ಪ್ರತಿಕೂಲ ಹವಾಮಾನದಿಂದಾಗಿ ಸಿಲುಕಿದ್ದ 42 ಆದಿ ಕೈಲಾಸ ಯಾತ್ರಿಕರನ್ನು ರಕ್ಷಿಸಿದ ಎಸ್‌ಡಿಆರ್‌ಎಫ್ ಪಡೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 22, 2022 | 9:47 AM

ಭಾರೀ ಮಳೆಯಿಂದ ಉಂಟಾದ ರಸ್ತೆ ತಡೆಯಿಂದಾಗಿ ತೀರ್ಥಯಾತ್ರೆ ಮುಗಿಸಿ ಹಿಂತಿರುಗುವಾಗ ತವಾಘಾಟ್ ಬಳಿ ಸಿಲುಕಿಕೊಂಡಿದ್ದ 42 ಆದಿ ಕೈಲಾಸ ಯಾತ್ರಾರ್ಥಿಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಬುಧವಾರ ರಕ್ಷಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ಸಿಲುಕಿದ್ದ 42 ಆದಿ ಕೈಲಾಸ ಯಾತ್ರಿಕರನ್ನು ರಕ್ಷಿಸಿದ ಎಸ್‌ಡಿಆರ್‌ಎಫ್ ಪಡೆ
Follow us on

ಭಾರೀ ಮಳೆಯಿಂದ ಉಂಟಾದ ರಸ್ತೆ ತಡೆಯಿಂದಾಗಿ ತೀರ್ಥಯಾತ್ರೆ ಮುಗಿಸಿ ಹಿಂತಿರುಗುವಾಗ ತವಾಘಾಟ್ ಬಳಿ ಸಿಲುಕಿಕೊಂಡಿದ್ದ 42 ಆದಿ ಕೈಲಾಸ ಯಾತ್ರಾರ್ಥಿಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಬುಧವಾರ ರಕ್ಷಿಸಿದೆ.

ಸೆಪ್ಟೆಂಬರ್ 19ರಂದು ಕೆಲವು ಆದಿ ಕೈಲಾಶ್ ಯಾತ್ರಿಕರು ಬುಂಡಿಗೆ ಹೋಗುವ ದಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನಮಗೆ ತಿಳಿಸಲಾಯಿತು. ಎಸ್‌ಡಿಆರ್‌ಎಫ್ ತಂಡವು ಸಿಕ್ಕಿಕೊಂಡಿದ್ದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಪರ್ಯಾಯ ಮಾರ್ಗದ ಮೂಲಕ ಅವರನ್ನು ಧಾರ್ಚುಲಾಕ್ಕೆ ಕರೆದೊಯ್ಯಿತು ಎಂದು ಪಿಥೋರಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಚೌಹಾನ್ ಹೇಳಿದ್ದಾರೆ.

ಯಾತ್ರಿಕರು ಹೆಚ್ಚಾಗಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ದೆಹಲಿಯಿಂದ ಬಂದವರು ಎಂದು ಅಧಿಕಾರಿ ತಿಳಿಸಿದ್ದಾರೆ. ಯಾತ್ರಾರ್ಥಿಗಳ ಹೊರತಾಗಿ, ಭಾರೀ ಮಳೆಯಿಂದ ಉಂಟಾದ ಅಡಚಣೆಗಳಿಂದಾಗಿ ನಾಲ್ಕು ದಿನಗಳ ಕಾಲ ಗುಂಜಿಯಲ್ಲಿ ಸಿಲುಕಿದ್ದ ವ್ಯಾಸ್ ಕಣಿವೆಯ 50 ಗ್ರಾಮಸ್ಥರನ್ನು ಹೆಲಿಕಾಪ್ಟರ್‌ಗಳ ಸಹಾಯದಿಂದ ರಕ್ಷಿಸಲಾಗಿದೆ. ಅವರೆಲ್ಲರನ್ನು ಕಣಿವೆಯ ಕೆಳಗಿನ ಭಾಗಗಳಲ್ಲಿರುವ ಅವರ ಮನೆಗಳಿಗೆ ಕರೆತರಲಾಗಿದೆ ಎಂದು ಚೌಹಾಣ್ ಹೇಳಿದರು.ಇದೀಗ ಅಲ್ಲಿ ಇನ್ನೂ ಕಾರ್ಯಚರಣೆ ನಡೆಯುತ್ತಿದ್ದು. ಇದೀಗ ಆದಿ ಕೈಲಾಸಕ್ಕೆ ಬರುವ ಯಾತ್ರಿಕರನ್ನು ಬರದಂತೆ ಕೇಳಿಕೊಳ್ಳಲಾಗಿದೆ. ಸರ್ಕಾರವು ಕೂಡ ಈ ಬಗ್ಗೆ ಸೂಚನೆಯನ್ನು ನೀಡಿದೆ. ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Published On - 9:46 am, Thu, 22 September 22