ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಆರು ತಿಂಗಳ ನಂತರ ವಿದೇಶ ಪ್ರವಾಸಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ. ಸೆಪ್ಟೆಂಬರ್ 23-25ರವರೆಗೆ ಮೂರು ದಿನಗಳ ಕಾಲ ಯುಎಸ್ ಪ್ರವಾಸ ಮಾಡಲಿದ್ದು, ಸೆ.24ರಂದು ಅಮೆರಿಕ ಶ್ವೇತ ಭವನದಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಶೃಂಗಸಭೆ (ಕ್ವಾಡ್ ಭದ್ರತಾ ಸಂವಾದ-Quad summit) ಪಾಲ್ಗೊಳ್ಳಲಿದ್ದಾರೆ. ಹಾಗೇ, ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯೋಜಿಸಿರುವ ಈ ಕ್ವಾಡ್ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನೀಸ್ ಪ್ರಧಾನಿ ಯೋಶಿಹೈಡೆ ಸುಗಾ ಕೂಡ ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷ ಕೊವಿಡ್ 19 ಸಾಂಕ್ರಾಮಿಕ ಶುರುವಾದ ಮೇಲೆ ಪ್ರಧಾನಿ ಮೋದಿಯವರು ಇದು ಎರಡನೇ ಬಾರಿಗೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೂ ಅಮೆರಿಕದಲ್ಲಿ ಅಧ್ಯಕ್ಷರ ಬದಲಾವಣೆ ಆದ ಬಳಿಕ ಮೊದಲ ಬಾರಿಗೆ ಅಲ್ಲಿಗೆ ತೆರಳುತ್ತಿದ್ದಾರೆ. ಬೈಡನ್ ಹಾಗೂ ಮೋದಿ ಈಗಾಗಲೇ ಹಲವು ಬಾರಿ ಫೋನ್ನಲ್ಲಿ ಮಾತನಾಡಿಕೊಂಡಿದ್ದರೂ ಮುಖತಃ ಭೇಟಿ ಆಗಿರಲಿಲ್ಲ. ಈ ಮೂರು ದಿನಗಳ ಭೇಟಿ ವೇಳೆ ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ಪ್ರಧಾನಿ ಮೋದಿ ನಡೆಸಲಿದ್ದಾರೆ.
ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರನ್ನೊಳಗೊಂಟ ಕ್ವಾಡ್ ಶೃಂಗಸಭೆಯನ್ನು ಈ ಬಾರಿ ಮಾರ್ಚ್ನಲ್ಲಿ ಜೋ ಬೈಡನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದರು. ಇದೀಗ ನಾಲ್ಕೂ ರಾಷ್ಟ್ರಗಳ ನಾಯಕರು ಮುಖತಃ ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ. ಈ ಶೃಂಗಸಭೆಯಲ್ಲಿ ನಾಯಕರು ಜಾಗತಿಕ ಸಮಸ್ಯೆಗಳಾದ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸಂಪರ್ಕ ಮತ್ತು ಮೂಲಸೌಕರ್ಯ, ಸೈಬರ್ ಭದ್ರತೆ, ಸಮುದ್ರ ಭದ್ರತೆ, ಮಾನವೀಯ ನೆರವು/ವಿಪತ್ತು ಪರಿಹಾರ, ಹವಾಮಾನ ಬದಲಾವಣೆ ಮತ್ತು ಶಿಕ್ಷಣದ ಬಗ್ಗೆ ಚರ್ಚಿಸಲಿದ್ದಾರೆ. ಪರಸ್ಪರ ದೃಷ್ಟಿಕೋನ, ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಅದರೊಂದಿಗೆ ಪ್ರಮುಖವಾಗಿ ಕೊವಿಡ್ 19 ಹೋರಾಟದ ಬಗ್ಗೆಯೂ ವ್ಯಾಪಕ ವಿಮರ್ಶೆ ನಡೆಯಲಿದೆ ಎನ್ನಲಾಗಿದೆ.
ಹಾಗೇ, ಸೆಪ್ಟೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಕೊವಿಡ್ 19ನಿಂದ ಚೇತರಿಸಿಕೊಳ್ಳುವ ಮೂಲಕ ಸ್ಥಿತಿಸ್ಥಾಪಕತ್ವ ನಿರ್ಮಾಣ, ಸುಸ್ಥಿರತೆಯ ಪುನರ್ನಿರ್ಮಾಣ, ಈ ಭೂಮಿಯ ಅಗತ್ಯಗಳಿಗೆ ಸ್ಪಂದನೆ, ಮಾನವ ಹಕ್ಕುಗಳನ್ನು ಗೌರವಿಸುವುದು, ವಿಶ್ವಸಂಸ್ಥೆಯ ಪುನರುಜ್ಜೀವನ ಈ ಬಾರಿಯ ಸಾಮಾನ್ಯ ಸಭೆಯ ಥೀಮ್ ಆಗಿದೆ.
During the summit on Sept 24, the Quad leaders will exchange views on contemporary global issues such as critical & emerging technologies, connectivity & infrastructure, cyber security, maritime security, humanitarian assistance/disaster relief, climate change, & education: MEA pic.twitter.com/wMrzsDiXnx
— ANI (@ANI) September 14, 2021
ಇದನ್ನೂ ಓದಿ: Bihar Panchayat Polls: ಪೆಟ್ರೋಲ್ ದರ ಏರಿಕೆ ಪ್ರತಿಭಟಿಸಿ ನಾಮಪತ್ರ ಸಲ್ಲಿಸಲು ಎಮ್ಮೆಯೇರಿ ಬಂದ ಅಭ್ಯರ್ಥಿ
Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್
(PM Narendra Modi to attend Quad summit in Washington)
Published On - 12:04 pm, Tue, 14 September 21