ರಕ್ಷಾ ಬಂಧನ: ಸಹೋದರರಿಗೆ ಕಿಡ್ನಿ ದಾನ ಮಾಡುವ ಮೂಲಕ ಜೀವ ಉಳಿಸಿದ ಸಹೋದರಿಯರು
ರಕ್ಷಾ ಬಂಧನಕ್ಕೂ ಮುನ್ನ ಸಹೋದರಿಯರು ಕಿಡ್ನಿ ದಾನ ಮಾಡುವ ಮೂಲಕ ಸಹೋದರರ ಜೀವ ಉಳಿಸಿದ್ದಾರೆ. ಆಸ್ತಿ, ಬೆಳ್ಳಿ, ಬಂಗಾರ ಎನ್ನುವ ವಿಚಾರವಿಟ್ಟುಕೊಂಡು ಸಂಬಂಧವನ್ನೇ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ತನ್ನದೊಂದು ಭಾಗವನ್ನೇ ಆಕೆ ತನ್ನ ಸಹೋದರಿಗಾಗಿ ನೀಡಿದ್ದಾಳೆ. 26 ವರ್ಷದ ಪ್ರಾಚಿ ಮಹೇಶ್ವರಿ ತನ್ನ ಒಂದು ಕಿಡ್ನಿಯನ್ನು ತನ್ನ 20 ವರ್ಷದ ಸಹೋದರ ಅಂಕುರ್ಗೆ ದಾನ ಮಾಡಿದ್ದಾರೆ. ತನ್ನ ಸಹೋದರನಿಗೆ ಹುಟ್ಟಿನಿಂದಲೇ ಕಿಡ್ನಿ ಸಂಬಂಧಿತ ಸಮಸ್ಯೆ ಇತ್ತು, ಎಂದಾದರೂ ಅವರಿಗೆ ಕಿಡ್ನಿ ಕಸಿ ಮಾಡಲೇಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು.

ನನ್ನ ಪೋಷಕರು ಹಾಗೂ ಅಕ್ಕ, ನಾನು ಕಿಡ್ನಿ ಪರೀಕ್ಷೆಯನ್ನು ಮಾಡಿಸಿದ್ದೆವು ಅದರಲ್ಲಿ ನನ್ನ ಕಿಡ್ನಿ ಮಾತ್ರ ಅವನ ಕಿಡ್ನಿಗೆ ಅರಿಯಾಗಿ ಮ್ಯಾಚ್ ಆಗುತ್ತೆ ಎಂದು ವೈದ್ಯರು ತಿಳಿಸಿದ್ದರು. ಆ ಸಮಯದಲ್ಲಿ ಪ್ರಾಚಿ ಸಿಎ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ತುಂಬಾ ದಿನ ರಜೆ ಬೇಕಾಗಬಹುದು, ಕಂಪನಿಯಲ್ಲಿ ಅಷ್ಟು ದಿನ ರಜೆ ಕೊಡುವುದಿಲ್ಲ ಎಂದು ಅರಿತ ಸಹೋದರಿ ರಾಜೀನಾಮೆ ನೀಡಿದ್ದರು. ಈ ಸಹೋದರ ಅಧ್ಯಯನವನ್ನು ಮತ್ತೆ ಪ್ರಾರಂಭಿಸಿದ್ದಾನೆ, ಪಿಜಿ ಮಾಡುತ್ತಿದ್ದಾನೆ, ತಾನು ಸ್ವಯಂ ಉದ್ಯೋಗ ಪ್ರಾರಂಭಿಸಿರುವುದಾಗಿ ಪ್ರಾಚಿ ಹೇಳಿದ್ದಾರೆ.
ಅಂಥದ್ದೇ ಮತ್ತೊಂದು ಘಟನೆ ಬೇಬಿ ನಾಟಿಯಾಲ್ ಎಂಬುವವರು ತನ್ನ ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ದೀಪಚಂದ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ತು. ಹೆಚ್ಚು ಆರೋಗ್ಯ ಹದಗೆಟ್ಟಾಗ ಆಸ್ಪತ್ರೆ ತಲುಪಿದೆ. ಅಲ್ಲಿ ತಪಾಸಣೆ ನಡೆಸಿದಾಗ ಅವರ ಎರಡೂ ಕಿಡ್ನಿಗಳು ಹಾಳಾಗಿರುವುದು ಕಂಡುಬಂದಿದೆ. ವೈದ್ಯರು ಡಯಾಲಿಸಿಸ್‌ಗೆ ಸಲಹೆ ನೀಡಿದರು. ಸುಮಾರು ಎರಡು ವರ್ಷಗಳ ಕಾಲ ಅವರ ಚಿಕಿತ್ಸೆ ಮುಂದುವರೆಯಿತು.
ಮತ್ತಷ್ಟು ಓದಿ: Raksha Bandhan 2023: ಅಣ್ಣನಿಗೆ ಸದಾ ಒಳಿತು ಬಯಸುವ ತಂಗಿಗೆ, ಅಣ್ಣ ತರುವ ಉಡುಗೊರೆಯ ಕಾತುರ
ಸ್ಥಿತಿಯನ್ನು ಗಮನಿಸಿದ ವೈದ್ಯರು ಆದಷ್ಟು ಬೇಗ ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿದ್ದರು. ಅವರ ಸಹೋದರಿ ತನ್ನೊಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಈಗ ದೀಪಚಂದ್ ಅವರ ಆರೋಗ್ಯ ನಿಧಾನವಾಗಿ ಸುಧಾರಿಸುತ್ತಿದೆ. ನನ್ನ ಸಹೋದರಿ ಬೇಬಿ ನಾಟಿಯಲ್ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ದೀಪಚಂದ್ ಹೇಳಿದ್ದಾರೆ. ಅವನ ಇದರಿಂದಾಗಿ ನನಗೆ ಹೊಸ ಬದುಕು ಸಿಕ್ಕಿದೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ