Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ವಿಜ್ಞಾನಿಗಳ ಸಾಧನೆ ಶ್ರೇಯಸ್ಸು ಬಿಜೆಪಿಗೆ ಸಲ್ಲಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಎಲ್ಲೂ ಹೇಳಿಲ್ಲ: ಕೆಎಸ್ ಈಶ್ವರಪ್ಪ

ಇಸ್ರೋ ವಿಜ್ಞಾನಿಗಳ ಸಾಧನೆ ಶ್ರೇಯಸ್ಸು ಬಿಜೆಪಿಗೆ ಸಲ್ಲಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಎಲ್ಲೂ ಹೇಳಿಲ್ಲ: ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2023 | 5:15 PM

ಈ ಮಿಶನ್ ಗೆ ಭಾರತ ಖರ್ಚು ಮಾಡಿದ್ದು ರೂ. 615 ಕೋಟಿ ಆದರೆ ರಷ್ಯಾ ರೂ. 1,700 ಕೋಟಿ ಖರ್ಚು ಮಾಡಿಯೂ ತನ್ನ ಮಿಶನ್ ನಲ್ಲಿ ವಿಫಲವಾಯಿತು. ಮಗ ಪರೀಕ್ಷೆಯೊಂದರಲ್ಲಿ ರ‍್ಯಾಂಕ್ ಗಿಟ್ಟಿಸಿದಾಗ ತಂದೆ ಅವನಿಗೆ ಸ್ವೀಟ್ ತಂದು ತಿನ್ನಿಸುತ್ತಾನೆ, ಸ್ವೀಟ್ ಗೆ ಯಾಕೆ ಖರ್ಚು ಮಾಡಿದೆ ಅಂತ ಕೇಳುವ ಮಟ್ಠಾಳತವನ್ನು ಕೇವಲ ಕಾಂಗ್ರೆಸ್ ನಾಯಕರು ಪ್ರದರ್ಶಿಸಬಲ್ಲರು ಎಂದು ಈಶ್ವರಪ್ಪ ಮಾರ್ಮಿಕವಾಗಿ ಹೇಳಿದರು.

ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ನಗರದಲ್ಲಿಂದು ಸುದ್ದಿಗೋಷ್ಟಿ ಹಲಾವಾರು ವಿಷಯಗಳನ್ನು ಮಾತಾಡಿದರು. ಇಸ್ರೋ ವಿಜ್ಞಾನಿಗಳ (ISRO Scientists) ಅಭೂತಪೂರ್ವ ಸಾಧನೆಯ ಕ್ರೆಡಿಟ್ ತೆಗೆದಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ನಡೆದಿರೋದು ಎಲ್ಲರಿಗೂ ಗೊತ್ತು. ಅದರೆ ಈಶ್ವರಪ್ಪ, ಇದರಲ್ಲಿ ಕ್ರೆಡಿಟ್ ತೆಗೆದದುಕೊಳ್ಳುವಂಥದ್ದು ಏನೂ ಇಲ್ಲ, ನಮ್ಮ ವಿಜ್ಞಾನಿಗಳು ವಿಶ್ವವೇ ನಿಬ್ಬೆರಗಾಗುವ ಸಾಧನೆಯನ್ನು ಮಾಡಿದ್ದಾರೆ, ಶ್ರೇಯಸ್ಸೆಲ್ಲ ಅವರಿಗೆ ಸಲ್ಲಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಸ್ರೋ ವಿಜ್ಞಾನಿಗಳ ಬೆನ್ನುತಟ್ಟಿ ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ್ದರು ಅವರು ಎಲ್ಲೂ ಬಿಜೆಪಿಗೆ ಕ್ರೆಡಿಟ್ ಸಲ್ಲಬೇಕು ಅಂತ ಹೇಳಿಲ್ಲ, ಕಾಂಗ್ರೆಸ್ ನಾಯಕರಿಗೆ ಪ್ರತಿ ವಿಷಯದಲ್ಲಿ ರಾಜಕಾರಣ ಮಾಡೋದು ಅಭ್ಯಾಸವಾಗಿದೆ ಎಂದು ಈಶ್ವರಪ್ಪ ಹೇಳಿದರು. ಅತಿ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-3 ಅಭಿಯಾನ ಯಶಸ್ವೀಯಾಗಿ ಸಾಕಾರಗೊಂಡಿದೆ. ಈ ಮಿಶನ್ ಗೆ ಭಾರತ ಖರ್ಚು ಮಾಡಿದ್ದು ರೂ. 615 ಕೋಟಿ ಆದರೆ ರಷ್ಯಾ ರೂ. 1,700 ಕೋಟಿ ಖರ್ಚು ಮಾಡಿಯೂ ತನ್ನ ಮಿಶನ್ ನಲ್ಲಿ ವಿಫಲವಾಯಿತು. ಮಗ ಪರೀಕ್ಷೆಯೊಂದರಲ್ಲಿ ರ‍್ಯಾಂಕ್ ಗಿಟ್ಟಿಸಿದಾಗ ತಂದೆ ಅವನಿಗೆ ಸ್ವೀಟ್ ತಂದು ತಿನ್ನಿಸುತ್ತಾನೆ, ಸ್ವೀಟ್ ಗೆ ಯಾಕೆ ಖರ್ಚು ಮಾಡಿದೆ ಅಂತ ಕೇಳುವ ಮಟ್ಠಾಳತವನ್ನು ಕೇವಲ ಕಾಂಗ್ರೆಸ್ ನಾಯಕರು ಪ್ರದರ್ಶಿಸಬಲ್ಲರು ಎಂದು ಈಶ್ವರಪ್ಪ ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ