ನವದೆಹಲಿ, (ಮಾರ್ಚ್ 07): ಕೇಂದ್ರ ಸಚಿವ ಸಂಪುಟ ಸಭೆಯು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮಿಷನ್ಗಾಗಿ9india ai mission) 10,371.92 ಕೋಟಿ ರೂಪಾಯಿ ಒದಗಿಸಲು ಅನುಮೋದನೆ ನೀಡಿದೆ. ಡಿಜಿಟಲ್ ಇಂಡಿಯಾ ಕಾಪೋರೇಷನ್ (ಡಿಐಸಿ) ಅಂಗಸಂಸ್ಥೆಯಾಗಿರುವ ಇಂಡಿಯಾ ಎಐ ಇಂಡಿಪೆಂಡೆಂಟ್ ಡಿಜಿನಲ್ (ಐಬಿಡಿ) ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಇನ್ನು ಈ ಯೋಜನೆ ಕುರಿತು ಕೇಂದ್ರ ಸಚಿವ ಅಶ್ವನಿ ವೈಷ್ಣವ್ (ashwini vaishnaw) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ನವೋದ್ಯಮಿಗಳು, ಹೊಸ ಯೋಜನೆ, ಐಡಿಯಾಗಳನ್ನು ಅನುಷ್ಠಾನಕ್ಕೆ ತರುವವರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುವುದು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ದಿಸೆಯಲ್ಲಿ ಪ್ರಮುಖ್ಯತೆ ನೀಡುತ್ತಿದ್ದಾರೆ ಎಂದಿದ್ದಾರೆ.
ಮೇಕಿಂಗ್ ಎಐ ಇನ್ ಇಂಡಿಯಾ ಮತ್ತು ಮೇಕಿಂಗ್ ಎಐ ವರ್ಕ್ ಫಾರ್ ಇಂಡಿಯಾದ ಪರಿಕಲ್ಪನೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು 10,371.92 ಕೋಟಿ ರೂ.ಗಳ ವೆಚ್ಚದೊಂದಿಗೆ ಸಮಗ್ರ ರಾಷ್ಟ್ರೀಯ ಮಟ್ಟದ ಇಂಡಿಯಾ ಎಐ ಮಿಷನ್‌ಗೆ ಅನುಮೋದಿಸಿದೆ. ಇಂಡಿಯಾ ಎಐ ಮಿಷನ್ ಸಾರ್ವಜನಿಕ ಮತ್ತು ಖಾಸಗಿ ವಲಯಗಳಾದ್ಯಂತ ಕಾರ್ಯತಂತ್ರದ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳ ಮೂಲಕ ಎಐ ಆವಿಷ್ಕಾರವನ್ನು ವೇಗಗೊಳಿಸುವ ಸಮಗ್ರ ಪರಿಸರ ವ್ಯವಸ್ಥೆ ಸ್ಥಾಪಿಸುತ್ತದೆ.
ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನಿಡಿದ ಸಚಿವ ಪಿಯೂಷ್ ಗೋಯಲ್, 10,000 ಜಿಪಿಯು ಒಳಗೊಂಡಿರುವ ಸೂಪರ್‌ಕಂಪ್ಯೂಟಿಂಗ್ ಸಾಮರ್ಥ್ಯವು ಎಐ ಪರಿಸರ ವ್ಯವಸ್ಥೆಯನ್ನು ರಚಿಸಲು ವಿವಿಧ ಪಾಲುದಾರರಿಗೆ ಲಭ್ಯವಾಗಲಿದೆ. ಇಂಡಿಯಾ ಎಐ ಮಿಷನ್ ಅಡಿ ಸ್ಥಾಪಿಸಲಾದ ಎಐ ಸೂಪರ್‌ಕಂಪ್ಯೂಟಿಂಗ್ ಮೂಲಸೌಕರ್ಯಕ್ಕೆ ಸ್ಟಾರ್ಟ್‌ಅಪ್‌ಗಳು, ಅಕಾಡೆಮಿಗಳು, ಸಂಶೋಧಕರು ಮತ್ತು ಉದ್ಯಮಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ದತ್ತಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಎಐ ಅಭಿವೃದ್ಧಿ ಮತ್ತು ಅದು ಲಭ್ಯವಾಗುವಂತೆ ಮಾಡಲು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಲು ರಾಷ್ಟ್ರೀಯ ಡೇಟಾ ನಿರ್ವಹಣಾ ಅಧಿಕಾರಿ ನೇಮಿಸಲಾಗುವುದು ಎಂದು ಹೇಳಿದರು.