ಮೂರು ರಾಷ್ಟ್ರಗಳ ಪ್ರವಾಸದ ಮೂರನೇ ಮತ್ತು ಅಂತಿಮ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಸಿಡ್ನಿಗೆ ಆಗಮಿಸಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ಅತಿಥಿಯಾಗಿ ಮೋದಿ ಅವರು ಮೇ 22-24ರವರೆಗೆ ಆಸ್ಟ್ರೇಲಿಯಾಕ್ಕೆ (Australia) ಭೇಟಿ ನೀಡುತ್ತಿದ್ದಾರೆ. ಮೋದಿಯವರ ಆಗಮನದ ಮೊದಲು, ಹೇಳಿಕೆ ನೀಡಿದ ಪ್ರಧಾನಿ ಅಲ್ಬನೀಸ್, ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಅತ್ಯಂತ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ ನಂತರ ಆಸ್ಟ್ರೇಲಿಯಾಕ್ಕೆ ಅಧಿಕೃತ ಭೇಟಿಗಾಗಿ ಪ್ರಧಾನಿ ಮೋದಿಯನ್ನು ಆತಿಥ್ಯ ವಹಿಸಲು ನನಗೆ ಗೌರವವಿದೆ ಎಂದಿದ್ದಾರೆ.ಆಸ್ಟ್ರೇಲಿಯಾ ಮತ್ತು ಭಾರತವು ಸ್ಥಿರ, ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ಗೆ ಬದ್ಧತೆಯನ್ನು ಹಂಚಿಕೊಳ್ಳುತ್ತವೆ. ಈ ದೃಷ್ಟಿಕೋನವನ್ನು ಬೆಂಬಲಿಸುವಲ್ಲಿ ನಾವು ಒಟ್ಟಾಗಿ ಪ್ರಮುಖ ಪಾತ್ರವನ್ನು ಹೊಂದಿದ್ದೇವೆ ಎಂದಿದ್ದಾರೆ.
ಆಸ್ಟ್ರೇಲಿಯಾ ತಲುಪಿದ ಮೋದಿ ಅಲ್ಲಿರುವ ಭಾರತೀಯರನ್ನು ಭೇಟಿ ಮಾಡಿದ್ದಾರೆ.
#WATCH | Prime Minister Narendra Modi arrives in Sydney, Australia, as part of the third and final leg of his three-nation visit after concluding his visit to Papua New Guinea. He was received by Australian PM Anthony Albanese. pic.twitter.com/n7w4rxv6qj
— ANI (@ANI) May 22, 2023
ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ 2016 ರ ಜನಗಣತಿಯ ಪ್ರಕಾರ, ಆಸ್ಟ್ರೇಲಿಯಾದಲ್ಲಿ 619,164 ಜನರು ತಾವು ಜನಾಂಗೀಯ ಭಾರತೀಯ ಮೂಲದವರು ಎಂದು ಘೋಷಿಸಿದ್ದಾರೆ. ಇದು ಆಸ್ಟ್ರೇಲಿಯನ್ ಜನಸಂಖ್ಯೆಯ 2.8 ಪ್ರತಿಶತವನ್ನು ಒಳಗೊಂಡಿದೆ. ಆ ಪೈಕಿ 592,000 ಜನ ಭಾರತದಲ್ಲಿ ಜನಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೊನೆಯ ಬಾರಿಗೆ 2014 ರಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು.
#WATCH | People from the Indian diaspora greet Prime Minister Narendra Modi as he arrives in Sydney, Australia. pic.twitter.com/REGbrUNCRp
— ANI (@ANI) May 22, 2023
ಜಪಾನ್‌ನಿಂದ ಶುಕ್ರವಾರ ಮೂರು ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದ ಮೋದಿ ಅವರು ಜಪಾನಿನ ಪ್ರಧಾನಿ ಫುಮಿಯೊ ಕಿಶಿದಾ ಅವರ ಆಹ್ವಾನದ ನಂತರ G7 ಶೃಂಗಸಭೆಯಲ್ಲಿ ಮೂರು ಅಧಿವೇಶನಗಳಲ್ಲಿ ಭಾಗವಹಿಸಿದ್ದರು.ಹಿರೋಷಿಮಾದಲ್ಲಿ ನಡೆದ 3ನೇ ವ್ಯಕ್ತಿಗತ ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಕಿಶಿದಾ ಮತ್ತು ಆಸ್ಟ್ರೇಲಿಯನ್ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮೋದಿ ಭಾಗವಹಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ