Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನಿಂದ ಅಸಭ್ಯ ವರ್ತನೆ, ಶೌಚಾಲಯದೊಳಗೆ ಹೋಗಿ ಲಾಕ್​ ಮಾಡಿಕೊಂಡ ವ್ಯಕ್ತಿ

ಅಹಮದಾಬಾದ್​ನಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ನಡೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಹಾಗೆಯೇ ಆತ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡವನು ಎಷ್ಟೊತ್ತಾದರೂ ತೆಗೆದೇ ಇರಲಿಲ್ಲ. ಕೊನೆಗೂ ಆತನನ್ನು ಹೊರತಂದು ಪೊಲೀಸರಿಗೆ ಒಪ್ಪಿಸಲಾಗಿದೆ. ಮೊಹಮ್ಮದ್ ಕಮರ್ ರಿಯಾಜ್ ಎಂದು ಗುರುತಿಸಲಾದ ವ್ಯಕ್ತಿ, ವಿಮಾನದಲ್ಲಿ ಬಾತ್ರೂಮ್ ಒಳಗೆ ಬೀಗ ಹಾಕಿಕೊಂಡಿದ್ದ. ಮಾನದಲ್ಲಿ ಗದ್ದಲವನ್ನು ಸೃಷ್ಟಿಸಿದ ಮತ್ತು ಅಶಿಸ್ತಿನ ಮತ್ತು ಅನುಚಿತ ವರ್ತನೆಗಾಗಿ ಏರ್‌ಲೈನ್ಸ್‌ನಿಂದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನಿಂದ ಅಸಭ್ಯ ವರ್ತನೆ, ಶೌಚಾಲಯದೊಳಗೆ ಹೋಗಿ ಲಾಕ್​ ಮಾಡಿಕೊಂಡ ವ್ಯಕ್ತಿ
ವಿಮಾನ ಪ್ರಯಾಣಿಕImage Credit source: IndiaToday
Follow us
ನಯನಾ ರಾಜೀವ್
|

Updated on:Oct 01, 2023 | 11:57 AM

ಅಹಮದಾಬಾದ್​ನಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನ(IndiGO Flight)ದಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ನಡೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಹಾಗೆಯೇ ಆತ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡವನು ಎಷ್ಟೊತ್ತಾದರೂ ತೆಗೆದೇ ಇರಲಿಲ್ಲ. ಕೊನೆಗೂ ಆತನನ್ನು ಹೊರತಂದು ಪೊಲೀಸರಿಗೆ ಒಪ್ಪಿಸಲಾಗಿದೆ. ಮೊಹಮ್ಮದ್ ಕಮರ್ ರಿಯಾಜ್ ಎಂದು ಗುರುತಿಸಲಾದ ವ್ಯಕ್ತಿ, ವಿಮಾನದ ಶೌಚಾಲಯದ ಒಳಗೆ ಹೋಗಿ ಬೀಗ ಹಾಕಿಕೊಂಡಿದ್ದ.

ವಿಮಾನದಲ್ಲಿ ಗದ್ದಲವನ್ನು ಸೃಷ್ಟಿಸಿದ ಮತ್ತು ಅಶಿಸ್ತಿನ ಮತ್ತು ಅನುಚಿತ ವರ್ತನೆಗಾಗಿ ಏರ್‌ಲೈನ್ಸ್‌ನಿಂದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ, ವೈದ್ಯಕೀಯ ದಾಖಲೆಗಳ ಪರಿಶೀಲನೆ ಮತ್ತು ಆತನೊಂದಿಗೆ ಪ್ರಯಾಣಿಸುತ್ತಿದ್ದ ಸಹೋದರನ ಹೇಳಿಕೆಯಿಂದ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬುದು ತಿಳಿದುಬಂದಿದೆ.

ರಿಯಾಜ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಅವರು ಬಿಹಾರದ ಪಶ್ಚಿಮ ಚಂಪಾರಣ್‌ನ ನಿವಾಸಿಯಾಗಿದ್ದು, ಅವರ ಹಿರಿಯ ಸಹೋದರ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿಂದ ಅವರು ಚಿಕಿತ್ಸೆಗಾಗಿ ಪಾಟ್ನಾಗೆ ತನ್ನ ಸಹೋದರನೊಂದಿಗೆ ವಿಮಾನವನ್ನು ಹತ್ತಿದ್ದ.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಸದ್ಯ ರಿಯಾಜ್ ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆತನ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:56 am, Sun, 1 October 23