ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ(Himachal Pradesh) ರ್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶಿಮ್ಲಾದಲ್ಲಿ ಬಾಲಕಿಯೊಬ್ಬಳು ಚಿತ್ರಿಸಿದ ಪೇಂಟಿಂಗ್ ಅನ್ನು ಸ್ವೀಕರಿಸಲು ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಬಾಲಕಿ ಚಿತ್ರಿಸಿದ್ದು ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿಯ ಚಿತ್ರವಾಗಿತ್ತು ಅದು. ಪೇಂಟಿಂಗ್ ಸ್ವೀಕರಿಸಿದ ಮೋದಿ ಆ ಪೇಂಟಿಂಗ್ ಮಾಡಲು ನಿಮಗೆ ಎಷ್ಟು ದಿನಗಳು ಬೇಕಾಯಿತು ಎಂದು ಬಾಲಕಿಯಲ್ಲಿ ಕೇಳಿದ್ದಾರೆ. ಇದಕ್ಕೆ ಬಾಲಕಿ ಇದನ್ನು ಒಂದೇ ದಿನದಲ್ಲಿ ಮಾಡಿದ್ದೇನೆ (ಏಕ್ ದಿನ್ ಮೇ ಬನಾಯಾ)” ಎಂದು ಉತ್ತರಿಸಿದ್ದಾಳೆ. ಪೇಟಿಂಗ್ ಸ್ವೀಕರಿಸಿ ಬಾಲಕಿಗೆ ಥ್ಯಾಂಕ್ಸ್ ಹೇಳಿದ ನಂತರ ಮೋದಿ ಬೆಂಗಾವಲು ವಾಹನಗಳೊಂದಿಗೆ ಮರಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (National Democratic Alliance) ಸರ್ಕಾರದ ಎಂಟು ವರ್ಷಗಳನ್ನು ಪೂರೈಸಿದ ‘ಗರೀಬ್ ಕಲ್ಯಾಣ್ ಸಮ್ಮೇಳನ’ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಚುನಾವಣೆಗೆ ಸಜ್ಜಾಗಿರುವ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರಧಾನಮಂತ್ರಿಯವರು ಶಿಮ್ಲಾದ ರಿಡ್ಜ್ ಮೈದಾನದಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 11 ನೇ ಕಂತನ್ನು ಬಿಡುಗಡೆ ಮಾಡಿದರು.
2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕ ಬರುವುದಕ್ಕೂ ಮುನ್ನ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಮೋದಿ ಟೀಕಾ ಪ್ರಹಾರ ಮಾಡಿದ್ದಾರೆ. 2014ರ ಮೊದಲು ಸರ್ಕಾರ ಭ್ರಷ್ಟಾಚಾರವನ್ನು ವ್ಯವಸ್ಥೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಿ, ಹೋರಾಟದ ಬದಲು ಅದಕ್ಕೆ ಶರಣಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
PM @narendramodi stopped his car to accept the painting from a girl in Shimla, Himachal Pradesh. pic.twitter.com/eHnUlS1GC4
— BJYM (@BJYM) May 31, 2022
“2014 ರ ಮೊದಲು, ಸರ್ಕಾರವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಿತ್ತು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು, ಆಗಿನ ಸರ್ಕಾರವು ಅದಕ್ಕೆ ಶರಣಾಯಿತು. ಯೋಜನೆಗಳ ಹಣವನ್ನು ಅಗತ್ಯವಿರುವವರಿಗೆ ತಲುಪುವ ಮೊದಲು ಹೇಗೆ ಲೂಟಿ ಮಾಡಲಾಯಿತು ಎಂಬುದನ್ನು ದೇಶವು ನೋಡಿದೆ” ಎಂದು ಪ್ರಧಾನಿ ಆರೋಪಿಸಿದರು.
ರಾಜ್ಯದ ಬಿಜೆಪಿ ಸರ್ಕಾರದ ನಾಲ್ಕನೇ ವರ್ಷಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಜಿಲ್ಲೆಯ ಮಂಡಿಯಲ್ಲಿರುವ ಪಡಲ್ ಮೈದಾನದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಅವರು ಡಿಸೆಂಬರ್ 27 ರಂದು ಹಿಮಾಚಲ ಪ್ರದೇಶಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:09 pm, Tue, 31 May 22