Raksha Bandhan 2023: ರಾಖಿ ಕಟ್ಟಲು ಬಂದ ಹುಡುಗಿಯರಿಂದ ತಪ್ಪಿಸಿಕೊಂಡು ಓಡಿ ಹೋದ ಹುಡುಗರು, ಕಾಲೇಜಿನ ಈ ದಿನಗಳೇ ಸುಂದರ

ಶ್ರೀ ಕೃಷ್ಣ ಸುದರ್ಶನ ಚಕ್ರವನ್ನು ಪ್ರಯೋಗಿಸಿ ತನ್ನ ಕೈಗೆ ಗಾಯ ಮಾಡಿಕೊಂಡಾಗ ಅದನ್ನು ಕಂಡ ದ್ರೌಪದಿ ಅವಳ ಸೀರೆಯಿಂದ ಒಂದು ಪಟ್ಟಿಯನ್ನು ಹರಿದು ಶ್ರೀ ಕೃಷ್ಣನ ಕೈಗೆ ಕಟ್ಟುತ್ತಾಳೆ. ಆಗ ಶ್ರೀ ಕೃಷ್ಣ ದ್ರೌಪದಿಗೆ 'ಈ ರಕ್ಷೆ ಕಷ್ಟದ ಸಮಯದಲ್ಲಿ ನಿನಗೆ ನೆರವಾಗುತ್ತದೆ' ಎಂದು ಮಾತು ಕೊಡುತ್ತಾನೆ.

Raksha Bandhan 2023: ರಾಖಿ ಕಟ್ಟಲು ಬಂದ ಹುಡುಗಿಯರಿಂದ ತಪ್ಪಿಸಿಕೊಂಡು ಓಡಿ ಹೋದ ಹುಡುಗರು, ಕಾಲೇಜಿನ ಈ ದಿನಗಳೇ ಸುಂದರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2023 | 11:04 AM

ಒಮ್ಮೆ ಶ್ರೀ ಕೃಷ್ಣ ಸುದರ್ಶನ ಚಕ್ರವನ್ನು ಪ್ರಯೋಗಿಸಿ ತನ್ನ ಕೈಗೆ ಗಾಯ ಮಾಡಿಕೊಂಡಾಗ ಅದನ್ನು ಕಂಡ ದ್ರೌಪದಿ ಅವಳ ಸೀರೆಯಿಂದ ಒಂದು ಪಟ್ಟಿಯನ್ನು ಹರಿದು ಶ್ರೀ ಕೃಷ್ಣನ ಕೈಗೆ ಕಟ್ಟುತ್ತಾಳೆ. ಆಗ ಶ್ರೀ ಕೃಷ್ಣ ದ್ರೌಪದಿಗೆ ‘ಈ ರಕ್ಷೆ ಕಷ್ಟದ ಸಮಯದಲ್ಲಿ ನಿನಗೆ ನೆರವಾಗುತ್ತದೆ’ ಎಂದು ಮಾತು ಕೊಡುತ್ತಾನೆ. ಮುಂದೆ ರಾಜಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿದ ಸಂದರ್ಭದಲ್ಲಿ ಕೃಷ್ಣ ತನ್ನ ಶಕ್ತಿಯನ್ನು ಉಪಯೋಗಿಸಿ ದ್ರೌಪದಿಯ ಮಾನ ಕಾಪಾಡುತ್ತಾನೆ. ಹೀಗೆ ರಕ್ಷಾಬಂಧನದ ಬಗ್ಗೆ ಹಲವಾರು ಪುರಾಣ ಕಥೆಗಳಿವೆ.

ರಕ್ಷಾ ಬಂಧನ ಎಂದಾಗ ನನಗೊಂದು ಘಟನೆ ಥಟ್ಟನೆ ನೆನಪಿಗೆ ಬಂತು ಅದೇನೆಂದರೆ ಅದು ಪದವಿಪೂರ್ವ ವಿದ್ಯಾಭ್ಯಾಸದ ಸಂದರ್ಭದಲ್ಲಿ ಒಂದು ದಿನ ನಾನು ಗೆಳೆಯರೊಂದಿಗೆ ಎಂದಿನಂತೆ ಮುಂಜಾನೆ ಕಾಲೇಜಿಗೆ ಹೋಗುತ್ತಿದ್ದೆ. ತರಗತಿಗೆ ತಲುಪುವಷ್ಟರಲ್ಲಿ ಹುಡುಗಿಯರು ರಕ್ಷಾಬಂಧನದ ಶುಭಾಶಯಗಳು ಎಂದು ಜೋರಾಗಿ ಕೂಗುತ್ತಿರುವುದು ಕಿವಿಗೆ ಬಿದ್ದಿದ್ದೆ ತಡ ಅಷ್ಟರಲ್ಲಿ ನನ್ನ ಇಬ್ಬರು ಸ್ನೇಹಿತರು ನಮಗೆ ಯಾರೂ ರಕ್ಷೆ ಕಟ್ಟುವುದು ಬೇಡ ಎಂದು ಎದ್ದು ಬಿದ್ದು ಓಡಿದರು. ಅದೊಂದೆಡೆಯಾದರೆ ಇತ್ತ ಹುಡುಗಿಯರು ನಮ್ಮ ಬರುವಿಕೆಯನ್ನೇ ಕಾದು ಕುಳಿತು ನಮಗೆ ರಕ್ಷೆ ಕಟ್ಟಲು ಪ್ರಾರಂಭಿಸಿದರು. ಕೇವಲ ರಕ್ಷೆ ಕಟ್ಟುವುದು ಮಾತ್ರವಲ್ಲದೆ ನಮ್ಮಿಂದ ಉಡುಗೊರೆಯನ್ನು ಕೇಳಿ ಕೇಳಿ ಪಡೆದುಕೊಂಡರು. ಆಗ ನಮಗೆ ತಿಳಿದಿದ್ದು ಹುಡುಗಿಯರು ರಕ್ಷೆ ಕಟ್ಟಿದ್ದು ಕೇವಲ ಈ ಉಡುಗೊರೆಗಷ್ಟೇ ಎಂದು. ಆದರೆ ಆ ದಿನ ನಾವೇನು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಲ್ಲವೇ. ನಂತರ ಓಡಿ ಹೋಗಿ ಬಚ್ಚಿಟ್ಟು ಕುಳಿತಿದ್ದ ಇಬ್ಬರು ಗೆಳೆಯರನ್ನು ಹುಡುಕಿ ಎಳೆದು ತಂದು ಆ ಹುಡುಗಿಯರ ಕೈಯಿಂದ ರಾಖಿ ಕಟ್ಟಿಸಿದವು. ಆ ದಿನಗಳ ಸಂಭ್ರಮವೇ ಅಂತದ್ದು. ಹೀಗೆ ನೆನಪುಗಳನ್ನು ಮೆಲುಕು ಹಾಕುತ್ತಾ ಹೋದರೆ ಅದೆಷ್ಟೋ ಇವೆ.

ಇದನ್ನೂ ಓದಿ:ಒಂದು ಬಾರಿ ಅಣ್ಣ ಎಂದು ಕರೆಯಲು ಅವಕಾಶ ನೀಡು, ನಿನ್ನ ಪ್ರೀತಿಗಾಗಿ ಚಡಪಡಿಸುತ್ತಿರುವ ತಂಗಿ

ಇನ್ನು ರಕ್ಷೆಯ ಬಗ್ಗೆ ಹೇಳುವುದಾದರೆ ರಕ್ಷಾ ಬಂಧನವು ಅಣ್ಣ ತಂಗಿಯರ ನಡುವಿನ ಅಮೂಲ್ಯವಾದ ಬಂಧನವಾಗಿದೆ. ರಕ್ಷೆಯನ್ನು ಕಟ್ಟುವ ಉದ್ದೇಶ ರಕ್ಷೆ ಕಟ್ಟಿಸಿಕೊಂಡವರು ತಂಗಿಗೆ ಅಣ್ಣನ ಸ್ಥಾನದಲ್ಲಿ ನಿಂತು ಸದಾ ರಕ್ಷಣೆಯನ್ನು ಕೊಡುವುದಾಗಿರುತ್ತದೆ. ಒಮ್ಮೆ ರಾಕಿಯನ್ನು ಧರಿಸಿದರೆ ಮುಂದಿನ ರಕ್ಷಾಬಂಧನದವರೆಗೆ ಅದು ನಮ್ಮ ಕೈಯಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬೇಕು ಮಾತ್ರವಲ್ಲ ನಮ್ಮ ಜವಾಬ್ದಾರಿಯಾಗಿರುತ್ತದೆ.

ಜಿತೇಶ್ ಅಡ್ಡಂತ್ತಡ್ಕ

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ