ಪ್ರೈವೇಟ್ ಜೆಟ್​, ಹಲವು ಉದ್ಯಮ; ಹೇಗಿದೆ ನೋಡಿ ನಟ ಅಕ್ಕಿನೇನಿ ನಾಗಾರ್ಜುನ ಐಷಾರಾಮಿ ಜೀವನ  

Akkineni Nagarjuna Birthday: ಅಕ್ಕಿನೇನಿ ನಾಗಾರ್ಜುನ ಅವರು ಚಿನ್ನದ ಸ್ಪೂನ್ ಹಿಡಿದುಕೊಂಡು ಬೆಳೆದವರು. ಅವರ ತಂದೆ ನಾಗೇಶ್ವರ್ ರಾವ್ ಕೂಡ ಹಲವು ಉದ್ಯಮ ಹೊಂದಿದ್ದರು. ಅಕ್ಕಿನೇನಿ ನಾಗಾರ್ಜುನ ಸಖತ್ ಶ್ರೀಮಂತ ವ್ಯಕ್ತಿ. ನೂರಾರು ಕೋಟಿ ಆಸ್ತಿ ಒಡೆಯನಾಗಿರುವ ಅವರು, ಸ್ವಂತ ಜೆಟ್ ಕೂಡ ಹೊಂದಿದ್ದಾರೆ. ಅವರ ಒಟ್ಟೂ ಆಸ್ತಿ, ಕಾರ್ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ.

ಪ್ರೈವೇಟ್ ಜೆಟ್​, ಹಲವು ಉದ್ಯಮ; ಹೇಗಿದೆ ನೋಡಿ ನಟ ಅಕ್ಕಿನೇನಿ ನಾಗಾರ್ಜುನ ಐಷಾರಾಮಿ ಜೀವನ  
ಅಕ್ಕಿನೇನಿ ನಾಗಾರ್ಜುನ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 29, 2023 | 9:28 AM

ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರಿಗೆ ಇಂದು (ಆಗಸ್ಟ್ 29) ಜನ್ಮದಿನ. ಅವರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ಕುಟುಂಬದವರು ವಿಶ್ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 64ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ನಾಗಾರ್ಜುನ. ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಸಖತ್ ಶ್ರೀಮಂತ ವ್ಯಕ್ತಿ. ನೂರಾರು ಕೋಟಿ ಆಸ್ತಿ ಒಡೆಯನಾಗಿರುವ ಅವರು, ಸ್ವಂತ ಜೆಟ್ ಕೂಡ ಹೊಂದಿದ್ದಾರೆ. ಅವರ ಒಟ್ಟೂ ಆಸ್ತಿ, ಕಾರ್ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ.

ಸಿನಿಮಾ ಜರ್ನಿ

ಅಕ್ಕಿನೇನಿ ನಾಗಾರ್ಜುನ ಕುಟುಂಬಕ್ಕೆ ಚಿತ್ರರಂಗದ ಹಿನ್ನೆಲೆ ಇದೆ. ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರ ಮಗನಾಗಿ ಅಕ್ಕಿನೇನಿ ನಾಗಾರ್ಜುನ ಅವರು 1959ರ ಆಗಸ್ಟ್ 29ರಂದು ಜನಿಸಿದರು. ಅಕ್ಕಿನೇನಿ ನಾಗಾರ್ಜುನ ಅವರ ನಟನೆಯ ‘ವಿಕ್ರಮ್’ ಸಿನಿಮಾ 1986ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ನಂತರ ಹಲವು ಚಿತ್ರಗಳಲ್ಲಿ ನಟಿಸಿದರು. 2022ರಲ್ಲಿ ಅವರ ನಟನೆಯ ‘ದಿ ಘೋಸ್ಟ್’ ಸಿನಿಮಾ ಬಿಡುಗಡೆ ಆಯಿತು. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ಚಿತ್ರರಂಗ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.

ಒಟ್ಟೂ ಆಸ್ತಿ ಎಷ್ಟು?

ಅಕ್ಕಿನೇನಿ ನಾಗಾರ್ಜುನ ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟೂ ಆಸ್ತಿ 960 ಕೋಟಿ ರೂಪಾಯಿ ಇದೆ. ನಾಗಾರ್ಜುನ ಅವರ ಪ್ರತಿ ತಿಂಗಳ ಆದಾಯ 4 ಕೋಟಿ ರೂಪಾಯಿ ಎನ್ನಲಾಗಿದೆ. ವಿಶೇಷ ಎಂದರೆ ಅವರು ದೊಡ್ಡ ಬಿಸ್ನೆಸ್​ಮೆನ್​ ಕೂಡ ಹೌದು. ಅವರದ್ದು ಹಲವು ಬಿಸ್ನೆಸ್ ಇದೆ.

ಗಳಿಕೆ ವಿವರ

ಅಕ್ಕಿನೇನಿ ನಾಗಾರ್ಜುನ ಅವರು ಭರ್ಜರಿ ಸಂಭಾವನೆ ಪಡೆಯುತ್ತಾರೆ. ಇಷ್ಟೇ ಅಲ್ಲ ಹಲವು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಸಿನಿಮಾಗೆ ದೊಡ್ಡ ಮೊತ್ತ ಚಾರ್ಜ್​ ಮಾಡುವ ಅವರು ಬಿಗ್ ಬಾಸ್ ಕೂಡ ನಡೆಸಿಕೊಡುತ್ತಾರೆ. ಇದಕ್ಕೂ ಅವರು ದೊಡ್ಡ ಮೊತ್ತದ ಹಣ ಪಡೆಯುತ್ತಾರೆ.

ಇದನ್ನೂ ಓದಿ: ‘ಬಿಗ್ ಬಾಸ್​’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್​ಗೆ ಬೇಸರ 

ಕಾರ್ ಕಲೆಕ್ಷನ್

ಅಕ್ಕಿನೇನಿ ನಾಗಾರ್ಜುನ ಅವರು ಚಿನ್ನದ ಸ್ಪೂನ್ ಹಿಡಿದುಕೊಂಡು ಬೆಳೆದವರು. ಅವರ ತಂದೆ ನಾಗೇಶ್ವರ್ ರಾವ್ ಕೂಡ ಹಲವು ಉದ್ಯಮ ಹೊಂದಿದ್ದರು. ಬಿಎಂಡಬ್ಲ್ಯೂ-7, ಆಡಿ ಎ-7, ಸೇರಿ ಅನೇಕ ಕಾರುಗಳ ಅವರ ಬಳಿ ಇವೆ. ಇದರ ಜೊತೆ ಅವರು ಪ್ರೈವೇಟ್ ಜೆಟ್ ಕೂಡ ಹೊಂದಿದ್ದಾರೆ. ಸಿನಿಮಾ ಪ್ರಚಾರಕ್ಕೆ ಬೇರೆ ರಾಜ್ಯಕ್ಕೆ ತೆರಳಲು, ಬೇರೆ ಕಡೆ ಪ್ರವಾಸಕ್ಕೆ ತೆರಳಲು ಅವರು ಇದನ್ನು ಬಳಕೆ ಮಾಡುತ್ತಾರೆ.

ಪ್ರಾಪರ್ಟಿ

ಅಕ್ಕಿನೇನಿ ನಾಗಾರ್ಜುನ ಅವರು ಹಲವು ಪ್ರಾಪರ್ಟಿ ಹೊಂದಿದ್ದಾರೆ. ಫಿಲ್ಮ್​ ನಗರದಲ್ಲಿ ಅವರು 42 ಕೋಟಿ ರೂಪಾಯಿ ಮನೆ ಹೊಂದಿದ್ದಾರೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಅವರದ್ದೂ ಪಾಲಿದೆ. ಏಳು ಎಕರೆಯಲ್ಲಿರುವ ಈ ಸ್ಟುಡಿಯೋ ಮೌಲ್ಯ 200 ಕೋಟಿ ರೂಪಾಯಿ. ಇನ್ನು, ಅಕ್ಕಿನೇನಿ ನಾಗಾರ್ಜುನ ಅವರು ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳನ್ನು ಕೂಡ ನಡೆಸುತ್ತಿದ್ದಾರೆ. ಇನ್ನು ಅವರು ನೂರಾರು ಎಕರೆ ಕೃಷಿ ಭೂಮಿ ಕೂಡ ಹೊಂದಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್​’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್​ಗೆ ಬೇಸರ

ಶಿಕ್ಷಣ ಹಾಗೂ ಕುಟುಂಬ

ಅಕ್ಕಿನೇನಿ ನಾಗಾರ್ಜುನ ಅವರು ಇಂಜಿನಿಯರಿಂಗ್ ಪದವಿ ಪಡೆದಿದ್ದು ವಿದೇಶದಲ್ಲಿ. ಅವರು 1984ರಲ್ಲಿ ಲಕ್ಷ್ಮಿ ದಗ್ಗುಬಾಟಿಯನ್ನು ಮದುವೆ ಆದರು. 1990ರಲ್ಲಿ ಇಬ್ಬರೂ ಬೇರೆ ಆದರು. 1992ರಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಅಮಲಾ ಅವರನ್ನು ಮದುವೆ ಆದರು. ನಾಗಾರ್ಜುನಗೆ ಇಬ್ಬರು ಮಕ್ಕಳು. ನಾಗಾರ್ಜುನ ಹಾಗೂ ಲಕ್ಷ್ಮಿಗೆ ಜನಿಸಿದವರು ನಾಗ ಚೈತನ್ಯ. ನಾಗಾರ್ಜುನ ಹಾಗೂ ಅಮಲಾಗೆ ಜನಿಸಿದ್ದು ಅಖಿಲ್. ನಾಗ ಚೈತನ್ಯ ಹಾಗೂ ಅಖಿಲ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:17 am, Tue, 29 August 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್