ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ; ಅಕ್ಟೋಬರ್ 1ರಿಂದಲೇ ಜಾರಿ

|

Updated on: Sep 27, 2024 | 7:41 PM

ಹೆಚ್ಚಾಗುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸಲು ಕಾರ್ಮಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ವೇರಿಯಬಲ್ ಡಿಯರ್ನೆಸ್ ಭತ್ಯೆಯನ್ನು (ವಿಡಿಎ) ಪರಿಷ್ಕರಿಸುವ ಮೂಲಕ ಅದರಲ್ಲೂ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಳ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ; ಅಕ್ಟೋಬರ್ 1ರಿಂದಲೇ ಜಾರಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೇಂದ್ರ ಸರ್ಕಾರವು ಕಾರ್ಮಿಕರ ಕನಿಷ್ಟ ವೇತನವನ್ನು 1,035ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶ ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿದೆ. ಅಸಂಘಟಿತ ನೌಕರರನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೇತನ ದರಕ್ಕೆ ಪರಿಷ್ಕರಣೆ ಮಾಡುವ ಮೂಲಕ ಕನಿಷ್ಠ ವೇತನ ದರವನ್ನು ಹೆಚ್ಚಿಸಿದೆ. ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಹೊಸ ಪರಿಷ್ಕೃತ ಕನಿಷ್ಠ ವೇತನವು ಕಟ್ಟಡ ನಿರ್ಮಾಣ, ಲೋಡಿಂಗ್ ಮತ್ತು ಅನ್‌ಲೋಡಿಂಗ್, ವಾಚ್ ಮತ್ತು ವಾರ್ಡ್, ಸ್ವೀಪಿಂಗ್, ಕ್ಲೀನಿಂಗ್, ಹೌಸ್‌ಕೀಪಿಂಗ್, ಗಣಿಗಾರಿಕೆ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ.

ಈ ಹೊಸ ಪರಿಷ್ಕರಣೆಯ ಪ್ರಕಾರ, ನಿರ್ಮಾಣ, ಗುಡಿಸುವುದು, ಸ್ವಚ್ಛಗೊಳಿಸುವಿಕೆ, ಲೋಡಿಂಗ್ ಮತ್ತು ಅನ್‌ಲೋಡಿಂಗ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ “ಎ” ಪ್ರದೇಶದಲ್ಲಿ ಕನಿಷ್ಠ ಕೂಲಿ ದರಗಳು ದಿನಕ್ಕೆ 783 ರೂ. (ತಿಂಗಳಿಗೆ ರೂ 20,358)ಆಗಿರುತ್ತದೆ. ಅರೆ ಕೌಶಲ್ಯದವರಿಗೆ ದಿನಕ್ಕೆ 868 ರೂ. (ತಿಂಗಳಿಗೆ 22,568 ರೂ.), ನುರಿತ, ಕ್ಲೆರಿಕಲ್ ಮತ್ತು ವಾಚ್​ಗಳಿಗೆ ದಿನಕ್ಕೆ 954 ರೂ. (ತಿಂಗಳಿಗೆ ರೂ. 24,804) ಮತ್ತು ಹೆಚ್ಚು ನುರಿತ ಮತ್ತು ಶಸ್ತ್ರಾಸ್ತ್ರ ಹೊಂದಿರುವ ವಾಚ್ ಮತ್ತು ವಾರ್ಡ್‌ಗಳಿಗೆ ದಿನಕ್ಕೆ 1,035 ರೂ. (ತಿಂಗಳಿಗೆ 26,910 ರೂ.) ನೀಡಲಾಗುವುದು.

ಇದನ್ನೂ ಓದಿ: ಮೋದಿ ದೇವರಲ್ಲ; ರಾಜೀನಾಮೆ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಮೊದಲ ವಿಧಾನಸಭಾ ಭಾಷಣ

ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ 6 ತಿಂಗಳ ಸರಾಸರಿ ಹೆಚ್ಚಳದ ಆಧಾರದ ಮೇಲೆ ಕೇಂದ್ರ ಸರ್ಕಾರವು ವರ್ಷಕ್ಕೆ 2 ಬಾರಿ VDA ಅನ್ನು ಪರಿಷ್ಕರಿಸುತ್ತದೆ. ಏಪ್ರಿಲ್ 1 ಮತ್ತು ಅಕ್ಟೋಬರ್ 1ರಿಂದ ಈ ಪರಿಷ್ಕರಣೆ ಜಾರಿಗೆ ಬರುತ್ತದೆ.

ಈ ಪರಿಷ್ಕರಣೆಯು ಕಾರ್ಮಿಕರಿಗೆ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ. ಹೊಸ ಪರಿಷ್ಕರಣೆಯ ನಂತರ, ಕಟ್ಟಡ ನಿರ್ಮಾಣ, ಗುಡಿಸುವುದು, ಸ್ವಚ್ಛಗೊಳಿಸುವಿಕೆ, ಲೋಡಿಂಗ್ ಮತ್ತು ಅನ್‌ಲೋಡಿಂಗ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ “ಎ” ವಿಭಾಗದಲ್ಲಿ ಕನಿಷ್ಠ ವೇತನ ದರಗಳು ಅರೆ ಕುಶಲ ಕಾರ್ಮಿಕರಿಗೆ ದಿನಕ್ಕೆ 783 ರೂ. (ತಿಂಗಳಿಗೆ 20,358 ರೂ.) ಮತ್ತು ನುರಿತ ಕಾರ್ಮಿಕರಿಗೆ ದಿನಕ್ಕೆ 868 ರೂ. (ಮಾಸಿಕ 22,568 ರೂ.) ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ 3 ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳ ಬಿಡುಗಡೆ

ಕನಿಷ್ಠ ವೇತನ ದರಗಳ ಬಗ್ಗೆ ವಿವರವಾದ ಮಾಹಿತಿಯು ಭಾರತ ಸರ್ಕಾರದ ಮುಖ್ಯ ಕಾರ್ಮಿಕ ಆಯುಕ್ತರ (ಕೇಂದ್ರ) ವೆಬ್‌ಸೈಟ್‌ನಲ್ಲಿ (clc.gov.in) ಲಭ್ಯವಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ