
ಒಟ್ನಲ್ಲಿ ಕೊರೊನಾ ಕಟ್ಟಿಹಾಕೋಕೆ ಪ್ರಧಾನಿ ಮೋದಿ ಮತ್ತೊಂದು ಮೆಗಾ ಪ್ಲ್ಯಾನ್ ಮಾಡೋಕೆ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಇಂದಿನ ಸಂಪುಟ ಸಭೆಯಲ್ಲಿ ಏನೇನ್ ನಿರ್ಣಯ ಕೈಗೊಳ್ತಾರೆ ಅನ್ನೋದೆ ಇಂಟರೆಸ್ಟಿಂಗ್.
Published On - 9:26 am, Wed, 20 May 20