Onam Special Recipe: ಓಣಂ ಹಬ್ಬದಂದು ಪ್ರಾಧನ ಪಾಯಸಂ ಮಾಡಿ, ಇಲ್ಲಿದೆ ಸುಲಭ ಪಾಕವಿಧಾನ

ಯಾವುದೇ ಹಬ್ಬವಾದರೂ ಸರಿ, ಹೆಚ್ಚಿನವರು ಹಬ್ಬದ ಊಟವನ್ನು ಸವಿಯಲು ಕಾಯುತ್ತಿರುತ್ತಾರೆ. ಇಂದು ಓಣಂ ಹಬ್ಬ, ಈ ಹಬ್ಬದ ದಿನ ಕೇರಳದಲ್ಲಿನ ಜನರು ತಮ್ಮ ಮನೆಗಳಲ್ಲಿ ಹಲವಾರು ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಅದರಲ್ಲಿ ಪ್ರಾಧನ ಪಾಯಸಂ (ಅದಾ ಪ್ರಧಾನನ್) ಕೂಡಾ ಒಂದು. ನೀವು ಕೂಡಾ ಈ ದಿನ ಏನಾದರೂ ಸಿಹಿ ಅಡುಗೆ ಮಾಡಬೇಕೆಂದು ಬಯಸುತ್ತಿರಾ. ಹಾಗಿದ್ದರೆ ಬಹಳ ಸುಲಭವಾಗಿ ತಯಾರಿಸಬಹುದಾದ ಪ್ರಾಧನ ಪಾಯಸಂ ಮಾಡಿ. ಈ ಒಂದು ವಿಶೇಷ ರೆಸಿಪಿಯ ಪಾಕವಿಧಾನದ ಮಾಹಿತಿ ಇಲ್ಲಿದೆ.

Onam Special Recipe: ಓಣಂ ಹಬ್ಬದಂದು ಪ್ರಾಧನ ಪಾಯಸಂ ಮಾಡಿ, ಇಲ್ಲಿದೆ ಸುಲಭ ಪಾಕವಿಧಾನ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 29, 2023 | 2:56 PM

ನಮ್ಮ ಕರ್ನಾಟಕದಲ್ಲಿ ನವರಾತ್ರಿ ಹಬ್ಬ, ದೀಪಾವಳಿ ಹಬ್ಬವನ್ನು ಬಹಳ ವಿಜೃಂಭನೆಯಿಂದ ಆಚರಿಸುವ ಹಾಗೆ ಕೇರಳದಲ್ಲಿ ಓಣಂ (Onam) ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದ ದಿನ ಹಲವಾರು ಸಂಪ್ರದಾಯಿಯ ಆಚರಣೆಗಳನ್ನು ಆಚರಿಸುವ ಪದ್ಧತಿ ರೂಡಿಯಲ್ಲಿದೆ. ಅದರಲ್ಲೂ ಈ ದಿನ ವಿಶೇಷ ಜನರು ತಮ್ಮ ಮನೆಗಳಲ್ಲಿ ಹಲವಾರು ಬಗೆಯ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಯಾವುದೇ ಹಬ್ಬವಾದರೂ ಸರಿ, ನಾವು ಆ ದಿನ ಮನೆಯಲ್ಲಿ ಹತ್ತು ಹಲವು ಬಗೆಯ ಖಾದ್ಯಗಳ ಜೊತೆಗೆ ಒಂದು ಸಿಹಿಯನ್ನು ತಯಾರಿಸುತ್ತೇವೆ. ಅದೇ ರೀತಿ ಓಣಂ ಹಬ್ಬದಲ್ಲಿ ‘ಪ್ರಧಾನ ಪಾಯಸಂ’(ಅದಾ ಪ್ರಧಾನನ್) ಎಂಬ ಸಿಹಿಯನ್ನು ಮಾಡುತ್ತಾರೆ. ಸುಲಭವಾಗಿ ಮಾಡಬಹುದಾದ ಈ ಒಂದು ಪ್ರಧಾನ ಪಾಯಸಂ ರೆಸಿಪಿಯ ಪಾಕವಿಧಾನ ಇಲ್ಲಿದೆ.

ಅದಾ ಪ್ರಧಾನನ್ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು:

• 1 ಕಪ್ ಅಕ್ಕಿ

• 2 ಕಪ್ ಬೆಲ್ಲ

• 1 ಕಪ್ ದಪ್ಪ ತೆಂಗಿನಕಾಯಿ ಹಾಲು

• 1 1/2 ಕಪ್ ತೆಳುವಾದ ತೆಂಗಿನಕಾಯಿ ಹಾಲು

• ಗೋಡಂಬಿ

• ಒಣದ್ರಾಕ್ಷಿ

• ಏಲಕ್ಕಿ ಪುಡಿ

• ತುಪ್ಪ

• ಒಣಕೊಬ್ಬರಿ ತುಂಡುಗಳು

ಇದನ್ನೂ ಓದಿ: ಓಣಂ ಹಬ್ಬಕ್ಕೆ ಆರೋಗ್ಯಕರ ತಿಂಡಿ ಅವಿಯಲ್ ಮಾಡುವ ವಿಧಾನ ಹೇಗೆ? ಇಲ್ಲಿದೆ ಪಾಕವಿಧಾನ

ತಯಾರಿಸುವ ವಿಧಾನ:

ಅದಾ ಪ್ರಧಾನನ್ ಪಾಯಸ ಮಾಡಲು ಮೊದಲಿಗೆ ಅಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೀರಿನಲ್ಲಿ ಹಾಕಿ ನೆನೆಯಲು ಬಿಡಿ. ಬಳಿಕ ಒಂದು ಕುಕ್ಕರ್​​ನಲ್ಲಿ ಆ ಅಕ್ಕಿಯನ್ನು ಬೇಯಿಸಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ನೀರು ಮತ್ತು ಬೆಲ್ಲವನ್ನು ಹಾಕಿ ಬೆಲ್ಲ ಕರಗುವವರೆಗೆ ಅದನ್ನು ಕುದಿಯಲು ಬಿಡಿ. ಬೆಲ್ಲ ಚೆನ್ನಾಗಿ ಕರಗಿದ ಬಳಿಕ ಅದಕ್ಕೆ ಬೇಯಿಸಿಟ್ಟ ಅಕ್ಕಿ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಈ ಮಿಶ್ರಣಕ್ಕೆ ತೆಳುವಾದ ತೆಂಗಿನ ಹಾಲನ್ನು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಈ ಮಧ್ಯೆ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಒಣ ಕೊಬ್ಬರಿ ತುಂಡು ಹಾಕಿ ಹುರಿಯಿರಿ. ಅದು ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಹುರಿಯಿರಿ ನಂತರ ಅದನ್ನು ಪಕ್ಕಕ್ಕೆ ಇಟ್ಟು ಬಿಡಿ. ಈಗ ತಯಾರಾಗುತ್ತಿರುವ ಪಾಯಸಕ್ಕೆ ದಪ್ಪ ತೆಂಗಿನ ಹಾಲನ್ನು ಸೇರಿಸಿ ಬೇಯಿಸಿಕೊಳ್ಳಿ. ಈ ಮಿಶ್ರಣ ದಪ್ಪ ಪಾಯಸದ ಹದಕ್ಕೆ ಬಂದ ನಂತರ ಗ್ಯಾಸ್ ಸ್ಟವ್ ಆಫ್ ಮಾಡಿ, ಅದಕ್ಕೆ ಹುರಿದಿಟ್ಟ ಕೊಬ್ಬರಿ ತುಂಡು, ಒಣದ್ರಾಕ್ಷಿ ಮತ್ತು ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡರೆ ಪ್ರಾಧನ ಪಾಯಸಂ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ