ಜಾರಿಯಾಗುತ್ತಾ ಲಾಕ್‌ಡೌನ್ 5.O? ಮೋದಿ ಮನ್ ಕೀ ಬಾತ್‌ನತ್ತ ಇಡೀ ದೇಶದ ಚಿತ್ತ..!
ಲಾಕ್‌ಡೌನ್.. ಲಾಕ್‌ಡೌನ್.. ಲಾಕ್‌ಡೌನ್.. ದೇಶಕ್ಕೆ ಕೊರೊನಾ ಕಾಲಿಟ್ಟು ಆರ್ಭಟ ಶುರುಡ್ತಿದ್ದಂತೆ ಪ್ರಧಾನಿ ಮೋದಿ ಪ್ರಯೋಗಿಸಿದ ಮೊದಲ ಅಸ್ತ್ರವೇ ಲಾಕ್‌ಡೌನ್. ದೇಶದಲ್ಲಿ ಲಾಕ್‌ಡೌನ್ 4.0 ಎಂಡ್ ಆಗೋಕೆ ಒಂದೇ ಒಂದು ದಿನ ಬಾಕಿ ಇದೆ. ಜೂನ್ 1 ರಿಂದ ದೇಶದಲ್ಲಿ ಲಾಕ್‌ಡೌನ್ ಇರುತ್ತಾ..? ಇರಲ್ವಾ..? ಲಾಕ್‌ಡೌನ್ 5.O ಜಾರಿಯಾಗುತ್ತಾ ಅನ್ನೋ ಪ್ರಶ್ನೆ 130 ಕೋಟಿ ಜನರನ್ನ ಕಾಡ್ತಿದೆ. ಆದ್ರೆ, ದೇಶದಲ್ಲಿ ಕೊರೊನಾ ಸೋಂಕಿನ ಏರಿಕೆಯ ವೇಗ ನೋಡಿದ್ರೆ ಲಾಕ್‌ಡೌನ್ ಕಂಟಿನ್ಯೂ ಆಗೋದು ದಟ್ಟಾವಾಗ್ತಿದೆ. ಮನ್ ಕೀ ಬಾತ್‌ನತ್ತ ಇಡೀ […]
ಲಾಕ್‌ಡೌನ್.. ಲಾಕ್‌ಡೌನ್.. ಲಾಕ್‌ಡೌನ್.. ದೇಶಕ್ಕೆ ಕೊರೊನಾ ಕಾಲಿಟ್ಟು ಆರ್ಭಟ ಶುರುಡ್ತಿದ್ದಂತೆ ಪ್ರಧಾನಿ ಮೋದಿ ಪ್ರಯೋಗಿಸಿದ ಮೊದಲ ಅಸ್ತ್ರವೇ ಲಾಕ್‌ಡೌನ್. ದೇಶದಲ್ಲಿ ಲಾಕ್‌ಡೌನ್ 4.0 ಎಂಡ್ ಆಗೋಕೆ ಒಂದೇ ಒಂದು ದಿನ ಬಾಕಿ ಇದೆ. ಜೂನ್ 1 ರಿಂದ ದೇಶದಲ್ಲಿ ಲಾಕ್‌ಡೌನ್ ಇರುತ್ತಾ..? ಇರಲ್ವಾ..? ಲಾಕ್‌ಡೌನ್ 5.O ಜಾರಿಯಾಗುತ್ತಾ ಅನ್ನೋ ಪ್ರಶ್ನೆ 130 ಕೋಟಿ ಜನರನ್ನ ಕಾಡ್ತಿದೆ. ಆದ್ರೆ, ದೇಶದಲ್ಲಿ ಕೊರೊನಾ ಸೋಂಕಿನ ಏರಿಕೆಯ ವೇಗ ನೋಡಿದ್ರೆ ಲಾಕ್‌ಡೌನ್ ಕಂಟಿನ್ಯೂ ಆಗೋದು ದಟ್ಟಾವಾಗ್ತಿದೆ.
ಮನ್ ಕೀ ಬಾತ್‌ನತ್ತ ಇಡೀ ದೇಶದ ಚಿತ್ತ..! ದೇಶದಲ್ಲಿ ಕೊರೊನಾ ಅಟ್ಟಹಾಸ ನಡುವೆಯೇ ಲಾಕ್‌ಡೌನ್ 5.O ವಿಸ್ತರಿಸೋ ಬಗ್ಗೆ ದೆಹಲಿ ಮಟ್ಟದಲ್ಲಿ ಸರಣಿ ಚರ್ಚೆಗಳು ನಡೀತಿದೆ. ಈಗಾಗಲೇ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಚರ್ಚಿಸಿ ಪ್ರಧಾನಿ ಮೋದಿ ಮೀಟ್ ಆಗಿ ಮಾತುಕತೆ ನಡೆಸಿದ್ದಾರೆ. ಇತ್ತ ಪ್ರಧಾನಿ ಮೋದಿ, ಮತ್ತೆರಡು ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಜೊತೆಗೆ ಜೂನ್ 1 ರಿಂದ ಮತ್ತೆ 15 ದಿನಗಳ ಕಾಲ ಲಾಕ್‌ಡೌನ್ ಮುಂದುವರಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಬಗ್ಗೆ ನಾಳೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಘೋಷಣೆ ಮಾಡೋ ಸಾಧ್ಯತೆ ಇದೆ. ಇಡೀ ದೇಶದ ಚಿತ್ರ ನೆಟ್ಟಿರೋದು ಮೋದಿ ಮನ್ ಕೀ ಬಾತ್‌ನತ್ತ.
ಮತ್ತೆ ರಾಜ್ಯ ಸರ್ಕಾರಗಳಿಗೆ ಲಾಕ್‌ಡೌನ್ ಹೊಣೆ..! ಒಂದು ವೇಳೆ ಜೂನ್ 1ರ ಬಳಿಕ ಲಾಕ್‌ಡೌನ್ 5.0 ಜಾರಿಯಾಗಿದ್ದೇ ಆದಲ್ಲಿ, ನಿಯಮಗಳು ಇನ್ನಷ್ಟು ಸಡಿಲಿಕೆಯಾಗೋ ಸಾಧ್ಯತೆ ಇದೆ. ನಿರ್ಬಂಧ ವಿಧಿಸೋದು, ಸಡಿಲಿಸೋ ನಿರ್ಧಾರ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡ್ಬೋದು. ಪ್ರಧಾನಿ ಮೋದಿ ಕೆಲ ಪ್ರಮುಖ ವಿಚಾರಗಳ ಬಗ್ಗೆಯಷ್ಟೇ ತೀರ್ಮಾನ ತೆಗೆದುಕೊಳ್ಬೋದು ಎನ್ನಲಾಗ್ತಿದೆ.
ಯಾವುದಕ್ಕೆ ನಿರ್ಬಂಧ ಕಂಟಿನ್ಯೂ..? ಇನ್ನು, ಈಗಾಗಲೇ ಲಾಕ್‌ಡೌನ್ 4.O ನಲ್ಲಿರುವಂತೆ ಲಾಕ್‌ಡೌನ್ 5.O ನಲ್ಲಿ ಮಾಲ್, ಥಿಯೇಟರ್, ಶಾಪಿಂಗ್ ಮಾಲ್ ಓಪನ್ ಮಾಡೋಕೆ ನಿರ್ಬಂಧ ಕಂಟಿನ್ಯೂ ಮಾಡ್ಬೋದು. ಇದರ ಜೊತೆಗೆ ಶಾಲಾ-ಕಾಲೇಜು ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ದಿನ ಬ್ರೇಕ್ ಹಾಕ್ಬೋದು. ಅಲ್ಲದೇ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸ್ಬೋದು. ಅಲ್ಲದೇ ಸಂತೆ, ಜಾತ್ರೆ, ಉತ್ಸವದಂತಹ ಜನರು ಸೇರುವ ಕಾರ್ಯಕ್ರಮ ನಡೆಸಂಗಿಲ್ಲ ಅಂತ ಆದೇಶಿಸ್ಬೋದು. ಜೊತೆಗೆ ಮದುವೆ, ಅಂತ್ಯ ಸಂಸ್ಕಾರ, ತಿಥಿಗೆ ಈಗಿರುವ ನಿಯಮ ಮುಂದುವರಿಕೆಯಾಗೋ ಸಾಧ್ಯತೆ ದಟ್ಟವಾಗಿದೆ.
ಯಾವುದಕ್ಕೆ ಮತ್ತಷ್ಟು ವಿನಾಯಿತಿ..? ಇನ್ನು ಲಾಕ್‌ಡೌನ್ 5.O ನಲ್ಲಿ ದೇವಸ್ಥಾನ, ಚರ್ಚೆ, ಮಸೀದಿ ತೆರೆಯಲು ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಜಿಮ್, ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್ ಆರಂಭಿಸೋಕು ಓಕೆ ಎನ್ನಬಹುದು. ಎಲ್ಲೆಡೆ ಮೆಟ್ರೋ ಸಂಚಾರ ಪುನಾರಂಭಕ್ಕೆ ಅವಕಾಶ ನೀಡೋ ಸಾಧ್ಯತೆ ಇದೆ. ಅಲ್ಲದೇ, ಅಂತಾರಾಜ್ಯ ಮುಕ್ತ ಸಂಚಾರಕ್ಕೆ ಮತ್ತಷ್ಟು ವಿನಾಯಿತಿ ನೀಡೋದರ ಜೊತೆಗೆ ರಾಜ್ಯ ಸರ್ಕಾರ ನಿಯಮ ರೂಪಿಸಿಕೊಳ್ಳೋಕೆ ಅವಕಾಶ ನಿಡ್ಬಹುದು. ಅಲ್ಲದೇ, ಸೀಮಿತ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸಿಗ್ನಲ್ ನೀಡೋ ಸಾಧ್ಯತೆಯೂ ಇದೆ. ದೇಶದಲ್ಲಿ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಮತ್ತಷ್ಟು ಅವಕಾಶ ನೀಡಲು ಪ್ಲ್ಯಾನ್ ರೆಡಿಯಾಗಿದೆ ಎನ್ನಲಾಗ್ತಿದೆ.
ಒಟ್ನಲ್ಲಿ ಜೂನ್ನಲ್ಲೂ ಲಾಕ್‌ಡೌನ್ ಮುಂದುವರಿಸೋ ಬಗ್ಗೆ, ಕೆಲ ಸೂಕ್ಷ್ಮ ಸಂಗತಿಗಳ ಬಗ್ಗೆ ನಾಳಿನ ಮೋದಿ ಮನ್ ಕಿ ಬಾತ್ನಲ್ಲಿ ಉತ್ತರ ಸಿಗೋದು ದಟ್ಟವಾಗಿದೆ. ಜೊತೆ ಜೊತೆಗೆ ಲಾಕ್‌ಡೌನ್ 5.O ಜಾರಿ ಮಾಡ್ಬೇಕಾ..? ಅದ್ರಲ್ಲೂ ಮಾಡಿದ್ರೂ ಹೇಗಿರ್ಬೇಕು ಅನ್ನೋ ಚರ್ಚೆಯೂ ನಡೀತಿದೆ. ಕೇಂದ್ರ ಗೃಹ ಇಲಾಖೆ ನಾಳೆ ಅಂತಿಮ ಮಾರ್ಗಸೂಚಿಗಳನ್ನ ರಿಲೀಸ್ ಮಾಡಲಿದ್ದು, ಮೋದಿ ಮನದ ಮಾತಿನ ಮೇಲೂ ಎಲ್ಲರ ಚಿತ್ತ ನೆಟ್ಟಿದೆ.