AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akkineni Family: ಅಕ್ಕಿನೇನಿ ಕುಟುಂಬಕ್ಕೆ ಸತತ ಸೋಲು; ನಾಗ ಚೈತನ್ಯ, ನಾಗಾರ್ಜುನ, ಅಖಿಲ್​ ಭವಿಷ್ಯ ಸಂಕಷ್ಟದಲ್ಲಿ

ಅಕ್ಕಿನೇನಿ ಕುಟುಂಬದ ನಟರು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿದ್ದಾರೆ. ನಾಗಾರ್ಜುನ, ನಾಗ ಚೈತನ್ಯ ಮತ್ತು ಅಖಿಲ್​ ನಟನೆಯ ಸಿನಿಮಾಗಳನ್ನು ಪ್ರೇಕ್ಷಕರು ರಿಜೆಕ್ಟ್​ ಮಾಡಿದ್ದಾರೆ.

Akkineni Family: ಅಕ್ಕಿನೇನಿ ಕುಟುಂಬಕ್ಕೆ ಸತತ ಸೋಲು; ನಾಗ ಚೈತನ್ಯ, ನಾಗಾರ್ಜುನ, ಅಖಿಲ್​ ಭವಿಷ್ಯ ಸಂಕಷ್ಟದಲ್ಲಿ
ನಾಗ ಚೈತನ್ಯ, ನಾಗಾರ್ಜುನ, ಅಖಿಲ್ ಅಕ್ಕಿನೇನಿ
ಮದನ್​ ಕುಮಾರ್​
|

Updated on: May 15, 2023 | 7:20 AM

Share

ತೆಲುಗು ಚಿತ್ರರಂಗದಲ್ಲಿ ಮಾಸ್​ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ ಎಂಬ ಮಾತು ಇದೆ. ಆದರೆ ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡಿರುವ ಜನರು ಈಗ ಹೊಸತನದ ಕಥೆಗಳನ್ನು ಬಯಸುತ್ತಿದ್ದಾರೆ. ಅದೇ ಕಾರಣಕ್ಕೋ ಏನೋ ಟಾಲಿವುಡ್​ನ (Tollywood) ಕೆಲವು ಸಿನಿಮಾಗಳು ಮುಗ್ಗರಿಸುತ್ತಿವೆ. ಹಳೇ ಮಾದರಿಯಲ್ಲೇ ಸಿನಿಮಾ ಮಾಡಿದ ಹೀರೋಗಳಿಗೆ ಸೋಲು ಉಂಟಾಗುತ್ತಿದೆ. ಅದರಲ್ಲೂ ಅಕ್ಕಿನೇನಿ ಕುಟುಂಬದ (Akkineni Family) ನಟರು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿದ್ದಾರೆ. ಹಿರಿಯ ನಟ ನಾಗಾರ್ಜುನ ಮಾಡಿದ ಚಿತ್ರಗಳು ಜನರಿಗೆ ಮೆಚ್ಚುಗೆ ಆಗುತ್ತಿಲ್ಲ. ಅವರ ಪುತ್ರರಾದ ನಾಗ ಚೈತನ್ಯ (Naga Chaitanya) ಮತ್ತು ಅಖಿಲ್​ ನಟನೆಯ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ರಿಜೆಕ್ಟ್​ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಕಸ್ಟಡಿ’ ಸಿನಿಮಾದ ಸೋಲಿನ ಬಳಿಕ ಈ ಫ್ಯಾಮಿಲಿಯ ಮೂವರು ಹೀರೋಗಳು ತಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವಂತಾಗಿದೆ.

ನಾಗಾರ್ಜುನ ಅವರು ಸ್ಕ್ರಿಪ್ಟ್​ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಮಾಸ್​ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಾಗಾರ್ಜುನ ಅವರು ಕೈ ಸುಟ್ಟುಕೊಂಡಿರುವುದು ಕಣ್ಣೆದುರಲ್ಲೇ ಇದೆ. ಅವರು ನಟಿಸಿದ ‘ವೈಲ್ಡ್​ ಡಾಗ್​’, ‘ಆಫೀಸರ್​​’ ಮತ್ತು ‘ದಿ ಘೋಸ್ಟ್​’ ಚಿತ್ರಗಳು ಒಂದರ ಹಿಂದೊಂದು ಸೋತಿವೆ. ಅದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ಸಮಂತಾ ಬಗ್ಗೆ ನಾಗ ಚೈತನ್ಯ ಮೆಚ್ಚುಗೆ; ಮಾಜಿ ಪತ್ನಿಯನ್ನು ಬಾಯ್ತುಂಬ ಹೊಗಳಿದ ನಟ

ನಾಗ ಚೈತನ್ಯ ಅವರು ಕೂಡ ಇತ್ತೀಚಿನ ವರ್ಷಗಳಲ್ಲಿ ಗೆಲುವು ಕಂಡಿಲ್ಲ. ‘ಮಜಿಲಿ’, ‘ಲವ್​ ಸ್ಟೋರಿ’ ನಂತರ ಅವರು ಸ್ಕ್ರಿಪ್ಟ್​ ಆಯ್ಕೆಯಲ್ಲಿ ಎಡವಿದರು. ‘ಥ್ಯಾಂಕ್​ ಯೂ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಲಿಲ್ಲ. ‘ಕಸ್ಟಡಿ’ ನೋಡಿದ ಜನರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರು ಬೇರೆ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ.

ಇದನ್ನೂ ಓದಿ: Naga Chaitanya: ಕಾರಿನಲ್ಲಿ ಕದ್ದುಮುಚ್ಚಿ ಕಿಸ್​ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಸಮಂತಾ ಮಾಜಿ ಪತಿ ನಾಗ ಚೈತನ್ಯ

ಅಖಿಲ್​ ಅಕ್ಕಿನೇನಿ ಅವರಿಗೆ ಟಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಮಾಡಿದ ಒಂದೆರಡು ಸಿನಿಮಾಗಳು ಕೂಡ ಗೆಲ್ಲಲಿಲ್ಲ. ಹೇಗಾದರೂ ಮಾಡಿ ಯಶಸ್ಸು ಕಾಣಲೇಬೇಕು ಎಂಬ ಉದ್ದೇಶದಿಂದ ಅವರು ‘ಏಜೆಂಟ್​’ ಸಿನಿಮಾ ಮಾಡಿದರು. ಆದರೂ ಕೂಡ ಅವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗಲಿಲ್ಲ. ಇತ್ತೀಚೆಗೆ ತೆರೆಕಂಡ ಈ ಚಿತ್ರಕ್ಕಾಗಿ ಅಖಿಲ್​ ಅವರು ತುಂಬ ಶ್ರಮಪಟ್ಟಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ