ಚಂದ್ರಯಾನ 3ರ ಲ್ಯಾಂಡರ್ ವಿನ್ಯಾಸಗೊಳಿಸಿದ್ದು ನಾನೇ ಎಂದು ಹೇಳಿಕೊಂಡು ತಿರುಗುತ್ತಿದ್ದ ನಕಲಿ ವಿಜ್ಞಾನಿಯ ಬಂಧನ
ಭಾರತೀಯ ಬಾಹ್ಯಾಕಾಶ ಸಂಶೋಧನ ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಯಾನ-3 ಚಂದ್ರನ ಕಾರ್ಯಾಚರಣೆಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ತಾನೇ ವಿನ್ಯಾಸಗೊಳಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ನಕಲಿ ವಿಜ್ಞಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಮಿಥುಲ್ ತ್ರಿವೇದಿ ಎಂದು ಗುರುತಿಸಲಾಗಿದ್ದು, ಚಂದ್ರಯಾನ 3 ರ ಚಂದ್ರನ ಮಿಷನ್ಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನವನ್ನು ಈತ ನೀಡಿದ್ದ.
ಭಾರತೀಯ ಬಾಹ್ಯಾಕಾಶ ಸಂಶೋಧನ ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದಾರೆ. ಚಂದ್ರಯಾನ-3 ಚಂದ್ರನ ಕಾರ್ಯಾಚರಣೆಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ತಾನೇ ವಿನ್ಯಾಸಗೊಳಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ನಕಲಿ ವಿಜ್ಞಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಮಿಥುಲ್ ತ್ರಿವೇದಿ ಎಂದು ಗುರುತಿಸಲಾಗಿದ್ದು, ಚಂದ್ರಯಾನ 3 ರ ಚಂದ್ರನ ಮಿಷನ್ಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನವನ್ನು ಈತ ನೀಡಿದ್ದ.
2022ರ ನಕಲಿ ಅಪಾಯಿಂಟ್ಮೆಂಟ್ ಲೆಟರ್ ಅನ್ನು ಒದಗಿಸಿದ್ದಾರೆ. ಈ ವ್ಯಕ್ತಿ ಇಸ್ರೋದ ಚಂದ್ರಯಾನ 3 ಮಿಷನ್‌ನೊಂದಿಗೆ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಮತ್ತು ಇಸ್ರೋ ಉದ್ಯೋಗಿ ಎಂದು ಸುಳ್ಳು ಹೇಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಗುಜರಾತ್‌ನ ಸೂರತ್ ನಗರದಲ್ಲಿ ಬಂಧಿಸಿದ್ದಾರೆ.
ವ್ಯಕ್ತಿಯು ಇಸ್ರೋದ ಚಂದ್ರಯಾನ-3 ಮಿಷನ್‌ನೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಮತ್ತು ತಾನು ಇಸ್ರೋ ಉದ್ಯೋಗಿ ಎಂದು ತಪ್ಪಾಗಿ ಹೇಳಿಕೊಂಡಿದ್ದಾನೆ. ಇಸ್ರೋದ ಮುಂದಿನ ಯೋಜನೆಗೆ ಬಾಹ್ಯಾಕಾಶ ಸಂಶೋಧನಾ ವಿಜ್ಞಾನಿ ಎಂಬ ನಕಲಿ ಪತ್ರವನ್ನೂ ಸಿದ್ಧಪಡಿಸಿದ್ದ. ಚಂದ್ರಯಾನ-3 ಮಿಷನ್‌ನಂತಹ ಮಹತ್ವಾಕಾಂಕ್ಷೆಯ ಯೋಜನೆಗೆ ಕೊಡುಗೆ ನೀಡದಿದ್ದರೂ, ಅವರು ಇಸ್ರೋ ಬಗ್ಗೆ ನಕಲಿ ಸಂದೇಶಗಳನ್ನು ಹರಡಿದ್ದಾನೆ, ಇದು ಸಂಸ್ಥೆಯ ಖ್ಯಾತಿಗೆ ಧಕ್ಕೆ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಓದಿ: ಚಂದ್ರನ ಮೇಲೆ ಆಮ್ಲಜನಕ ಮತ್ತು ಇತರ ಮೂಲಧಾತು ಪತ್ತೆ; ಹೈಡ್ರೋಜನ್ಗಾಗಿ ನಡೆಯುತ್ತಿದೆ ಹುಡುಕಾಟ: ಇಸ್ರೋ
ಆರೋಪಿ ವಿರುದ್ಧ ಸೂರತ್ ಸಿಟಿ ಕ್ರೈಂ ಬ್ರಾಂಚ್ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಿದೆ. ಐಪಿಸಿ ಸೆಕ್ಷನ್ 419 ( ವಂಚನೆ), 465 (ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), ಮತ್ತು 471 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಮತ್ತು 471 ಅಡಿಯಲ್ಲಿ ಎಫ್‌ಐಆರ್ ಅನ್ನು ನೋಂದಾಯಿಸಲಾಗಿದೆ ಮತ್ತು 471 ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ