ಕೆಲವೇ ಗಂಟೆಗಳ ಅಂತರದಲ್ಲಿ ಇಂಡಿಗೋದ 2 ವಿಮಾನಗಳ ಇಂಜಿನ್ನಲ್ಲಿ ದೋಷ, ಸುರಕ್ಷಿತ ಲ್ಯಾಂಡಿಂಗ್
ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಇಂಡಿಗೋ ವಿಮಾನಗಳಲ್ಲಿ ದೋಷ ಕಾಣಿಸಿಕೊಂಡಿತ್ತು, ಆದರೆ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಇಂಜಿನ್ ವಿಫಲವಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದು ಸಮಾಧಾನ ತಂದಿದೆ.
ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಇಂಡಿಗೋ ವಿಮಾನಗಳಲ್ಲಿ ದೋಷ ಕಾಣಿಸಿಕೊಂಡಿತ್ತು, ಆದರೆ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಇಂಜಿನ್ ವಿಫಲವಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದು ಸಮಾಧಾನ ತಂದಿದೆ. ಇದಕ್ಕೂ ಕೆಲವು ಗಂಟೆಗಳ ಮೊದಲು ಇಂಡಿಗೋದ ಮಧುರೈ-ಮುಂಬೈ ವಿಮಾನ ಮುಂಬೈನಲ್ಲಿ ಇಳಿಯುವ ಮೊದಲು ಇಂಜಿನ್ನಲ್ಲಿ ದೋಷ ಕಂಡುಬಂದಿತ್ತು.
ವಿಮಾನಯಾನ ನಿಯಂತ್ರಕ ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವು ಎಂಜಿನ್ 2 ಮತ್ತು ಎಂಜಿನ್ 2 ಆಯಿಲ್ ಚಿಪ್ ಅಸಮರ್ಪಕ ಎಚ್ಚರಿಕೆಗಳನ್ನು ನೀಡಿತ್ತು.
ಮುಂಬೈಗೆ ಇಳಿಯುವ ಮುನ್ನ ತಾಂತ್ರಿಕ ದೋಷ ಎದುರಿಸಿತ್ತು ಎಂದು ಹೇಳಲಾಗಿತ್ತು. ಪೈಲಟ್ ಮುಂಬೈನಲ್ಲಿ ಇಳಿಯಲು ಆದ್ಯತೆ ನೀಡಿದರು. ವಿಮಾನವು ಮುಂಬೈಗೆ ಬಂದಿಳಿದಿದ್ದು, ಅಗತ್ಯ ನಿರ್ವಹಣೆಯ ನಂತರ ಮತ್ತೆ ಕಾರ್ಯಾಚರಣೆಗೆ ಬರಲಿದೆ.
ಮತ್ತಷ್ಟು ಓದಿ: IndiGo: ಇಂಜಿನ್ನಲ್ಲಿ ದೋಷ: ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಈ ಎರಡೂ ಇಂಡಿಗೋ ವಿಮಾನಗಳು ಪ್ರಾಟ್ ಮತ್ತು ವಿಟ್ನಿ ಎಂಜಿನ್‌ಗಳಲ್ಲಿ ಚಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ