ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ (Jill Biden) ಅವರಿಗೆ ಭಾರತದಿಂದ ಹಲವಾರು ವಿಶಿಷ್ಟ ಉಡುಗೊರೆಗಳನ್ನು ನೀಡಿದ್ದಾರೆ. ಅದರಲ್ಲಿ ಒಂದು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. ಅದೇನಪ್ಪಾ ಅಂದರೆ, ಬೈಡನ್ ಪತ್ನಿ ಜಿಲ್ ಬೈಡೆನ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ 7.5 ಕ್ಯಾರೆಟ್, ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ ಸಿದ್ಧಪಡಿಸಿದ ಫಳ ಫಳ ಹೊಳೆಯುವ ವಜ್ರ. ಇದನ್ನು ಸೂರತ್ ಮೂಲದ ವಜ್ರ ತಯಾರಿಕಾ ಕಂಪನಿ ತಯಾರಿಸಿದೆ. ವಜ್ರ ತಯಾರಿಕಾ ಘಟಕದ ಮಾಲೀಕ ಮುಖೇಶ್ ಪಟೇಲ್ ಪ್ರಧಾನಿ ಮೋದಿ ಅವರ ಆಪ್ತ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಪ್ರಧಾನಿ ಜೊತೆಗಿರುವ ಹಲವಾರು ಫೋಟೊಗಳೂ ಇವೆ.
ಸೂರತ್‌ನ ಉದ್ಯಮಿ ಮುಖೇಶ್ ಪಟೇಲ್ ಅವರು ಡೈಮಂಡ್ ಫ್ಯಾಕ್ಟರಿ ಗ್ರೀನ್ ಲ್ಯಾಬ್ ಡೈಮಂಡ್ ಅನ್ನು ಹೊಂದಿದ್ದಾರೆ. ಇದು ನಗರದ ಇಚ್ಛಾಪುರ ಪ್ರದೇಶದಲ್ಲಿದೆ. ಲ್ಯಾಬ್‌ನಲ್ಲಿ ಬೆಳೆದ ವಜ್ರವನ್ನು ಪ್ರಧಾನಿ ಮೋದಿ ಜಿಲ್ ಬೈಡನ್‌ಗೆ ಉಡುಗೊರೆಯಾಗಿ ನೀಡಿರುವುದು ಸೂರತ್‌ಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯ ಎಂದು ಅವರ ಪುತ್ರ ಸ್ಮಿತ್ ಪಟೇಲ್ ಹೇಳಿದ್ದಾರೆ.
PM Narendra Modi gifts a lab-grown 7.5-carat green diamond to US First Lady Dr Jill Biden
The diamond reflects earth-mined diamonds’ chemical and optical properties. It is also eco-friendly, as eco-diversified resources like solar and wind power were used in its making. pic.twitter.com/5A7EzTcpeL
— ANI (@ANI) June 22, 2023
ಸೂರತ್‌ನಲ್ಲಿ ತಯಾರಿಸಲಾದ ಈ ವಜ್ರವು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ್ ಭಾರತ್’ ಉಪಕ್ರಮದ ಭಾಗವಾಗಿದೆ. ಅದನ್ನು ಸೂರತ್‌ನಲ್ಲೇ ಕಟ್ ಮಾಡಿ ಪಾಲಿಶ್ ಮಾಡಲಾಗಿದೆ. ಸೂರತ್‌ನಿಂದ ಲ್ಯಾಬ್ ನಿರ್ಮಿತ ವಜ್ರಗಳು ಈಗ ಪ್ರಪಂಚದಾದ್ಯಂತ ರಫ್ತಾಗುತ್ತಿವೆ.
VIDEO | It was a proud moment for Surat’s artisans on Thursday when PM Modi gifted a 7.5 carat diamond to US First Lady Jill Biden at the White House. The green diamond that the PM gifted to Jill Biden was a lab-grown one, made in Surat.
Talking to PTI in Surat, Asmit Patel, the… pic.twitter.com/MRDz9dDSwd
— Press Trust of India (@PTI_News) June 22, 2023
ಪ್ರಧಾನಿ ಮೋದಿಯವರು ಜಿಲ್ ಬೈಡನ್‌ಗೆ ಉಡುಗೊರೆಯಾಗಿ ನೀಡಿದ ಹಸಿರು ವಜ್ರವು ಭೂಮಿಯ ಗಣಿಗಾರಿಕೆಯ ವಜ್ರಗಳ ರಾಸಾಯನಿಕ ಮತ್ತು ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಈ ವಜ್ರ ಪರಿಸರ ಸ್ನೇಹಿ. ಸೌರ ಮತ್ತು ಪವನ ಶಕ್ತಿಯಂತಹ ಪರಿಸರ-ವೈವಿಧ್ಯ ಸಂಪನ್ಮೂಲಗಳನ್ನು ಇದರ ತಯಾರಿಕೆಯಲ್ಲಿ ಬಳಸಲಾಗಿದೆ.ಇದರ ಮೌಲ್ಯವನ್ನು ಅಂದಾಜಿಸಲಾಗುವುದಿಲ್ಲ. ಆದರೆ ಅದರ ಗಾತ್ರ7.5 ಕ್ಯಾರೆಟ್. ಇದು ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ.
ಇದನ್ನೂ ಓದಿ: Photos: ಬೈಡನ್ ದಂಪತಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟ ಪ್ರಧಾನಿ ಮೋದಿ
ಹಸಿರು ವಜ್ರವನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತುಂಬ ಜಾಗ್ರತೆಯಿಂದ ಕೆತ್ತಲಾಗಿದೆ. ಇದು ಪ್ರತಿ ಕ್ಯಾರೆಟ್‌ಗೆ ಕೇವಲ 0.028 ಗ್ರಾಂ ಕಾರ್ಬನ್ ಅನ್ನು ಹೊರಸೂಸುತ್ತದೆ. ಇದು ಜೆಮಲಾಜಿಕಲ್ ಲ್ಯಾಬ್, IGI ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಇದು 4C ಗಳ ಮೂಲಕ ಅಂದರೆ ಕಟ್, ಬಣ್ಣ (colour), ಕ್ಯಾರೆಟ್ (carat ) ಮತ್ತು ಪರಿಶುದ್ಧ (clarity) ಶ್ರೇಷ್ಠತೆಯ ಲಕ್ಷಣಗಳನ್ನು ಹೊಂದಿದೆ.
ಲ್ಯಾಬ್-ವಜ್ರ-ತಯಾರಿಕೆ ಉದ್ಯಮವು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ