ಸ್ವಚ್ಛ ಭಾರತ ಅಭಿಯಾನ(Swachh Bharat Mission)ದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮದಾನ ಮಾಡಿದರು. ಕುಸ್ತಿಪಟು ಅಂಕಿತ್ ಬೈಯನ್ ಪುರಿಯಾ ಜತೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಕೇವಲ ನಾವು ಸ್ವಚ್ಛತೆಯ ಬಗ್ಗೆ ಮಾತ್ರ ಗಮನಹರಿಸಿಲ್ಲ, ಸ್ವಚ್ಛ ಹಾಗೂ ಸ್ವಸ್ತ್ ಭಾರತ್ ಗಮನದಲ್ಲಿಟ್ಟುಕೊಂಡು ಫಿಟ್ನೆಟ್ಗೂ ಒತ್ತು ನೀಡಿದ್ದೇವೆ ಎಂದಿದ್ದಾರೆ. ಪ್ರಧಾನಿ ಮೋದಿಯವರ ಸ್ವಚ್ಛತಾ ಅಭಿಯಾನದಲ್ಲಿ ದೇಶಾದ್ಯಂತದ ರಾಜಕೀಯ ನಾಯಕರು ಸಕ್ರಿಯವಾಗಿ ಪಾಲ್ಗೊಂಡರು.
ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥ ಅಕ್ಟೋಬರ್ 1 ರಂದು ಬೆಳಗ್ಗೆ ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮೋದಿ ಮನವಿ ಮಾಡಿದ್ದರು.
ಗುಜರಾತ್ನ ಅಹಮದಾಬಾದಿನಲ್ಲಿ ನಡೆದ ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದರು.
ಮತ್ತಷ್ಟು ಓದಿ: PM Modi’s Birthday; 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ 10 ಪ್ರಮುಖ ನಿರ್ಧಾರಗಳು
ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ರಾಜಸ್ಥಾನದ ಕೋಟಾದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಭಾಗವಹಿಸಿದ್ದರು. ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದ ಬಳಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
Today, as the nation focuses on Swachhata, Ankit Baiyanpuriya and I did the same! Beyond just cleanliness, we blended fitness and well-being also into the mix. It is all about that Swachh and Swasth Bharat vibe! @baiyanpuria pic.twitter.com/gwn1SgdR2C
— Narendra Modi (@narendramodi) October 1, 2023
ಸ್ವಚ್ಛ ಭಾರತ್ ಮಿಷನ್ ಅನ್ನು 2014 ರಲ್ಲಿ ಅಕ್ಟೋಬರ್ 2 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. 2021 ರಲ್ಲಿ, ಪಿಎಂ ಮೋದಿ ಅವರು ಎಲ್ಲಾ ಭಾರತೀಯ ನಗರಗಳನ್ನು ‘ಕಸ ಮುಕ್ತ’ ಮತ್ತು ‘ನೀರಿನ ಸುರಕ್ಷಿತ’ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಅನ್ನು ಪರಿಚಯಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Sun, 1 October 23