Gold Price Today: ಚಿನ್ನದ ಬೆಲೆ ಒಂದೇ ದಿನದಲ್ಲಿ 770 ರೂ. ಇಳಿಕೆ; ಬೆಳ್ಳಿ ದರವೂ ಭಾರೀ ಕುಸಿತ
Silver Price Today: ಬೆಳ್ಳಿ ದರ ಇಂದು 600 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 59,500 ರೂ. ಇದ್ದುದು ಇಂದು 58,900 ರೂ. ಆಗಿದೆ.
Gold Price on 12th October 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಕುಸಿತವಾಗುತ್ತಲೇ ಇದೆ. ಇಂದು ಚಿನ್ನದ ದರ 770 ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಇಂದು 600 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂ. ಇದ್ದುದು ಇಂದು 46,900 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,930 ರೂ. ಇದ್ದುದು 51,160 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,400 ರೂ. ಮುಂಬೈ- 46,900 ರೂ, ದೆಹಲಿ- 47,050 ರೂ, ಕೊಲ್ಕತ್ತಾ- 46,900 ರೂ, ಬೆಂಗಳೂರು- 46,950 ರೂ, ಹೈದರಾಬಾದ್- 46,900 ರೂ, ಕೇರಳ- 46,900 ರೂ, ಪುಣೆ- 46,930 ರೂ, ಮಂಗಳೂರು- 46,950 ರೂ, ಮೈಸೂರು- 46,950 ರೂ. ಆಗಿದೆ.
ಇದನ್ನೂ ಓದಿ: Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಕುಸಿತ; ಒಂದೇ ದಿನದಲ್ಲಿ ಬೆಳ್ಳಿ ದರ 1,300 ರೂ. ಇಳಿಕೆ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 51,710 ರೂ, ಮುಂಬೈ- 51,160 ರೂ, ದೆಹಲಿ- 52,330 ರೂ, ಕೊಲ್ಕತ್ತಾ- 51,160 ರೂ, ಬೆಂಗಳೂರು- 51,220 ರೂ, ಹೈದರಾಬಾದ್- 51,160 ರೂ, ಕೇರಳ- 51,160 ರೂ, ಪುಣೆ- 51,190 ರೂ, ಮಂಗಳೂರು- 51,220 ರೂ, ಮೈಸೂರು- 51,220 ರೂ. ಆಗಿದೆ.
ಇಂದಿನ ಬೆಳ್ಳಿಯ ದರ: ಬೆಳ್ಳಿ ದರ ಇಂದು 600 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 59,500 ರೂ. ಇದ್ದುದು ಇಂದು 58,900 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 64,000 ರೂ, ಮೈಸೂರು- 64,000 ರೂ., ಮಂಗಳೂರು- 64,000 ರೂ., ಮುಂಬೈ- 58,900 ರೂ, ಚೆನ್ನೈ- 64,000 ರೂ, ದೆಹಲಿ- 58,900 ರೂ, ಹೈದರಾಬಾದ್- 64,000 ರೂ, ಕೊಲ್ಕತ್ತಾ- 58,900 ರೂ. ಆಗಿದೆ.