Raksha Bandhan 2023: ಒಂದು ಬಾರಿ ಅಣ್ಣ ಎಂದು ಕರೆಯಲು ಅವಕಾಶ ನೀಡು, ನಿನ್ನ ಪ್ರೀತಿಗಾಗಿ ಚಡಪಡಿಸುತ್ತಿರುವ ತಂಗಿ
ಪ್ರತಿ ವರ್ಷವು ರಕ್ಷಾ ಬಂಧನದ ದಿನದಂದು ಹೆಣ್ಣು ಮಕ್ಕಳು ಒಡಹುಟ್ಟಿದವರು ಎಂದು ಅಣ್ಣ ತಮ್ಮ ಇಲ್ಲದೆ ಇರುವರು ಅತಿಯಾಗಿ ಕಾಳಜಿ ಧೈರ್ಯ ನೀಡುವ ಜೀವದೊಂದಿಗೆ ಅಣ್ಣ ಎಂದು ಕರೆಯುತ್ತಾ ರಾಖಿ ಕಟ್ಟಲು ಹೋಗುವುದು ಸಹಜ. ಅಣ್ಣ ತಂಗಿಯ ಸಂಬಂಧ ಉಳಿಯಲು ಗಂಟಾಗಿ ಕೈಯಲ್ಲಿ ರಾಖಿ ಕಟ್ಟುವುದು ಒಂದು ವಾಡಿಕೆ. ಹೀಗೆ ಇರುವಾಗ ನಾನು ಒಂದು ಬಾರಿ ಸಂಬಂಧದಲ್ಲಿ ಅಣ್ಣನಾಗಬೇಕಾದವನಿಗೆ ರಾಖಿ ಕಟ್ಟಲು ಹೋದಾಗ ಆತ ಬಹಳ ಹಿಂಜರಿಯುತ್ತಾನೆ.
ರಕ್ಷಾ ಬಂಧನ (Raksha Bandhan) ಎನ್ನುವುದು ಸಹೋದರತ್ವವನ್ನು ರೂಪಿಸುವ ಹಬ್ಬ. ಪ್ರತಿ ವರ್ಷವು ರಕ್ಷಾ ಬಂಧನದ ದಿನದಂದು ಹೆಣ್ಣು ಮಕ್ಕಳು ಒಡಹುಟ್ಟಿದವರು ಎಂದು ಅಣ್ಣ ತಮ್ಮ ಇಲ್ಲದೆ ಇರುವರು ಅತಿಯಾಗಿ ಕಾಳಜಿ ಧೈರ್ಯ ನೀಡುವ ಜೀವದೊಂದಿಗೆ ಅಣ್ಣ ಎಂದು ಕರೆಯುತ್ತಾ ರಾಖಿ ಕಟ್ಟಲು ಹೋಗುವುದು ಸಹಜ. ಅಣ್ಣ ತಂಗಿಯ ಸಂಬಂಧ ಉಳಿಯಲು ಗಂಟಾಗಿ ಕೈಯಲ್ಲಿ ರಾಖಿ ಕಟ್ಟುವುದು ಒಂದು ವಾಡಿಕೆ. ಹೀಗೆ ಇರುವಾಗ ನಾನು ಒಂದು ಬಾರಿ ಸಂಬಂಧದಲ್ಲಿ ಅಣ್ಣನಾಗಬೇಕಾದವನಿಗೆ ರಾಖಿ ಕಟ್ಟಲು ಹೋದಾಗ ಆತ ಬಹಳ ಹಿಂಜರಿಯುತ್ತಾನೆ. ಅದಕ್ಕೆ ಕಾರಣವೂ ನನಗೆ ತಿಳಿಯದು. ತಂಗಿ ಎಂದು ಕಂಡರೆ ಜವಾಬ್ದಾರಿ ಹೆಚ್ಚಾಗುತ್ತದೆಯೋ ಎಂದೋ ಆತನ ಮನಸಲ್ಲಿ ನಾನೇ ಮಡದಿಯಾಗಿ ಬರಬೇಕು ಎಂದೆನ್ನುವ ಆಸೆ ಏನಾದರೂ ಇದ್ದಿರಬಹುದು ಎಂದು ನನ್ನ ಅನುಮಾನ.
ಒಂದು ದಿನ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಈತ ನನ್ನನ್ನು ನಾನು ಇವಳನ್ನು ಸಂಬಂಧಿಕರೊಂದಿಗೆ ನನ್ನ ತಂಗಿ ಎಂದು ನಾನು ಕಂಡೆ ಇಲ್ಲ ಯಾಕೆಂದರೆ ಈಕೆಯನ್ನು ನನ್ನ ಗೆಳತಿ ಎಂದು ಕಂಡಿರುವೆ ಇವಳೊಂದಿಗೆ ಕಳೆದ ಕ್ಷಣವೆಲ್ಲವೂ ಗೆಳೆತನ ಸಂಬಂಧದಿಂದ ಹೊರತು ಇನ್ಯಾವುದು ಇರಲು ಸಾಧ್ಯವಿಲ್ಲ. ಹೆಚ್ಚಿನ ಒಡನಾಟವಿಲ್ಲದೇ ಇದ್ದರೂ ಆಕೆಯನ್ನು ಪ್ರತಿ ಹೆಜ್ಜೆಯಲ್ಲೂ ಗಮನಿಸುತ್ತಾ ರಕ್ಷಕನಾಗಿದ್ದೆ, ಇವಳಿಗೆ ಎಷ್ಟು ಬಾರಿ ತಿಳಿ ಹೇಳಿದರು ಇದನ್ನು ಅರ್ಥೈಸಿಕೊಳ್ಳದೇ ನನಗೆ ನೀನು ಯಾಕೆ ಅಣ್ಣ ಕರೆಯಲು ಬಿಡುವುದಿಲ್ಲ ಜೊತೆಯಾಗಿ ಯಾಕೆ ಬರುವುದಿಲ್ಲ ಎನ್ನುವುದಾಗಿತ್ತು.
ನಾವಿಬ್ಬರೂ ಇದೇ ತರ ಕಿತ್ತಾಡುವುದನ್ನು ಕಂಡು ಪೋಷಕರು ಗಾಬರಿಗೊಳ್ಳುತ್ತಾರೆ. ಈ ಮಕ್ಕಳು ಹೀಗೆ ಇದ್ದರೆ ಮುಂದೊಂದಿನ ಇಬ್ಬರ ಓದಿಗೆ ಬಹುದೊಡ್ಡ ಪರಿಣಾಮ ಉಂಟಾಗಬಹುದು ಎಂದುಕೊಂಡಿದ್ದರು. ಹೀಗಾಗಿ ನಾವೇ ಇವರ ಜಗಳವನ್ನು ನಿಲ್ಲಿಸಬೇಕು ಎಂದು ದಿನಕ್ಕೊಂದು ಪ್ರಯತ್ನವ ಮಾಡುತ್ತಲೇ ಇರುತ್ತಾರೆ. ಅದು ಯಾವುದು ಸಹ ಫಲಕಾರಿಯಾಗಲಿಲ್ಲ. ಹೀಗೆನೆ ಮಾಡಿದ ಉಪಾಯವೆಲ್ಲವೂ ವ್ಯರ್ಥವಾಗಿದೆ ಹಾಗಂತ ಮೌನವಾಗಿ ಕುಳಿತರೆ ಇವರಿಬ್ಬರ ಕಥೆ ಏನಾಗುತ್ತದೆಯೋ ಎಂದು ಭಯ. ಇವರಿಬ್ಬರು ಹತ್ತಿರದಲ್ಲಿದ್ದರೆ ತಾನೆ ಜಗಳ ಎಂದು ನನ್ನನ್ನು ದೂರದ ಊರಿನ ಶಾಲೆಗೆ ಸೇರಿಸಿ ಸರ್ಕಾರದ ವಸತಿ ನಿಲಯದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತಾರೆ.
ಇದನ್ನೂ ಓದಿ: ಅಣ್ಣನಿಗೆ ಸದಾ ಒಳಿತು ಬಯಸುವ ತಂಗಿಗೆ, ಅಣ್ಣ ತರುವ ಉಡುಗೊರೆಯ ಕಾತುರ
ಅಣ್ಣನ ಅಪ್ಪುಗೆಯ ಪ್ರೀತಿ ಬಯಸುವ ನನಗೆ ಒಂದು ದಿನವು ಆ ಅಣ್ಣನಿಗೆ ರಾಖಿ ಕಟ್ಟಲು ಸಾಧ್ಯವಾಗದೇ ಇರುವುದು ದುಃಖದ ಸಂಗತಿ ಹಾಗೆಯೇ ನಾನು ಎಷ್ಟು ದೊಡ್ಡ ಮಟ್ಟಕ್ಕೆ ತಲುಪಿದರು ಈ ನಿರ್ಲಕ್ಷ್ಯವ ಮರೆಯಲು ಸಾಧ್ಯವಿಲ್ಲ. ನೀ ನನ್ನ ತಂಗಿ ಎಂದು ಒಪ್ಪಿಕೊಳ್ಳದೆ ಇರಬಹುದು ಆದರೆ ನಾನು ಮಾತ್ರ ನಿನಗೆ ಅಣ್ಣನ ಸ್ಥಾನವನ್ನೇ ಭದ್ರವಾಗಿ ಇಟ್ಟಿರುವೆ . ಒಂದಲ್ಲ ಒಂದು ದಿವಸ ಈ ತಂಗಿಗಾಗಿಯೇ ನೀನು ಚಡಪಡಿಸುವೆ, ಯಾವಾಗ ಬಂದರೂ ತಂಗಿಯ ಹೃದಯದ ಬಾಗಿಲು ನಿನಗಾಗಿ ತೆರೆದೆ ಇರುತ್ತದೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣ ಶುಭವಾಗಲಿ ನಿನಗೆ ನಿನ್ನ ಪ್ರೀತಿಯ ತಂಗಿಯ ಆಶೀರ್ವಾದ.
ಅನನ್ಯ ಎಚ್, ಸುಬ್ರಹ್ಮಣ್ಯ
Published On - 10:28 am, Wed, 30 August 23