ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಮಹಾಕಾಲ್ ಕಾರಿಡಾರ್ ಉದ್ಘಾಟಿಸಿದ ನರೇಂದ್ರ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 11, 2022 | 8:08 PM

'ಶ್ರೀ ಮಹಾಕಾಲ್ ಲೋಕ' ಕಾರಿಡಾರ್‌ನ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಮಹಾಕಾಲ್ ಕಾರಿಡಾರ್ ಉದ್ಘಾಟಿಸಿದ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ಮಧ್ಯಪ್ರದೇಶದ ಉಜ್ಜೈನಿ ನಗರದಲ್ಲಿ ‘ಶ್ರೀ ಮಹಾಕಾಲ್ ಲೋಕ’ ಕಾರಿಡಾರ್‌ನ (Mahakal Lok corridor) ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಸಂಜೆ ರಾಷ್ಟ್ರಕ್ಕೆ ಸಮರ್ಪಿಸಿದರು. ಅವರೊಂದಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇದ್ದರು. ‘ಶ್ರೀ ಮಹಾಕಾಲ್ ಲೋಕ’ ಕಾರಿಡಾರ್‌ನ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಧೋತಿ ಮತ್ತು ಗಮ್ಚಾ ಧರಿಸಿದ್ದ ಮೋದಿ ಅವರು ಸಂಜೆ 6 ಗಂಟೆ ಸುಮಾರಿಗೆ ಮಹಾಕಾಲ್ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿದರು.

ಇಲ್ಲಿನ ಮಹಾಕಾಳೇಶ್ವರ ದೇವಸ್ಥಾನದಲ್ಲಿ 900 ಮೀಟರ್ ಉದ್ದದ ಮಹಾಕಾಲ್ ಲೋಕ ಕಾರಿಡಾರ್ ನಿರ್ಮಿಸಲಾಗಿದೆ. ಮಹಾಕಾಲ್ ಲೋಕ ಯೋಜನೆಯ ವೆಚ್ಚ 856 ಕೋಟಿ ರೂ ಆಗಿದ್ದು  ಮೊದಲ ಹಂತದಲ್ಲಿ 351 ಕೋಟಿ ರೂ.ಗೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾಕಾಲ್ ಲೋಕವನ್ನು ರಾಷ್ಟ್ರಕ್ಕೆ ಸಮರ್ಪಿಸಲು ಮತ್ತು ಶಿವಲಿಂಗದ ಪ್ರತಿಕೃತಿಯನ್ನು ಅನಾವರಣಗೊಳಿಸಲು ಮೋದಿ ರಿಮೋಟ್ ಬಟನ್ ಒತ್ತಿದರು.

ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ ಅಭಿವೃದ್ಧಿ ಯೋಜನೆಯು ಶಿವನಿಗೆ ಸಮರ್ಪಿತವಾಗಿರುವ ಮತ್ತು ಭಾರತದಲ್ಲಿನ 12 ಜ್ಯೋತಿರ್ಲಿಂಗಗಳಲ್ಲಿ ಒಂದನ್ನು (ಶಿವನ ಪ್ರತಿನಿಧಿಸುವ) ಹೊಂದಿರುವ ದೇವಾಲಯಕ್ಕೆ ಭೇಟಿ ನೀಡುವವರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುತ್ತದೆ.

 

ಕಾರಿಡಾರ್ ಸುಮಾರು 108 ಕಲಾತ್ಮಕವಾಗಿ ಅಲಂಕೃತವಾದ ಸ್ತಂಭಗಳನ್ನು ಹೊಂದಿದೆ, ಇದು ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ಮಾಡಲ್ಪಟ್ಟಿದೆ, ಇದು ಆನಂದ್ ತಾಂಡವ್ ಸ್ವರೂಪ (ಶಿವನ ನೃತ್ಯ ರೂಪ), 200 ಪ್ರತಿಮೆಗಳು ಮತ್ತು ಶಿವ ಮತ್ತು ಶಕ್ತಿ ದೇವತೆಯ ಭಿತ್ತಿಚಿತ್ರಗಳನ್ನು ಚಿತ್ರಿಸುತ್ತದೆ.

 

ಕಾರಿಡಾರ್ ಯೋಜನೆಯನ್ನು ಉದ್ಘಾಟಿಸುವ ಮುನ್ನ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು

Published On - 7:36 pm, Tue, 11 October 22