PM Modi: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್​​ನಲ್ಲಿ ಇಂದು ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

| Updated By: Rakesh Nayak Manchi

Updated on: Sep 23, 2022 | 6:38 AM

ನಾಶವಾಗುತ್ತಿರುವ ಭೂಮಿ ಮತ್ತು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಬಗ್ಗೆ ಈ ಸಮ್ಮೇಳನವು ಗಮನ ಹರಿಸುತ್ತದೆ.

PM Modi: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್​​ನಲ್ಲಿ ಇಂದು ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ನರೇಂದ್ರ ಮೋದಿ
Follow us on

ನವದೆಹಲಿ: ಗುಜರಾತ್‌ನ (Gujarat) ಏಕ್ತಾ ನಗರದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಕ್ರಿಯಾ ಯೋಜನೆಗಳ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ (Plastic Pollution) ನಿರ್ಮೂಲನೆ ಮುಂತಾದ ವಿಷಯಗಳ ಕುರಿತು ಕೆಲವು ನೀತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಹೊಂದಾಣಿಕೆ ಬೆಳೆಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.

ನಾಶವಾಗುತ್ತಿರುವ ಭೂಮಿ ಮತ್ತು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಬಗ್ಗೆ ಈ ಸಮ್ಮೇಳನವು ಗಮನ ಹರಿಸುತ್ತದೆ. ಸೆಪ್ಟೆಂಬರ್ 23-24ರಂದು ಈ ಸಮ್ಮೇಳನವು 2 ದಿನಗಳ ಕಾಲ ನಡೆಯುತ್ತದೆ. ಈ ವರ್ಷದ ಜುಲೈನಲ್ಲಿ ನಿರ್ದಿಷ್ಟ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿತ್ತು. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.

ಸಿಂಗಲ್ ಬಳಕೆಯ ಪ್ಲಾಸ್ಟಿಕ್‌ಗಳು ಸಾಮಾನ್ಯವಾಗಿ ಒಮ್ಮೆ ಬಳಸಿದ ನಂತರ ಎಸೆಯಲ್ಪಡುತ್ತವೆ. ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಸರ್ಕಾರಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ನಿಯಂತ್ರಕ ಅಧಿಕಾರಿಗಳು ಪ್ಲಾಸ್ಟಿಕ್‌ನ ವ್ಯಾಪಕ ಬಳಕೆಯನ್ನು ತಡೆಯಲು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ಏಕಬಳಕೆಯ ಪ್ಲಾಸ್ಟಿಕ್​​ಗೆ ಪರ್ಯಾಯವಾಗಿ ನೀವು ಬಳಸಬಹುದಾದ ವಸ್ತುಗಳು ಇಲ್ಲಿವೆ

ಭಾರತೀಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ವರದಿಯ ಪ್ರಕಾರ, ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯು 11 ಕೆಜಿಯಷ್ಟಿದ್ದರೆ, ಜಾಗತಿಕ ಮಟ್ಟದಲ್ಲಿ ಸರಾಸರಿ 28 ಕೆ.ಜಿ.ಯಷ್ಟಿದೆ.

ಜುಲೈ 1ರಿಂದ ಮಾಲಿನ್ಯ ಮತ್ತು ಕಡಿಮೆ ಉಪಯುಕ್ತತೆಗಾಗಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಕೆಲವು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉತ್ಪಾದಿಸುವುದು, ಆಮದು ಮಾಡುವುದು, ದಾಸ್ತಾನು ಮಾಡುವುದು, ವಿತರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದು ಕಾನೂನುಬಾಹಿರವಾಗಿದೆ. ಪ್ಲಾಸ್ಟಿಕ್ ಸ್ಟಿಕ್‌ಗಳಿರುವ ಇಯರ್‌ಬಡ್‌ಗಳು, ಪ್ಲಾಸ್ಟಿಕ್ ಸ್ಟಿಕ್‌ಗಳಿರುವ ಬಲೂನ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್‌ಗಳು, ಐಸ್‌ಕ್ರೀಮ್ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಪಾಲಿಸ್ಟೈರೀನ್ (ಥರ್ಮಾಕೋಲ್), ಪ್ಲಾಸ್ಟಿಕ್ ಪ್ಲೇಟ್‌ಗಳು, ಕಪ್‌ಗಳು ಮತ್ತು ಗ್ಲಾಸ್‌ಗಳು, ಪ್ಲಾಸ್ಟಿಕ್ ಚಾಕು-ಕತ್ತರಿಗಳು, ಫೋರ್ಕ್‌ಗಳು, ಚಮಚಗಳು, ಸ್ಟ್ರಾಗಳು, ಟ್ರೇಗಳನ್ನು ಕಳೆದ ಜುಲೈನಿಂದ ನಿಷೇಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 am, Thu, 22 September 22