Raksha Bandhan Special: ಪ್ರತಿಯೊಬ್ಬ ಅಣ್ಣನೂ ತನ್ನ ತಂಗಿಯ ಸಲುವಾಗಿ ನಿರ್ವಹಿಸಬೇಕಾದ ಕರ್ತವ್ಯಗಳು

ಅಣ್ಣ-ತಂಗಿಯರ ಸಂಬಂಧ ಒಂದು ಸುಮಧುರವಾದ ಬಂಧವಾಗಿದೆ. ಈ ಸಂಬಂಧದಲ್ಲಿ ಜಗಳ, ತುಂಟಾಟ, ಪ್ರೀತಿ ಎಲ್ಲವನ್ನು ಕಾಣಬಹುದು. ಪ್ರತಿಯೊಬ್ಬ ಅಣ್ಣನೂ ತಂಗಿಯ ರಕ್ಷಣೆಯು ತನ್ನ ಧರ್ಮವೆಂದು ಭಾವಿಸುತ್ತಾನೆ. ಹೀಗೆ ರಕ್ಷಣೆಯ ಜೊತೆ ಜೊತೆಗೆ ತಂಗಿಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತಾ ಆಕೆ ಜೀವನದಲ್ಲಿ ಸಾಧಿಸಲು ಆತ್ಮವಿಶ್ವಾಸವನ್ನು ನೀಡುವ ಮೂಲಕ ನಿಮ್ಮ ತಂಗಿಗೆ ಬೆನ್ನೆಲುಬಾಗಿ ನಿಲ್ಲಿ.

Raksha Bandhan Special: ಪ್ರತಿಯೊಬ್ಬ ಅಣ್ಣನೂ ತನ್ನ ತಂಗಿಯ ಸಲುವಾಗಿ ನಿರ್ವಹಿಸಬೇಕಾದ ಕರ್ತವ್ಯಗಳು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2023 | 3:41 PM

ಜಗತ್ತಿನ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಅಣ್ಣ ತಂಗಿಯರ ಸಂಬಂಧವೂ ಒಂದು. ಈ ಸಂಬಂಧದಲ್ಲಿ ಜಗಳ, ತುಂಟಾಟ, ಪ್ರೀತಿ ಎಲ್ಲವನ್ನು ಕಾಣಬಹುದು. ಪ್ರತಿಯೊಬ್ಬ ಅಣ್ಣನೂ ತಂಗಿಯ ರಕ್ಷಣೆಯು ತನ್ನ ಧರ್ಮವೆಂದು ಭಾವಿಸುತ್ತಾನೆ. ಇದರ ಜೊತೆಗೆ ಹುಡುಗಿಯರು ಹೊರಗಡೆ ಹೋಗುವುದು ಮತ್ತು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಪ್ರಯತ್ನಿಸಿದಾಗ ಸಮಾಜವು ಅದಕ್ಕೆ ಕೊಂಕು ಮಾತುಗಳನ್ನಾಡುತ್ತದೆ. ಆ ಸಂದರ್ಭದಲ್ಲಿ ನಿಮ್ಮ ತಂಗಿಯ ಪರವಾಗಿ ನಿಂತು ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ, ಸಮಾಜದಲ್ಲಿ ದಿಟ್ಟ ಹೆಣ್ಣುಮಗಳಾಗಿ ಹೇಗೆ ಬದುಕಬೇಕು ಎಂಬ ಬದುಕಿನ ಪಾಠವನ್ನು ಹೇಳಿಕೊಡಿ. ಮಾತ್ರವಲ್ಲದೇ ತಂಗಿಯ ಪರವಾಗಿ ಇನ್ನೂ ಕೆಲಸಗಳನ್ನು ನೀವು ನಿರ್ವಹಿಸಬೇಕು. ಹಾಗಾದರೆ ರಕ್ಷಾಬಂಧನದ ಈ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬ ಅಣ್ಣನೂ ತನ್ನ ತಂಗಿಯ ಸಲುವಾಗಿ ನಿರ್ವಹಿಸಬೇಕಾದ ಕರ್ತವ್ಯಗಳು ಯಾವುದೆಂದು ನೋಡೋಣ.

ಪ್ರತಿಯೊಬ್ಬ ಅಣ್ಣನೂ ತನ್ನ ತಂಗಿಗಾಗಿ ಮಾಡಬೇಕಾದ ಕೆಲಸಗಳು:

ತಂಗಿಗೆ ಬೆಂಬಲವಾಗಿ ನಿಲ್ಲಿ:

ನಿಮ್ಮ ತಂಗಿಯ ಪ್ರತಿಯೊಂದು ಕನಸುಗಳನ್ನು ನನಸಾಗಿಸಲು ಬೆಂಬಲವಾಗಿ ನಿಲ್ಲಿ. ಕೆಲವೊಮ್ಮೆ ಪೋಷಕರು ಅಥವಾ ಕುಟುಂಬದವರು ಹೆಣ್ಣು ಮಗು ಸ್ವತಂತ್ರಳಾಗಿ ಜೀವನ ಕಟ್ಟಿಕೊಳ್ಳುತ್ತೇನೆ ಎಂದರೆ ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಆಕೆಗೆ ಮದುವೆಯಾಗಲು ಒತ್ತಡವನ್ನು ಹೇರುತ್ತಾರೆ. ಈ ಸಮಯದಲ್ಲಿ ನಿಮ್ಮ ತಂಗಿಯ ಪರವಾಗಿ ಮಾತನಾಡಿ, ಆಕೆಗೆ ಬೆಂಬಲವಾಗಿ ನಿಂತುಕೊಳ್ಳಬೇಕು. ನಿಮ್ಮ ಈ ಬೆಂಬಲ ಆಕೆಯನ್ನು ಇನ್ನಷ್ಟು ಬಲಗೊಳಿಸುತ್ತದೆ.

ಪ್ರೀತಿಯನ್ನು ನೀಡಿ:

ಸಾಮಾನ್ಯವಾಗಿ ಅಣ್ಣನಾದವನು ಕೆಲವೊಂದು ಬಾರಿ ತಂಗಿಗೆ ಗದರುತ್ತಾನೆ. ಇನ್ನೂ ಕೆಲವು ಸಹೋದರರು ತಮ್ಮ ತಂಗಿಯ ಪ್ರತಿಯೊಂದು ವಿಷಯದಲ್ಲೂ ಕೊಂಕು ಮಾತನಾಡುತ್ತಾರೆ. ಈ ನಿಮ್ಮ ಮಾತುಗಳು ಆಕೆಯನ್ನು ಕುಗ್ಗಿಸುತ್ತದೆ. ನೀವು ನಿಮ್ಮ ಸಂಪ್ರದಾಯವಾದಿ ವಿಚಾರಗಳನ್ನು ಬದಿಗಿಟ್ಟು, ಸ್ವತಂತ್ರವಾಗಿ ಬೆಳೆಯಲು ತಂಗಿಗೆ ಬೆನ್ನೆಲುಬಾಗಿ ನಿಲ್ಲಿ, ಸಾಕಷ್ಟು ಪ್ರೀತಿ ತೋರಿಸಿ. ಖಂಡಿತವಾಗಿಯೂ ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಬಲಗೊಳ್ಳುತ್ತದೆ.

ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಿ:

ತಂಗಿಯು ನಿಮಗೆ ಗೌರವವನ್ನು ನೀಡುವ ಹಾಗೆ ಆಕೆಗೂ ನೀವು ಗೌರವವನ್ನು ನೀಡಿ. ಹುಸಿ ಮುನಿಸು, ಜಗಳ ಇದೆಲ್ಲಾ ಒಡಹುಟ್ಟಿದವರ ನಡುವೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ವಯಸ್ಸಿನಲ್ಲಿ ತಂಗಿಗಿಂತ ದೊಡ್ಡವರಾಗಿರುವ ನೀವು ಹುಸಿ ಮುನಿಸನ್ನು ಮರೆತು, ತಂಗಿಗೆ ಆಕೆಗೆ ನೀಡಬೇಕಾದ ಗೌರವವನ್ನು ನೀಡುವ ಮೂಲಕ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಿ.

ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ:

ಕೆಲವೊಮ್ಮೆ ಸಹೋದರಿಯು ತನ್ನ ಸಹೋದರ ತನ್ನನ್ನು ಅರ್ಥಮಾಡಿಕೊಳ್ಳಬೇಕೆಂದು ನಿರೀಕ್ಷಿಸುತ್ತಾಳೆ. ನೀವು ಆಕೆಯನ್ನು ಅರ್ಥಮಾಡಿಕೊಂಡಾಗ, ಒಬ್ಬ ಉತ್ತಮ ಸ್ನೇಹಿತನಾಗಿ ತಂಗಿಯ ಜೊತೆಗೆ ನಿಂತಾಗ, ಆಕೆ ನಿಮ್ಮ ಬಳಿ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಾಳೆ. ಹೀಗೆ ತಂಗಿಗೆ ಗದರದೆ, ಒಬ್ಬ ಉತ್ತಮ ಸ್ನೇಹಿತನಾಗಿ ಆಕೆಯ ಜೊತೆಯಾಗಿ ನಿಂತುಕೊಳ್ಳಿ. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಇದನ್ನೂ ಓದಿ: ರಾಖಿ ಕಟ್ಟಲು ಬಂದ ಹುಡುಗಿಯರಿಂದ ತಪ್ಪಿಸಿಕೊಂಡು ಓಡಿ ಹೋದ ಹುಡುಗರು, ಕಾಲೇಜಿನ ಈ ದಿನಗಳೇ ಸುಂದರ

ಆತ್ಮ ವಿಶ್ವಾಸವನ್ನು ಹೆಚ್ಚಿಸಿ:

ಅಣ್ಣ ತಂಗಿಯರ ನಡುವೆ ಕೋಳಿ ಜಗಳ ಇದ್ದೇ ಇರುತ್ತದೆ. ಜೊತೆಗೆ ಅಣ್ಣನಾದವನು ತನ್ನ ತಂಗಿಗೆ ಗೂಬೆ, ಕತ್ತೆ, ಕೋತಿ ಹೀಗೆಲ್ಲಾ ಕರೆಯುತ್ತಾ ರೇಗಿಸುತ್ತಾನೆ. ಆದರೆ ನೀವು ಕಠೋರ ಮಾತುಗಳಿಂದ ನಿಮ್ಮ ತಂಗಿಯನ್ನು ಹೀಯಾಳಿಸಬೇಡಿ. ಮುಖ್ಯವಾಗಿ ಬೇರೊಬ್ಬರ ಮುಂದೆ ಆಕೆಯನ್ನು ಹೀಯಾಳಿಸಬೇಡಿ ಮತ್ತು ಕೂಹಕದ ಮಾತುಗಳನ್ನಾಡಬೇಡಿ. ಈ ನಿಮ್ಮ ಮಾತುಗಳು ಆಕೆಯ ಆತ್ಮ ವಿಶ್ವಾಸಕ್ಕೆ ಧಕ್ಕೆ ತರಬಹುದು. ಅದಕ್ಕಾಗಿಯೇ ನಿಮ್ಮ ಸಹೋದರಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಾ ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ