Raksha Bandhan 2023: ಅಣ್ಣನಿಗೆ ಸದಾ ಒಳಿತು ಬಯಸುವ ತಂಗಿಗೆ, ಅಣ್ಣ ತರುವ ಉಡುಗೊರೆಯ ಕಾತುರ
ರಕ್ಷಾಬಂಧನ ನನ್ನ ಜೀವನದಲ್ಲಿ ಬಂದಿರುವುದು ಬಹಳ ಖುಷಿ ದಿನ ಅಣ್ಣ ಕೊಡುವ ಕಂಜೂಸ್ ಗಿಫ್ಟ್ ಸಿಗುವುದು ಒಂದೇ ದಿನ ಅದನ್ನು ಬಿಡುವುದು ಸರಿಯಲ್ಲ. ಖುಷಿ ಖುಷಿಯಿಂದ ರಾಕಿ ಕಟ್ಟಿ ಕೈ ಮುಂದೆ ಚಾಚಿದೆ ಇದೇನು ಗಿಫ್ಟ್ ಬೇಕಾ ಎಂದು ಕೇಳಿದ ಅಣ್ಣ ಇವತ್ತು ತಮಾಷೆನ ಎಂದಾಗ ಸುಮ್ಮಗೆ ಇರು ಗಿಫ್ಟ್ ಅಂತೆ ಗಿಫ್ಟ್ ಎಂದು ಬೈದು ಕಾಲೇಜ್ಗೆ ಹೋದ ಅಣ್ಣ ಮತ್ತೆ ಸಂಜೆ ಮನೆಗೆ ಬಂದ ಈಗಾದರೂ ತಂದಿರುವ ಎಂದಾಗ ಕಚ್ಚಮ್ಯಾಂಗೋ ಐವತ್ತು ಪೈಸೆ ಚಾಕಲೆಟ್ ಕೈ ಮೇಲೆ ಇಟ್ಟ ರಾಕಿಗೆ ಹಾಕಿದ ಐದು ರೂಪಾಯಿ ಮತ್ತೆ ಅಣ್ಣನ ಜೇಬಿಂದಲೇ ವಸೂಲಿ ಮಾಡಿದೆ.
ಭಾರತದ ಪುರಾತನ ಕಾಲದಿಂದ ಬಂದಿರುವ ಸಂಸ್ಕೃತಿಯಲ್ಲಿ ರಕ್ಷಾಬಂಧನ (Raksha Bandhan) ಎಂಬುದು ಬಹಳ ವಿಶೇಷವಾದದ್ದು. ಹಿಂದೂ ಕ್ಯಾಲೆಂಡರ್ನ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಲ್ಲಿ ಬರುವಂಥದ್ದು. ದಾರ ಮತ್ತು ರಕ್ಷೆ ಇವು ರಕ್ಷಣೆ ಮತ್ತು ಸಂಬಂಧಗಳೆರಡನ್ನು ಕೂಡಿದೆ, ಭಾರತೀಯರಲ್ಲಿ ರಕ್ಷಾ ಬಂಧನ ಆಚರಣೆ ಹೇಳುವುದಕ್ಕಿಂತ ನೋಡುವುದೇ ಒಂದು ಖುಷಿ. ರೇಷ್ಮೆ ನೂಲುಗಳು ಒಟ್ಟು ಕೂಡಿದಾಗ ಎಷ್ಟು ಬಲಿಷ್ಠವಾಗುತ್ತದೆಯೋ ಹಾಗೆಯೇ ರೇಷ್ಮೆಯಿಂದ ಮಾಡಿದ ರಕ್ಷೆಗಳು ಆ ಸಹೋದರ ಸಹೋದರಿಯ ಸಂಬಂಧವನ್ನು ಮತ್ತಷ್ಟು ಬಲಿಷ್ಠ ಗೊಳಿಸುತ್ತದೆ. ಅಣ್ಣನ ಒಂದು ಮಣಿಕಟ್ಟಿನ ದಾರ ಅಮೂಲ್ಯವಾದ ಸಂಬಂಧದ ಕೊಂಡಿಯನ್ನು ಬಿಗಿಗೊಳಿಸುತ್ತದೆ. ಅಣ್ಣ ಅಂದರೆ ಅದೇನೋ ಭಯ, ಪ್ರೀತಿ, ನಂಬಿಕೆಯ ಜೊತೆಗೆ ಧೈರ್ಯ. ಎಷ್ಟೇ ಜಗಳ ಮಾಡಿ ಕೋಪಗೊಂಡು ಮಾತು ಬಿಟ್ಟರು ಅದು ಕೇವಲ ಒಂದು ದಿನ, ಮತ್ತೆ ಅದೇ ಗಲಾಟೆ ಹೊಡೆದಾಟ ಬಡಿದಾಟ. ಈ ಸುಮಧುರ ಸಂಬಂಧಕ್ಕೆ ಇರುವ ದಿನ ರಕ್ಷಾ ಬಂಧನ. ಇದೊಂದು ಸಹೋದರತ್ವದ ಪ್ರತೀಕ ಶ್ರೀ ರಕ್ಷಾ ಕರ್ತವ್ಯದ ಜೋತಕ ಅಣ್ಣ ತಂಗಿಯರ ಅನುಬಂಧ ರಕ್ಷಾಬಂಧನದ ಭದ್ರ ಸಂಬಂಧ.
ಹೀಗೆ ರಕ್ಷಾಬಂಧನ ನನ್ನ ಜೀವನದಲ್ಲಿ ಬಂದಿರುವುದು ಬಹಳ ಖುಷಿ ದಿನ ಅಣ್ಣ ಕೊಡುವ ಕಂಜೂಸ್ ಗಿಫ್ಟ್ ಸಿಗುವುದು ಒಂದೇ ದಿನ ಅದನ್ನು ಬಿಡುವುದು ಸರಿಯಲ್ಲ. ಖುಷಿ ಖುಷಿಯಿಂದ ರಾಕಿ ಕಟ್ಟಿ ಕೈ ಮುಂದೆ ಚಾಚಿದೆ ಇದೇನು ಗಿಫ್ಟ್ ಬೇಕಾ ಎಂದು ಕೇಳಿದ ಅಣ್ಣ ಇವತ್ತು ತಮಾಷೆನ ಎಂದಾಗ ಸುಮ್ಮಗೆ ಇರು ಗಿಫ್ಟ್ ಅಂತೆ ಗಿಫ್ಟ್ ಎಂದು ಬೈದು ಕಾಲೇಜ್ಗೆ ಹೋದ ಅಣ್ಣ ಮತ್ತೆ ಸಂಜೆ ಮನೆಗೆ ಬಂದ ಈಗಾದರೂ ತಂದಿರುವ ಎಂದಾಗ ಕಚ್ಚಮ್ಯಾಂಗೋ ಐವತ್ತು ಪೈಸೆ ಚಾಕಲೆಟ್ ಕೈ ಮೇಲೆ ಇಟ್ಟ ರಾಕಿಗೆ ಹಾಕಿದ ಐದು ರೂಪಾಯಿ ಮತ್ತೆ ಅಣ್ಣನ ಜೇಬಿಂದಲೇ ವಸೂಲಿ ಮಾಡಿದೆ. ಬೇಸರದಿಂದಲೆ ಮಲಗಿದೆ ಕಿಟಕಿ ಬಳಿ ಏನೋ ಪೆಟ್ಟಿಗೆ ಕಾಣಿಸಿತು ತೆರೆದು ನೋಡಿದೆ ರಕ್ಷಾಬಂಧನದ ಗಿಫ್ಟ್ ಎಂದು ಭಾವಿಸಿ ತೆಗೆದು ನೋಡಿದರೆ ಬಾಕ್ಸ್ ಒಳಗೆ ಬಾಕ್ಸ್ ಹೀಗೆ ಬಾಕ್ಸ್ ಯೆ ತುಂಬಿತ್ತು ಅದರೊಳಗೆ ಚಿಕ್ಕ ಬಾಕ್ಸ್ ತೆಗೆದು ನೋಡಿದರೆ ಸಿಲ್ವರ್ ರಿಂಗ್ ಇದುವೇ ಅಣ್ಣನ ಕಿತಾಪತಿ ರಕ್ಷಬಂಧನದ ಗಿಫ್ಟ್ ಆಗಿತ್ತು.
ಇದನ್ನೂ ಓದಿ: ಈ ಬಾರಿಯ ರಕ್ಷಾ ಬಂಧನಕ್ಕೆ ಬಂತು ಖಾದಿ ರಾಖಿ; ದೆಹಲಿಯಲ್ಲಿ ಅನಾವರಣ, ಏನಿದರ ವಿಶೇಷ?
ಅಣ್ಣನ ಕೈಗೆ ದಾರ ಕಟ್ಟಿ ಅಣ್ಣ ನನಗೆ ರಕ್ಷಕನಾಗಿರಲಿ ಎಂದು ಬೇಡಿಕೊಳ್ಳದೆ ರಾಖಿ ಕಟ್ಟಿ ಅಣ್ಣನ ಹಣೆಗೆ ತಿಲಕವಿಟ್ಟು, ಅಣ್ಣನ ಆಶೀರ್ವಾದದ ಜೊತೆಗೆ ಅವನ ಪ್ರೀತಿಯ ಉಡುಗರೇಯ ಒಂದು ಅದ್ಭುತ ಗಳಿಗೆಗೆ ಕಾಯುವ ತಂಗಿ. ಅಣ್ಣನಿಗೂ ಸದಾ ಒಳಿತಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಕಾವಲುಗಾರ ಅಣ್ಣ ರಕ್ಷಾ ಕವಚವಾಗಿರುತ್ತಾನೆ. ಒಡಹುಟ್ಟಿದ ಅಣ್ಣನೇ ಆಗಲಿ ಅಲ್ಲದೆ ಇರಲಿ, ಅಣ್ಣ ಎಂಬ ಪಟ್ಟ ಕಟ್ಟಿದ ಮೇಲೆ ಅಣ್ಣನ ಪಾತ್ರ ಎಂಬುದು ಕಾರ್ಯರೂಪಕ್ಕೆ ಬರಬೇಕು. ತಂಗಿಯ ಸರಿ ತಪ್ಪುಗಳನ್ನು ತಿದ್ದಿ ಸರಿ ದಾರಿ ಹಿಡಿಯಲು, ಅದೇ ರೀತಿ ಅಣ್ಣ ದಾರಿ ತಪ್ಪಿದಾಗ ತಂಗಿ ಬೈದು ತಪ್ಪು ಒಪ್ಪುಗಳನ್ನು ನೋಡಿಕೊಳ್ಳುತ್ತಾಳೆ. ಇಲ್ಲಿ ಇಬ್ಬರಲ್ಲಿಯೂ ಸಮಾನತೆ ಭಾತೃತ್ವದ ಸ್ವರೂಪ ನೋಡಬಹುದು. ಅಣ್ಣ ತಂಗಿ ಎಂದ ಮೇಲೆ ಅದೆಷ್ಟೇ ಇರಿಸು ಮುರಿಸು ಇದ್ದದ್ದೆ. ಇವು ಒಂದು ಅಮೂಲ್ಯ ಕ್ಷಣಗಳು. ಈ ರಕ್ಷಾ ಬಂಧನ ಹೇಳುವಂತಹದ್ದು ಇಂದು ರಕ್ಷಾಬಂಧನ ಆಚರಿಸಿ, ಅಣ್ಣನ ಕೈಗೆ ರಕ್ಷೆ ಕಟ್ಟಿ ನಾಳೆ ದಾರದ ಗಂಟು ಬಿಡಿಸುವ, ಆ ಒಂದು ಕ್ಷಣ ನಂಬಿಕೆ ರಕ್ಷಣೆ ಇರುವುದಲ್ಲ. ಪ್ರತಿಕ್ಷಣ ದಾರದ ಫಲ ಅದರಲ್ಲಿನ ಸಂಬಂಧ ಉಳಿಸುವುದು ಬೆಳೆಸುವುದು, ಪ್ರೀತಿ ವಿಶ್ವಾಸದಿಂದ ಕೂಡಿರುವುದು ಶ್ರೀರಕ್ಷೆಯ ರಕ್ಷಾ ಬಂಧನ.
ಸುಮನ ಪುತ್ತೂರು
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: