ಡೀ ಡೀ ಡಿಕ್ಕಿ.. ಮುಖದಲ್ಲಿ ಮುಗುಳ್ನಗು, ತುಂಟಾಟ, ಜಾದೂ, ಮುಗ್ಧ ಮನಸ್ಸುಗಳೊಂದಿಗೆ ಮಗುವಾದ ಮೋದಿ

|

Updated on: Nov 16, 2023 | 12:17 PM

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ಮಕ್ಕಳೊಂದಿಗೆ ಸಮಯ ಕಳೆಯುವ ಸದವಕಾಶವನ್ನು ಎಂದೂ ಮಿಸ್ ಮಾಡಿಕೊಳ್ಳುವುದಿಲ್ಲ, ಮಕ್ಕಳ ಜತೆ ಮಕ್ಕಳಾಗಿಯೇ ನಡೆದುಕೊಳ್ಳುತ್ತಾರೆ. ಪ್ರಧಾನಿ ಮೋದಿಯವರು ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮಕ್ಕಳೊಂದಿಗೆ ಕಳೆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಕ್ಕಳನ್ನು ತನ್ನ ಸ್ನೇಹಿತರು ಎಂದು ಬಣ್ಣಿಸಿದ್ದಾರೆ.

ಡೀ ಡೀ ಡಿಕ್ಕಿ.. ಮುಖದಲ್ಲಿ ಮುಗುಳ್ನಗು, ತುಂಟಾಟ, ಜಾದೂ, ಮುಗ್ಧ ಮನಸ್ಸುಗಳೊಂದಿಗೆ ಮಗುವಾದ ಮೋದಿ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ಮಕ್ಕಳೊಂದಿಗೆ ಸಮಯ ಕಳೆಯುವ ಸದವಕಾಶವನ್ನು ಎಂದೂ ಮಿಸ್ ಮಾಡಿಕೊಳ್ಳುವುದಿಲ್ಲ, ಮಕ್ಕಳ ಜತೆ ಮಕ್ಕಳಾಗಿಯೇ ನಡೆದುಕೊಳ್ಳುತ್ತಾರೆ. ಪ್ರಧಾನಿ ಮೋದಿಯವರು ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮಕ್ಕಳೊಂದಿಗೆ ಕಳೆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಕ್ಕಳನ್ನು ತನ್ನ ಸ್ನೇಹಿತರು ಎಂದು ಬಣ್ಣಿಸಿದ್ದಾರೆ. ಮೋದಿ ಎಂದರೆ ಕೇವಲ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಅಚ್ಚುಮೆಚ್ಚು.

ಈ ವಿಡಿಯೋದಲ್ಲಿ ಮಕ್ಕಳು ಅವರವರೇ ಜಗಳವಾಡುವುದನ್ನು ಕಾಣಬಹುದು, ಆಗ ಎರಡು ಮಕ್ಕಳ ತಲೆಯನ್ನು ಹತ್ತಿರ ತೆಗೆದುಕೊಂಡು ಹೋಗಿ ನಿಧಾನವಾಗಿ ಡಿಕ್ಕಿ ಹೊಡೆಸುತ್ತಾರೆ. ಬಳಿಕ ಹಣೆಯ ಮೇಲೆ ನಾಣ್ಯವನ್ನು ಅಂಟಿಸಿ ಜಾದೂ ಮಾಡುತ್ತಾರೆ. ಮಕ್ಕಳೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳು ಎಂದು ಅದಕ್ಕೆ ಶೀರ್ಷಿಕೆ ನೀಡಲಾಗಿದೆ.

ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಅವರು ಮಕ್ಕಳೊಂದಿಗೆ ನಗುತ್ತಾ, ಕಾಲ ಕಳೆದಿದ್ದಾರೆ. ಈ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಣ ಸಮಾಗಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಕ್ಕಳನ್ನು ಭೇಟಿ ಮಾಡಿದ್ದರು.

ಮಕ್ಕಳೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದು ಅದರಲ್ಲಿ ಮುಗ್ಧ ಮಕ್ಕಳೊಂದಿಗೆ ಕಳೆದ ಅದ್ಭುತ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಅವರ ಶಕ್ತಿ ಮತ್ತು ಉತ್ಸಾಹವು ಮನಸ್ಸಲ್ಲಿ ಉತ್ಸಾಹವನ್ನು ತುಂಬುತ್ತದೆ ಎಂದು ಬರೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:14 pm, Thu, 16 November 23