ತಾಜ್ ಮಹಲ್‌ನಲ್ಲಿ ಕುಸಿದುಬಿದ್ದ ತಂದೆಯ ಜೀವ ಉಳಿಸಿದ ಸೈನಿಕ; ಮಾನವೀಯತೆ ತೋರದ ಸಿಬ್ಬಂದಿ

ಹೃದಯಾಘಾತದಿಂದ ಕುಸಿದ ಪ್ರವಾಸಿಗನ ಮಗ ಅದೃಷ್ಟವಶಾತ್ ಮಿಲಿಟರಿಯಲ್ಲಿದ್ದ ಕಾರಣದಿಂದ ಅವರ ಮಗನಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದಿತ್ತು. ಆದರೆ ತಾಜ್ ಮಹಲ್‌ನ ಭದ್ರತೆಗೆ ನಿಯೋಜಿಸಲಾದ ಯಾವುದೇ ಅಧಿಕಾರಿ ಅಥವಾ ಯಾವುದೇ ಪೊಲೀಸ್ ಅವರಿಗೆ ಸಹಾಯ ಮಾಡಲಿಲ್ಲ.

ತಾಜ್ ಮಹಲ್‌ನಲ್ಲಿ ಕುಸಿದುಬಿದ್ದ ತಂದೆಯ ಜೀವ ಉಳಿಸಿದ ಸೈನಿಕ; ಮಾನವೀಯತೆ ತೋರದ ಸಿಬ್ಬಂದಿ
ತಾಜ್​ಮಹಲ್​ನಲ್ಲಿ ಹೃದಯಾಘಾತಕ್ಕೊಳಗಾದ ತಂದೆಯ ಪ್ರಾಣ ಕಾಪಾಡಿದ ಮಗ
Follow us
ಸುಷ್ಮಾ ಚಕ್ರೆ
|

Updated on: Nov 16, 2023 | 2:23 PM

ಆಗ್ರಾ: ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆಗೆಂದು ಬಂದಿದ್ದ ಪ್ರವಾಸಿಗರೊಬ್ಬರಿಗೆ ಹೃದಯಾಘಾತವಾಗಿದ್ದು, ಇದರಿಂದ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ತಾಜ್​ಮಹಲ್​ನ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿ ಆ ವ್ಯಕ್ತಿಗೆ ಸಹಾಯ ಮಾಡಲಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆ ವ್ಯಕ್ತಿಯ ಪ್ರಾಣವನ್ನು ಅವರ ಯೋಧ ಮಗ ತನ್ನ ಸಮಯಪ್ರಜ್ಞೆಯಿಂದ ಉಳಿಸಿದ್ದಾರೆ.

ವಿಶ್ವದ 7ನೇ ಅದ್ಭುತವಾದ ತಾಜ್ ಮಹಲ್‌ನಲ್ಲಿ ಮತ್ತೊಮ್ಮೆ ದೊಡ್ಡ ಅಜಾಗರೂಕತೆ ಕಂಡುಬಂದಿದೆ. ಬುಧವಾರ ತಾಜ್ ಮಹಲ್ ನೋಡಲು ಬಂದಿದ್ದ ದೆಹಲಿಯ ಪ್ರವಾಸಿ ರಾಮರಾಜ್ ಅವರಿಗೆ ಹಠಾತ್ ಹೃದಯಾಘಾತ ಉಂಟಾಗಿ ಪ್ರಜ್ಞಾಹೀನರಾಗಿದ್ದರು. ಈ ವೇಳೆ ಅವರ ಜೊತೆಯಲ್ಲಿದ್ದ ವೃತ್ತಿಯಲ್ಲಿ ಸೈನಿಕನಾಗಿರುವ ಮಗ ಸುಮಾರು 45 ನಿಮಿಷಗಳ ಕಾಲ ತನ್ನ ತಂದೆಯ ಜೀವವನ್ನು ಉಳಿಸಲು ಪ್ರಯತ್ನಿಸುತ್ತಲೇ ಇದ್ದರು. ಆದರೆ ತಾಜ್ ಮಹಲ್‌ನ ಭದ್ರತೆಗೆ ನಿಯೋಜಿಸಲಾದ ಯಾವುದೇ ಅಧಿಕಾರಿ ಅಥವಾ ಯಾವುದೇ ಪೊಲೀಸ್ ಅವರಿಗೆ ಸಹಾಯ ಮಾಡಲಿಲ್ಲ.

ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?

ಹೃದಯಾಘಾತದಿಂದ ಕುಸಿದ ಪ್ರವಾಸಿಗನ ಮಗ ಅದೃಷ್ಟವಶಾತ್ ಮಿಲಿಟರಿಯಲ್ಲಿದ್ದ ಕಾರಣದಿಂದ ಅವರ ಮಗನಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದಿತ್ತು. ಅಪ್ಪ ಕುಸಿದುಬಿದ್ದ ಕೂಡಲೆ ಅವರು ತನ್ನ ಪ್ರಜ್ಞಾಹೀನ ತಂದೆಗೆ ಸಿಪಿಆರ್ ನೀಡಲು ಪ್ರಾರಂಭಿಸಿದರು. 45 ನಿಮಿಷಗಳಿಗೂ ಹೆಚ್ಚು ಕಾಲ ನಿರಂತರ ಪ್ರಯತ್ನದ ನಂತರ ಆ ಸೈನಿಕನ ತಂದೆ ಸರಿಯಾಗಿ ಉಸಿರಾಡತೊಡಗಿದರು. ಬಳಿಕ ಅವರ ಮಗ ತನ್ನ ತಂದೆಯನ್ನು ಸದರ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದರು.

ತಾಜ್​ಮಹಲ್​ನಲ್ಲಿ ಇದಕ್ಕೂ ಮೊದಲು ಕೂಡ ಇದೇ ರೀತಿ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಘಟನೆಗಳು ನಡೆದಿದ್ದವು. ಇದೀಗ ಪ್ರವಾಸಿಗರೊಬ್ಬರಿಗೆ ಅವರ ಮಗನೇ ಸಿಪಿಆರ್ ನೀಡುತ್ತಿರುವ ವಿಡಿಯೋ ಬೆಳಕಿಗೆ ಬಂದ ನಂತರ ತಾಜ್​ಮಹಲ್​ನಂತಹ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಪ್ರಥಮ ಚಿಕಿತ್ಸಾ ಸೌಲಭ್ಯಗಳು ಸಿಗುತ್ತವೆಯೇ ಎಂಬ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: 10 ವರ್ಷಗಳಲ್ಲಿ ಹೃದಯಾಘಾತ ಶೇ 22 ರಷ್ಟು ಹೆಚ್ಚಳ: ಡಾ ಸಿಎನ್ ಮಂಜುನಾಥ್ ಕೊಟ್ಟ ಕಾರಣ ಇಲ್ಲಿದೆ

ತಾಜ್​ಮಹಲ್​ನಲ್ಲಿ ಇದೇ ರೀತಿ ನಿರ್ಲಕ್ಷ್ಯದಿಂದ ಈ ಹಿಂದೆ ಫ್ರೆಂಚ್ ಮಹಿಳಾ ಪ್ರವಾಸಿಯೊಬ್ಬರು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ನಂತರ ಕೆಲವು ದಿನಗಳ ಕಾಲ ಮೇಲಧಿಕಾರಿಗಳು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದರು. ಹಾಗೇ, ಪ್ರವಾಸಿಗರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಸೂಚಿಸಿದ್ದರು. ಆದರೆ, ಕಾಲ ಕಳೆದಂತೆ ಪರಿಸ್ಥಿತಿ ಮೊದಲಿನಂತಾಯಿತು. ಬುಧವಾರ, ಸಿಐಎಸ್ಎಫ್ ಮತ್ತು ಪುರಾತತ್ವ ಇಲಾಖೆಯ ಯಾರೂ ಸುಮಾರು 45 ನಿಮಿಷಗಳ ಕಾಲ ಅಸ್ವಸ್ಥರಾಗಿದ್ದ ಪ್ರವಾಸಿಗರಿಗೆ ಸಹಾಯ ಮಾಡಲು ತಾಜ್ ಮಹಲ್​ಗೆ ಬರಲಿಲ್ಲ. ಆ ಪ್ರವಾಸಿಗರ ಮಗನ ಸಮಯಪ್ರಜ್ಞೆ ಮತ್ತು ಪರಿಶ್ರಮದಿಂದ ಅವರ ಪ್ರಾಣ ಉಳಿದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್