ಅಸ್ಸಾಂನಲ್ಲಿ ಪ್ರಧಾನಿ ಮೋದಿ ರೋಡ್​ ಶೋ, 11,600 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಅಸ್ಸಾಂ ತಲುಪಿದ್ದು, ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಇದಂಉ ಅವರು 11,600 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ನರೇಂದ್ರ ಮೋದಿ ಅಸ್ಸಾಂ ಭೇಟಿ ಮಹತ್ವ ಪಡೆದುಕೊಂಡಿದೆ.

ಅಸ್ಸಾಂನಲ್ಲಿ ಪ್ರಧಾನಿ ಮೋದಿ ರೋಡ್​ ಶೋ, 11,600 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ
Image Credit source: Times Of India

Updated on: Feb 04, 2024 | 1:30 PM

ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಗುವಾಹಟಿಯಲ್ಲಿ ರೋಡ್​ ಶೋ ನಡೆಸಿದ್ದಾರೆ, ಅಷ್ಟೇ ಅಲ್ಲದೆ 11,600 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.  ಗುವಾಹಟಿಯ ಖಾನಪಾರದಲ್ಲಿರುವ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಒಂದು ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿದರು.

ಪ್ರಧಾನಿ ಶನಿವಾರ ಸಂಜೆ 6.30 ರ ಸುಮಾರಿಗೆ ಒಡಿಶಾದಿಂದ ಗುವಾಹಟಿಯ ಪ್ರಸಿದ್ಧ ಗೋಪಿನಾಥ್ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದರು. ಇಲ್ಲಿ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮೋದಿ ಅವರನ್ನು ಸ್ವಾಗತಿಸಿದರು.

ಇದಾದ ನಂತರ ಕೊಯಿನಾಧೋರಾ ರಾಜ್ಯ ಅತಿಥಿ ಗೃಹಕ್ಕೆ ತೆರಳಿದರು. ಅಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿಯನ್ನು ಭೇಟಿಯಾದ ಮೋದಿ ಪಕ್ಷದ ವಿಷಯಗಳ ಬಗ್ಗೆ ಚರ್ಚಿಸಿದರು.

11 ಸಾವಿರ ಕೋಟಿ ರೂ. ಯೋಜನೆಗಳ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಅಸ್ಸಾಂ ಹಾಗೂ ಈಶಾನ್ಯ ದಕ್ಷಿಣ ಏಷ್ಯಾದ ಇತರೆ ದೇಶಗಳೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ. ತಾಯಿ ಕಾಮಾಕ್ಯ ಆಶೀರ್ವಾದಿಂದ ಮತ್ತೊಮ್ಮೆ ಅಸ್ಸಾಂ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಚಾಲನೆ ನೀಡುವ ಅವಕಾಶ ಸಿಕ್ಕಿದೆ ಎಂದರು.

-ಕಾಮಾಕ್ಯ ದೇವಸ್ಥಾನ ಕಾರಿಡಾರ್ – 498 ಕೋಟಿ ರೂ
-ಗುವಾಹಟಿಯ ಹೊಸ ವಿಮಾನ ನಿಲ್ದಾಣದಿಂದ ಆರು ಪಥದ ರಸ್ತೆ – 358 ಕೋಟಿ ರೂ
-ನೆಹರು ಸ್ಟೇಡಿಯಂ ಅನ್ನು ಫಿಫಾ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು – 831 ಕೋಟಿ ರೂ
-ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ – 300 ಕೋಟಿ ರೂ
-ಅಸೋಮ್ ಮಾಲಾ ರಸ್ತೆಗಳ ಎರಡನೇ ಆವೃತ್ತಿಗೂ ಪ್ರಧಾನಿ ಚಾಲನೆ ನೀಡಿದ್ದಾರೆ. ಈ ಹಂತದಲ್ಲಿ 43 ಹೊಸ ರಸ್ತೆಗಳು ಮತ್ತು 38 ಕಾಂಕ್ರೀಟ್ ಸೇತುವೆಗಳು ಸೇರಿದಂತೆ ಒಟ್ಟು 3,444 ಕೋಟಿ ರೂ.
-3,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮಗ್ರ ನೂತನ ಕಟ್ಟಡಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
-ಪ್ರಧಾನಿಯವರು ಉದ್ದೇಶಿತ ಕರೀಂಗಂಜ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. 578 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
-ಗುವಾಹಟಿಯಲ್ಲಿ 297 ಕೋಟಿ ರೂಪಾಯಿ ಮೌಲ್ಯದ ಯೂನಿಟಿ ಮಾಲ್ ಅನ್ನು ಸ್ಥಾಪಿಸಲಿದೆ.
-1,451 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬಿಸ್ವನಾಥ್ ಚರಿಯಾಲಿಯಿಂದ ಗೋಪುರದವರೆಗೆ ಹೊಸದಾಗಿ ನಿರ್ಮಿಸಲಾದ ಚತುಷ್ಪಥ ರಸ್ತೆ ಮತ್ತು 592 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಡೋಲಬರಿಯಿಂದ ಜಮುಗುರಿವರೆಗಿನ ಮತ್ತೊಂದು ಚತುಷ್ಪಥ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:01 pm, Sun, 4 February 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us