AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Chaitanya: ಕಾರಿನಲ್ಲಿ ಕದ್ದುಮುಚ್ಚಿ ಕಿಸ್​ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಸಮಂತಾ ಮಾಜಿ ಪತಿ ನಾಗ ಚೈತನ್ಯ

Naga Chaitanya | Samantha Ruth Prabhu: ಸಮಂತಾ ರುತ್​ ಪ್ರಭು ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ನಾಗ ಚೈತನ್ಯ ಬದುಕಿನಲ್ಲಿ ಮಹಿಳೆಯರ ಆಕರ್ಷಣೆ ಹೆಚ್ಚಿದೆಯೇ? ಸಂದರ್ಶನದಲ್ಲಿ ಈ ಪ್ರಶ್ನೆ ಎದುರಾಯಿತು.

Naga Chaitanya: ಕಾರಿನಲ್ಲಿ ಕದ್ದುಮುಚ್ಚಿ ಕಿಸ್​ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಸಮಂತಾ ಮಾಜಿ ಪತಿ ನಾಗ ಚೈತನ್ಯ
ನಾಗ ಚೈತನ್ಯ
TV9 Web
| Updated By: ಮದನ್​ ಕುಮಾರ್​|

Updated on: Aug 16, 2022 | 2:46 PM

Share

ಟಾಲಿವುಡ್​ ಸ್ಟಾರ್​ ನಟ ನಾಗ ಚೈತನ್ಯ (Naga Chaitanya) ಅವರ ಜೀವನದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಈಗಂತೂ ಅವರ ಖಾಸಗಿ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿ ಹಲವು ತಿಂಗಳುಗಳೇ ಕಳೆದಿವೆ. ಸಮಂತಾ ರುತ್​ ಪ್ರಭುಗೆ (Samantha Ruth Prabhu) ಅವರು ಡಿವೋರ್ಸ್​ ನೀಡಿದ್ದು ಯಾಕೆ ಎಂಬುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಆ ಬಗ್ಗೆ ಅವರು ಸರಿಯಾಗಿ ಏನನ್ನೂ ಬಾಯಿ ಬಿಡುತ್ತಿಲ್ಲ. ಈಗ ನಾಗ ಚೈತನ್ಯ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ತುಂಟತನದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ಹುಡುಗಿಯೊಬ್ಬಳಿಗೆ ಕದ್ದು ಮುಚ್ಚಿ ಕಿಸ್​ (Kiss) ಮಾಡಲು ಹೋದಾಗ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದ ವಿಚಾರವನ್ನು ನಾಗ ಚೈತನ್ಯ ಒಪ್ಪಿಕೊಂಡಿದ್ದಾರೆ.

ಸಮಂತಾ ರುತ್​ ಪ್ರಭು ಜೊತೆ ನಾಗ ಚೈತನ್ಯ ಪ್ರೀತಿಯಲ್ಲಿ ಬೀಳುವುದಕ್ಕೂ ಮುನ್ನವೇ ಈ ಥರ ಒಂದು ಘಟನೆ ನಡೆದಿತ್ತು. ಕಾರಿನ ಹಿಂಬದಿ ಸೀಟಿಯಲ್ಲಿ ನಾಗ ಚೈತನ್ಯ ಅವರು ಹುಡುಗಿ ಜೊತೆ ಕುಳಿತಿದ್ದರು. ಬಹಳ ರೊಮ್ಯಾಂಟಿಕ್​ ಆದಂತಹ ಆ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚುತ್ತಿತ್ತು. ಹುಡುಗಿಗೆ ನಾಗ ಚೈತನ್ಯ ಮುತ್ತುಗಳ ಮಳೆ ಸುರಿಸುತ್ತಿದ್ದರು. ಈ ವೇಳೆ ಅವರು ಪೊಲೀಸರ ಕಣ್ಣಿಗೆ ಬಿದ್ದಿದ್ದರು!

ಇಷ್ಟು ಮಾತ್ರ ಹೇಳಿ, ಇನ್ನುಳಿದ ವಿವರಗಳನ್ನು ನಾಗ ಚೈತನ್ಯ ಬಿಟ್ಟುಕೊಟ್ಟಿಲ್ಲ. ಆ ಹುಡುಗಿ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್​ ಆಗಿಯೇ ಉಳಿದಿದೆ. ಸಮಂತಾ ರುತ್​ ಪ್ರಭು ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ನಾಗ ಚೈತನ್ಯ ಬದುಕಿನಲ್ಲಿ ಮಹಿಳೆಯರ ಆಕರ್ಷಣೆ ಹೆಚ್ಚಿದೆಯೇ? ಈ ಪ್ರಶ್ನೆ ಕೂಡ ಸಂದರ್ಶನದಲ್ಲಿ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು, ‘ಒಳ್ಳೆಯ ರೀತಿಯಲ್ಲಿ ಯಾವಾಗಲೂ ಮಹಿಳೆಯರು ನನ್ನ ಕಡೆಗೆ ಆಕರ್ಷಿತರಾಗುತ್ತಾರೆ. ಈ ರೀತಿ ಇರುವುದು ಖುಷಿ ಆಗುತ್ತದೆ’ ಎಂದು ನಾಗ ಚೈತನ್ಯ ಹೇಳಿದ್ದಾರೆ.

ಇದನ್ನೂ ಓದಿ
Image
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Image
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Image
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
Image
ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ

ವಿಚ್ಛೇದನದ ಬಳಿಕ ನಾಗ ಚೈತನ್ಯ ಅವರ ವೃತ್ತಿ ಜೀವನ ಹೇಳಿಕೊಳ್ಳುವಷ್ಟು ಏಳಿಗೆ ಕಂಡಿಲ್ಲ. ಅವರು ನಟಿಸಿದ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಆಮಿರ್​ ಖಾನ್​ ಜೊತೆ ಅವರು ತೆರೆ ಹಂಚಿಕೊಂಡಿ​ದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ ಮಾಡಲು ಈ ಚಿತ್ರ ವಿಫಲವಾಗಿದೆ. ಆ ಸೋಲಿನ ಬೇಸರವನ್ನು ಬದಿಗಿಟ್ಟು ಅವರು ಮುಂದಿನ ಚಿತ್ರಗಳ ಕಡೆಗೆ ಗಮನ ಹರಿಸಲು ಸಜ್ಜಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್