ಲಾಕ್​​ಡೌನ್ 5.O ವಿಸ್ತರಣೆ ಬೆನ್ನಲ್ಲೇ ಇಂದು ‘ನಮೋ’ ಮಾತು!

|

Updated on: May 31, 2020 | 2:16 PM

ದೆಹಲಿ: ಲಾಕ್​ಡೌನ್ 4.O ಮುಗಿಯೋಕೆ ಒಂದು ದಿನ ಮುಂಚೆಯೇ ಲಾಕ್​ಡೌನ್ 5.O ಜಾರಿಯಾಗಿದೆ. ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಆಲ್​ಮೋಸ್ಟ್ ಆಲ್ ರಿಲೀಫ್ ಕೊಟ್ಬಿಟ್ಟಿದೆ. ಲಾಕ್​ಡೌನ್ ಬೀಗ ಬಿದ್ದಿದ್ದ ಎಲ್ಲಾ ಚಟುವಟಿಕೆಗಳು ರೀ ಓಪನ್ ಆಗಿದೆ. ಕೊರೊನಾ ನಡುವೆ ಹೋರಾಡುತ್ತಲೇ ಬದುಕಿನ ಬಂಡಿ ಸಾಗಿಸೋ ಸಂದೇಶ ಸಾರಿರೋ ಪ್ರಧಾನಿ ಮೋದಿ ಇಂದು ಮನದ ಮಾತು ಹಂಚಿಕೊಳ್ಳಲಿದ್ದಾರೆ. ಅದೇ ಲಾಕ್​ಡೌನ್ ರಿಲೀಫ್ ಬೆನ್ನಲ್ಲೇ ಮನ್ ಕಿ ಬಾತ್​​ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮನ್​ ಕಿ ಬಾತ್​​ನಲ್ಲಿ ಗುಡ್​ನ್ಯೂಸ್ ಕೊಡ್ತಾರಾ ಪಿಎಂ ಮೋದಿ? […]

ಲಾಕ್​​ಡೌನ್ 5.O ವಿಸ್ತರಣೆ ಬೆನ್ನಲ್ಲೇ ಇಂದು ‘ನಮೋ’ ಮಾತು!
Follow us on

ದೆಹಲಿ: ಲಾಕ್​ಡೌನ್ 4.O ಮುಗಿಯೋಕೆ ಒಂದು ದಿನ ಮುಂಚೆಯೇ ಲಾಕ್​ಡೌನ್ 5.O ಜಾರಿಯಾಗಿದೆ. ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಆಲ್​ಮೋಸ್ಟ್ ಆಲ್ ರಿಲೀಫ್ ಕೊಟ್ಬಿಟ್ಟಿದೆ. ಲಾಕ್​ಡೌನ್ ಬೀಗ ಬಿದ್ದಿದ್ದ ಎಲ್ಲಾ ಚಟುವಟಿಕೆಗಳು ರೀ ಓಪನ್ ಆಗಿದೆ. ಕೊರೊನಾ ನಡುವೆ ಹೋರಾಡುತ್ತಲೇ ಬದುಕಿನ ಬಂಡಿ ಸಾಗಿಸೋ ಸಂದೇಶ ಸಾರಿರೋ ಪ್ರಧಾನಿ ಮೋದಿ ಇಂದು ಮನದ ಮಾತು ಹಂಚಿಕೊಳ್ಳಲಿದ್ದಾರೆ. ಅದೇ ಲಾಕ್​ಡೌನ್ ರಿಲೀಫ್ ಬೆನ್ನಲ್ಲೇ ಮನ್ ಕಿ ಬಾತ್​​ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮನ್​ ಕಿ ಬಾತ್​​ನಲ್ಲಿ ಗುಡ್​ನ್ಯೂಸ್ ಕೊಡ್ತಾರಾ ಪಿಎಂ ಮೋದಿ?
ಯೆಸ್.. ದೇಶದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಚೀನಾದ ಪಾಪದ ಕೂಸನ್ನ ಒದ್ದೋಡಿಸೋ ಪ್ರಧಾನಿ ಮೋದಿ ಸರ್ಕಾರ ಲಾಕ್​ಡೌನ್ 5.O ವಿಸ್ತರಣೆ ಮಾಡಿದೆ. ಇನ್ನೊಂದ್ಕಡೆ ನಮೋ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಿನ್ನೆಯಷ್ಟೇ ಒಂದು ವರ್ಷ ತುಂಬಿದೆ. ಈ ಹೊತ್ತಲ್ಲೇ ಲಾಕ್​ಡೌನ್ ಅನ್​ಲಾಕ್​ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ದೇಶವಾಸಿಗಳನ್ನುದ್ದೇಶಿಸಿ ಇಂದು ಮಾತನಾಡಲಿದ್ದಾರೆ. ಮನ್ ಕಿ ಬಾತ್​ ಕಾರ್ಯಕ್ರಮದಲ್ಲಿ ಮನದಾಳ ಹಂಚಿಕೊಳ್ಳಲಿದ್ದಾರೆ. ಇಡೀ ದೇಶದ ಚಿತ್ತ ಪ್ರಧಾನಿ ಮೋದಿ ಮನ್​ ಕಿ ಬಾತ್​ನತ್ತ ನೆಟ್ಟಿದ್ದು, ದೇಶವಾಸಿಗಳಿಗೆ ಏನ್ ಗುಡ್​​ನ್ಯೂಸ್ ಕೊಡ್ಬೋದು ಅನ್ನೋದನ್ನೇ ಎಲ್ರೂ ಎದುರು ನೋಡ್ತಿದ್ದಾರೆ.

‘ನಮೋ’ ಮನದ ಮಾತು?
ಇನ್ನು ಮೋದಿ ಮನ್​ ಕಿ ಬಾತ್​​ನಲ್ಲಿ ದೇಶದಲ್ಲಿ ಕೊರೊನಾ ವೈರಸ್ ಎದುರಿಸೋ ಬಗ್ಗೆ ಸಂದೇಶ ನೀಡುವ ಸಾಧ್ಯತೆ ಇದೆ. ಜೊತೆಗೆ ಮುಂದಿರುವ ಸಂಕಷ್ಟ ದಿನಗಳ ಬಗ್ಗೆ ಎಚ್ಚರಿಕೆ‌ ನೀಡಬಹುದು. ಅಲ್ಲದೇ, ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಜನರಿಗೆ ಧೈರ್ಯ ತುಂಬಬಹುದು. ಜೊತೆಗೆ ಲಾಕ್​ಡೌನ್ 5.O ನಲ್ಲಿ ವಿನಾಯಿತಿ ನೀಡಿರುವ ಬಗ್ಗೆಯೂ ಪ್ರಸ್ತಾಪ ಮಾಡಬಹುದಾಗಿದೆ. ಅಲ್ಲದೇ, ಲಾಕ್​​ಡೌನ್ ನಡುವೆ ಸಹಕರಿಸಿದ ದೇಶವಾಸಿಗಳಿಗೆ ಧನ್ಯವಾದ ಕೂಡ ಹೇಳಬಹುದು.

ಈಗಾಗಲೇ ಲಾಕ್​​​ಡೌನ್​ನಿಂದ ಕಂಗೆಟ್ಟಿರೋ ಭಾರತದ ಆರ್ಥಿಕ ಪುನಶ್ಚೇತನ ಯಾವ ರೀತಿ ಮಾಡಬೇಕು ಅನ್ನೋ ಬಗ್ಗೆ ಸಂದೇಶ ನೀಡೋ ಸಾಧ್ಯತೆ ಇದೆ. .ಈಗಾಗಲೇ ಒಂದು ವರ್ಷ ಪೂರೈಸಿರೋ ತಮ್ಮ ಸರ್ಕಾರದ ಒಂದು ವರ್ಷದ ಸಾಧನೆ ಬಗ್ಗೆ ಮಾಹಿತಿ ನೀಡೋ ನಿರೀಕ್ಷೆ ಕೂಡ ಇದೆ.

ಒಟ್ನಲ್ಲಿ ದೇಶದಲ್ಲಿ ಲಾಕ್​ಡೌನ್ 4.O ಎಂಡ್ ಆಗೋಕೆ ಒಂದು ದಿನ ಮುಂಚೆಯೇ ಕೇಂದ್ರ ಸರ್ಕಾರ ಲಾಕ್​ಡೌನ್ 5.O ಜಾರಿ ಮಾಡಿದೆ. ಲಾಕ್​ಡೌನ್ ಜಾರಿ ಮಾಡಿದ್ರೂ ಇಂಡಿಯಾ ಕಂಪ್ಲೀಟ್ ಓಪನ್ ಅನ್ನೋ ಪರೋಕ್ಷ ಸಂದೇಶ ಕೂಡ ರವಾನಿಸಿದ್ದಾರೆ. ಅದ್ರಲ್ಲೂ ಲಾಕ್​ಡೌನ್ ಸಡಿಲಿಕೆ ಹೊತ್ತಲ್ಲೇ ಪ್ರಧಾನಿ ಮೋದಿ ಮನ್​ ಕಿ ಬಾತ್​​ನಲ್ಲಿ ಮಾತನಾಡ್ತಿರೋದು ಎಲ್ಲರ ಕಿವಿ ನೆಟ್ಟಗಾಗಿದೆ. ಏನ್ ಮಾತನಾಡ್ಬೋದು, ಏನ್ ಗುಡ್​ನ್ಯೂಸ್ ಕೊಡ್ಬೋದು ಅನ್ನೋ ನಿರೀಕ್ಷೆ ಗರಿಗೆದರಿದೆ.

Published On - 6:58 am, Sun, 31 May 20