PM Narendra Modi: ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Apr 18, 2023 | 6:32 PM

ನಿಕಟಪೂರ್ವ ಪ್ರಧಾನಿಗಳು, ಸರ್ಕಾರಗಳ ಸಾಧನೆ, ವಿಶೇಷ ಯೋಜನೆ, ಐತಿಹಾಸಿಕ ಕ್ಷಣಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಜನತೆಗೆ ಅರ್ಪಿಸಿದ್ದಾರೆ. ನೂತನ ಸಂಗ್ರಹಾಲಯದ ವೈಶಿಷ್ಟ್ಯಗಳು, ವಿಶೇಷತೆಗಳ ಬಗ್ಗೆ ಈಗಾಗಲೇ ಜನರಿಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಹೊಸತನದ ಹರಿಕಾರ ಎಂದೇ ಕರೆಯಲ್ಪಡುತ್ತಾರೆ. ಜನರ ಕಲ್ಯಾಣಕ್ಕೆ ಹಲವು ಕಾರ್ಯಕ್ರಮ ಘೋಷಿಸಿರುವ ಜತೆಗೆ, ಅವರು ಆಡಳಿತದಲ್ಲಿ ಹಲವು ಮೊದಲು, ಹೊಸತನ್ನು ಪರಿಚಯಿಸಿದವರು. ಸರ್ಕಾರವನ್ನು ಜನಪ್ರಿಯವಾಗಿಸಲು ಮತ್ತು ಸರ್ಕಾರಿ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅವರು ಹಲವು ಯೋಜನೆ ಜಾರಿ ಮಾಡಿದ್ದಾರೆ. ಅದರ ಜತೆಗೇ, ನಿಕಟಪೂರ್ವ ಪ್ರಧಾನಿಗಳು, ಸರ್ಕಾರಗಳ ಸಾಧನೆ, ವಿಶೇಷ ಯೋಜನೆ, ಐತಿಹಾಸಿಕ ಕ್ಷಣಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಜನತೆಗೆ ಅರ್ಪಿಸಿದ್ದಾರೆ. ನೂತನ ಸಂಗ್ರಹಾಲಯದ ವೈಶಿಷ್ಟ್ಯಗಳು, ವಿಶೇಷತೆಗಳ ಬಗ್ಗೆ ಈಗಾಗಲೇ ಜನರಿಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಲ್ಲದೆ, ಎಲ್ಲರೂ ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿ, ಮಾಹಿತಿ ತಿಳಿದುಕೊಳ್ಳಿ, ಒಂದು ವಿಶಿಷ್ಟ ಅನುಭವ ಪಡೆಯಿರಿ ಎಂದು ಪ್ರಧಾನಿ ಮೋದಿ ಜನರನ್ನು ಕೋರಿದ್ದಾರೆ.

Published on: Apr 18, 2023 06:32 PM