ತೆಲಂಗಾಣ: 21 ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಆಗಸ್ಟ್ 6ರಂದು ಪ್ರಧಾನಿ ಮೋದಿ ಶಂಕುಸ್ಥಾಪನೆ

|

Updated on: Aug 01, 2023 | 5:07 PM

ತೆಲಂಗಾಣದಲ್ಲಿ 39 ನಿಲ್ದಾಣಗಳನ್ನು ರೈಲ್ವೆ ಗುರುತಿಸಿದ್ದು, 21 ನಿಲ್ದಾಣಗಳನ್ನು 894 ಕೋಟಿ ರೂಪಾಯಿ ವೆಚ್ಚದಲ್ಲಿ ತಕ್ಷಣದ ಅಭಿವೃದ್ಧಿಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ

ತೆಲಂಗಾಣ: 21 ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಆಗಸ್ಟ್ 6ರಂದು ಪ್ರಧಾನಿ ಮೋದಿ ಶಂಕುಸ್ಥಾಪನೆ
ನರೇಂದ್ರ ಮೋದಿ
Follow us on

ಹೈದರಾಬಾದ್  ಆಗಸ್ಟ್ 1: ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ಆಗಸ್ಟ್ 6, 2023 ರಂದು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ (Amrit Bharat Station Scheme)  ತೆಲಂಗಾಣದಲ್ಲಿ (Telangana) 21 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಯೋಜನೆಯು ಪ್ರಯಾಣಿಕರ ಸಂಚಾರ, ಅನುಕೂಲತೆ ಮತ್ತು ಸುತ್ತಮುತ್ತಲಿನ ಪ್ರದೇಶದೊಂದಿಗೆ ನಿಲ್ದಾಣಗಳ ಏಕೀಕರಣವನ್ನು ಸುಲಭಗೊಳಿಸುತ್ತದೆ.

ತೆಲಂಗಾಣದಲ್ಲಿ 39 ನಿಲ್ದಾಣಗಳನ್ನು ರೈಲ್ವೆ ಗುರುತಿಸಿದ್ದು, 21 ನಿಲ್ದಾಣಗಳನ್ನು 894 ಕೋಟಿ ರೂಪಾಯಿ ವೆಚ್ಚದಲ್ಲಿ ತಕ್ಷಣದ ಅಭಿವೃದ್ಧಿಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ 21 ನಿಲ್ದಾಣಗಳನ್ನು ಬೃಹತ್ ವೇಟಿಂಗ್ ಹಾಲ್‌ಗಳು, ರೆಸ್ಟ್‌ರೂಮ್‌ಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಉಚಿತ ವೈಫೈ, ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಒಂದು ನಿಲ್ದಾಣದ ಒಂದು ಉತ್ಪನ್ನ ಅಂಗಡಿಗಳು, ಮಾಹಿತಿ ಕಿಯೋಸ್ಕ್‌ಗಳು, ಎಕ್ಸಿಕ್ಯೂಟಿವ್ ಲಾಂಜ್‌ಗಳು, ಉದ್ಯಾನಗಳು ಮತ್ತು ಕಾನ್ಫರೆನ್ಸ್ ಹಾಲ್‌ಗಳೊಂದಿಗೆ ಸಂಪೂರ್ಣವಾಗಿ ನವೀಕರಿಸಲಾಗುತ್ತದೆ.

ನಿಲ್ದಾಣಗಳ ಎರಡೂ ಬದಿಯಲ್ಲಿರುವ ಪ್ರದೇಶಗಳೊಂದಿಗೆ ಸಂಪರ್ಕಗಳು, ಕಾಂಕ್ರೀಟ್ ವಾಕ್‌ವೇಗಳು, ಮೇಲ್ಛಾವಣಿ ಪ್ಲಾಜಾಗಳೊಂದಿಗೆ ಸುಸ್ಥಿರ ಮತ್ತು ಪರಿಸರ ಸ್ನೇಹಿ ನಿರ್ಮಾಣದೊಂದಿಗೆ ನಿಲ್ದಾಣಗಳನ್ನು ಅಂಗ ವೈಕಲ್ಯವುಳ್ಳವರೊಂದಿಗೆ ಸ್ನೇಹಿಯಾಗಿ ಮಾಡಲಾಗುವುದು. ಈಗಾಗಲೇ 715 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಕಂದರಾಬಾದ್ ನಿಲ್ದಾಣದ ಅಭಿವೃದ್ಧಿಯನ್ನು ರೈಲ್ವೆ ಕೈಗೆತ್ತಿಕೊಂಡಿದ್ದು, ಚೆರ್ಲಪಲ್ಲಿ ಟರ್ಮಿನಲ್ ಅಭಿವೃದ್ಧಿಗೆ 221 ಕೋಟಿ ರೂ.ಗೆ ಅನುದಾನ ನೀಡಲಾಗಿದೆ.

ಇದನ್ನೂ ಓದಿ: ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಯೋಗಿ ಆದಿತ್ಯನಾಥ್; ಯಾರಿಗೂ ಅನ್ಯಾಯವಾಗಬಾರದು, ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ

ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಹಂತ-I ಅಡಿಯಲ್ಲಿ ಅಭಿವೃದ್ಧಿಯಾಗಲಿರುವ ನಿಲ್ದಾಣಗಳು ಮತ್ತು ಖರ್ಚು

ಹೈದರಾಬಾದ್ (ನಾಂಪಲ್ಲಿ)-309 ಕೋಟಿ ರೂ,ನಿಜಾಮಾಬಾದ್-53.3 ಕೋಟಿ ರೂ,ಕಾಮರೆಡ್ಡಿ – 39.9 ಕೋಟಿ ರೂ,ಮಹಬೂಬ್‌ನಗರ-39.9 ಕೋಟಿ ರೂ,ಮಹಬೂಬಾಬಾದ್-39.7 ಕೋಟಿ,ಮಲಕಪೇಟೆ (ಹೈದರಾಬಾದ್)- 36.4 ಕೋಟಿ ರೂ,
ಮಲ್ಕಾಜಗಿರಿ (ಮೇಡ್ಚಲ್)- 27.6 ಕೋಟಿ ರೂ,ಉಪ್ಪುಗುಡ (ಹೈದರಾಬಾದ್)- 26.8 ಕೋಟಿ ರೂ,ಹಫೀಜ್‌ಪೇಟ್ (ಹೈದರಾಬಾದ್)- 26.6 ಕೋಟಿ ರೂ,ಹೈಟೆಕ್ ಸಿಟಿ (ಹೈದರಾಬಾದ್)- 26.6 ಕೋಟಿ ರೂ,ಕರೀಂನಗರ -26.6 ಕೋಟಿ ರೂ,ರಾಮಗುಂಡಂ- 26.5 ಕೋಟಿ ರೂ,
ಖಮ್ಮಂ-25.4 ಕೋಟಿ ರೂ,ಮಧಿರಾ (ಖಮ್ಮಂ)-25.4 ಕೋಟಿ,ಜನಗಾಂವ- 24.5 ಕೋಟಿ,ಯಾದಾದ್ರಿ- 24.5 ಕೋಟಿ,ಖಾಜಿಪೇಟೆ ಜಂಕ್ಷನ್- 24.5 ಕೋಟಿ,ತಾಂಡೂರು (ವಿಕಾರಾಬಾದ್)- 24.4 ಕೋಟಿ,ಭದ್ರಾಚಲಂ ರಸ್ತೆ – 24.4 ಕೋಟಿ,ಜಹೀರಾಬಾದ್- 24.4 ಕೋಟಿ,ಆದಿಲಾಬಾದ್ – 17.8 ಕೋಟಿ,

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ