PM Modi in Gujarat: ಗುಜರಾತಿನಲ್ಲಿ ₹4,400 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ

|

Updated on: May 12, 2023 | 2:44 PM

2014 ರ ನಂತರ ನಾವು ಬಡವರ ಮನೆಯನ್ನು ಕಾಂಕ್ರೀಟ್ ಚಾವಣಿಗೆ ಸೀಮಿತಗೊಳಿಸಲಿಲ್ಲ. ಇದರ ಬದಲು ಬಡತನದ ವಿರುದ್ಧದ ಹೋರಾಟದಲ್ಲಿ ನಾವು ಮನೆಯನ್ನು ಭದ್ರ ಬುನಾದಿ, ಬಡವರ ಸಬಲೀಕರಣದ ಮಾಧ್ಯಮ, ಅವರ ಘನತೆಗೆ ಅಡಿಪಾಯ ಹಾಕಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

PM Modi in Gujarat: ಗುಜರಾತಿನಲ್ಲಿ ₹4,400 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us on

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುಜರಾತ್‌ನಲ್ಲಿ (Gujarat) ಅಂದಾಜು 4,400 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳಿ ಚಾಲನೆ ನೀಡಿದ ನಂತರ ಮಾತನಾಡಿದ ಮೋದಿ, ಭಾರತದ ಅಭಿವೃದ್ಧಿಯು ನಮಗೆ ದೃಢ ನಿರ್ಧಾರ ಮತ್ತು ಬದ್ಧತೆ. ರಾಷ್ಟ್ರ ನಿರ್ಮಾಣವು ನಮ್ಮ ನಿರಂತರ ಜವಾಬ್ದಾರಿಯಾಗಿದೆ. ಬಡವರು ತಮ್ಮ ಜೀವನದ ಮೂಲಭೂತ ಅಗತ್ಯಗಳ ಬಗ್ಗೆ ಕಡಿಮೆ ಕಾಳಜಿ ವಹಿಸಿದರೆ, ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. 2014 ರ ನಂತರ ನಾವು ಬಡವರ ಮನೆಯನ್ನು ಕಾಂಕ್ರೀಟ್ ಚಾವಣಿಗೆ ಸೀಮಿತಗೊಳಿಸಲಿಲ್ಲ. ಇದರ ಬದಲು ಬಡತನದ ವಿರುದ್ಧದ ಹೋರಾಟದಲ್ಲಿ ನಾವು ಮನೆಯನ್ನು ಭದ್ರ ಬುನಾದಿ, ಬಡವರ ಸಬಲೀಕರಣದ ಮಾಧ್ಯಮ, ಅವರ ಘನತೆಗೆ ಅಡಿಪಾಯ ಹಾಕಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಲಕ್ಷಾಂತರ ಶಿಕ್ಷಕರು ಕೊಡುಗೆ ನೀಡಿದ್ದಾರೆ, ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ ಎಂದಿದ್ದಾರೆ ಮೋದಿ.

ಗಾಂಧಿನಗರದಲ್ಲಿ ನಡೆದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ 29ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಶಿಕ್ಷಕರೊಂದಿಗಿನ ಅವರ ಸಂವಾದವು ರಾಷ್ಟ್ರೀಯ ಮಟ್ಟದಲ್ಲಿ ನೀತಿಗಳನ್ನು ರೂಪಿಸಲು ಸಹಾಯ ಮಾಡಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಲಕ್ಷಾಂತರ ಶಿಕ್ಷಕರು ಕೊಡುಗೆ ನೀಡಿದ್ದಾರೆ. 21 ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಭಾರತವು ಇಂದು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಹಿಂದೆ ವಿದ್ಯಾರ್ಥಿಗಳು  ಕಿತಾಬಿ ಜ್ಞಾನ (ಪುಸ್ತಕ ಜ್ಞಾನ) ಪಡೆಯುತ್ತಿದ್ದರು ಆದರೆ ಹೊಸ ಶಿಕ್ಷಣ ನೀತಿ ಅದನ್ನು ಬದಲಾಯಿಸುತ್ತದೆ ಎಂದು ಹೇಳಿದರು.

ಗುಜರಾತ್‌ನಲ್ಲಿ ನಡೆದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್‌ನ 29 ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಮೋದಿ ಗೂಗಲ್, ಡೇಟಾ ಮತ್ತು ಮಾಹಿತಿಯನ್ನು ನೀಡಬಹುದು ಆದರೆ ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗದರ್ಶಕರ ಪಾತ್ರವಹಿಸುತ್ತಾರೆ ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ NEP ಅದಕ್ಕೆ ನಿಬಂಧನೆಗಳನ್ನು ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ: ಸಾಂವಿಧಾನಿಕ ಪೀಠದ ಆದೇಶವನ್ನು ಕೇಂದ್ರ ಸರ್ಕಾರ ಧಿಕ್ಕರಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಮೆಟ್ಟಿಲೇರಿದ ಅರವಿಂದ ಕೇಜ್ರಿವಾಲ್

ನಾನು ನನ್ನ ಜೀವನದಲ್ಲಿ ಎಂದಿಗೂ ಶಿಕ್ಷಕನಾಗರಲಿಲ್ಲ. ಜೀವನದುದ್ದಕ್ಕೂ ವಿದ್ಯಾರ್ಥಿಯಾಗಿದ್ದೆ.ನಾನು ಸಾಮಾಜಿಕ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದೆ. ವಿಶ್ವ ನಾಯಕರೊಂದಿಗಿನ ಸಭೆಯ ಸಮಯದಲ್ಲಿ ಕೆಲವರು ಅವರ ಶಿಕ್ಷಕರು ಭಾರತದವರಾಗಿದ್ದರು ಎಂದು ಹೇಳಿದ್ದರು ಎಂದಿದ್ದಾರೆ ಮೋದಿ.

ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಯನ್ನು ಪರಿಶೀಲಿಸಲು ಪ್ರಧಾನ ಮಂತ್ರಿಯವರು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಗೆ (ಗಿಫ್ಟ್ ಸಿಟಿ) ಭೇಟಿ ನೀಡಲಿದ್ದಾರೆ. ನಂತರ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) (ಗ್ರಾಮೀಣ ಮತ್ತು ನಗರ) ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಯೋಜನೆಯ 19,000 ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಲಿದ್ದಾರೆ. ಈ ಯೋಜನೆಗಳ ಒಟ್ಟು ವೆಚ್ಚ ಸುಮಾರು 1,950 ಕೋಟಿ ಎಂದು ಅಂದಾಜಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Fri, 12 May 23