ದೇಶಾದ್ಯಂತ ಲಾಕ್‌ಡೌನ್ ಅವಧಿ ವಿಸ್ತರಣೆ ಆಯ್ತು: ಎಲ್ಲೆಲ್ಲಿ, ಎಲ್ಲಿಯವರೆಗೆ?
ದೆಹಲಿ: ಕೊರೊನಾ ವಿರುದ್ಧದ ಸಮರದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಲಾಕ್‌ಡೌನ್ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಿದೆ. ಆದ್ರೆ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಬೇರೆ ಕಡೆ ಎಲ್ಲಾ ಓಪನ್ ಆಗಲಿವೆ. ಅಂದ್ರೆ 5ನೇ ಲಾಕ್‌ಡೌನ್ ಕಂಟೇನ್ಮೆಂಟ್ ಪ್ರದೇಶಗಳಿಗೆ ಮಾತ್ರ ಸೀಮಿತವಾಗಲಿದೆ. ಮಂದಿರ,ಮಸೀದಿ,ಚರ್ಚ್ ಜೂನ್ 8ರಿಂದ ಓಪನ್ ಆದ್ರೆ ಜೂನ್ 8ರಿಂದ ಎಲ್ಲಾ ಧಾರ್ಮಿಕ ಸ್ಥಳಗಳು ಓಪನ್ ಆಗಲಿವೆ. ರಾತ್ರಿ 9ರಿಂದ ಮುಂಜಾನೆ 5ರವರೆಗೆ ಮಾತ್ರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶಾಪಿಂಗ್ ಮಾಲ್ಗಳು, ಹೋಟೆಲ್ಗಳು ಓಪನ್ ಆಗಲಿವೆ. ಜೂನ್ […]
ದೆಹಲಿ: ಕೊರೊನಾ ವಿರುದ್ಧದ ಸಮರದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಲಾಕ್‌ಡೌನ್ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಿದೆ. ಆದ್ರೆ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಬೇರೆ ಕಡೆ ಎಲ್ಲಾ ಓಪನ್ ಆಗಲಿವೆ. ಅಂದ್ರೆ 5ನೇ ಲಾಕ್‌ಡೌನ್ ಕಂಟೇನ್ಮೆಂಟ್ ಪ್ರದೇಶಗಳಿಗೆ ಮಾತ್ರ ಸೀಮಿತವಾಗಲಿದೆ.
ಮಂದಿರ,ಮಸೀದಿ,ಚರ್ಚ್ ಜೂನ್ 8ರಿಂದ ಓಪನ್ ಆದ್ರೆ ಜೂನ್ 8ರಿಂದ ಎಲ್ಲಾ ಧಾರ್ಮಿಕ ಸ್ಥಳಗಳು ಓಪನ್ ಆಗಲಿವೆ. ರಾತ್ರಿ 9ರಿಂದ ಮುಂಜಾನೆ 5ರವರೆಗೆ ಮಾತ್ರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶಾಪಿಂಗ್ ಮಾಲ್ಗಳು, ಹೋಟೆಲ್ಗಳು ಓಪನ್ ಆಗಲಿವೆ.
ಜೂನ್ 1ರಿಂದ ಲಾಕ್‌ಡೌನ್ ಸಡಿಲಿಕೆ ನಿಯಮ ಅನ್ವಯ ಶಾಲಾ ಕಾಲೇಜು ಆರಂಭದ ಬಗ್ಗೆ ರಾಜ್ಯ ಸರ್ಕಾರ ಪೋಷಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಅಂತಾರಾಜ್ಯ, ಅಂತರ್ ಜಿಲ್ಲಾ ಪ್ರಯಾಣಕ್ಕೆ ನಿರ್ಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಜೂನ್ 1ರಿಂದ ಲಾಕ್‌ಡೌನ್ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಆದ್ರೆ ಪರಿಸ್ಥಿತಿ ಅವಲೋಕಿಸಿ ಮೆಟ್ರೋ ರೈಲುಗಳ ಸಂಚಾರದ ಬಗ್ಗೆ ನಿರ್ಧಾರ. ಅಂತಾರಾಷ್ಟ್ರೀಯ ಪ್ರಯಾಣ, ಸಿನಿಮಾ ಹಾಲ್, ಜಿಮ್ ಆರಂಭಕ್ಕೂ ಪರಿಸ್ಥಿತಿ ಅವಲೋಕಿಸಿ ನಿರ್ಣಯ ತೆಗೆದುಕೊಳ್ಳಬಹುದು.
Published On - 7:06 pm, Sat, 30 May 20