ಆರ್​ಸಿಬಿ ಘನತೆಗೆ ಧಕ್ಕೆ ತಂದ ‘ಜೈಲರ್’; ಸಿನಿಮಾ ದೃಶ್ಯಕ್ಕೆ ಕತ್ತರಿ ಹಾಕಲು ಕೋರ್ಟ್ ಸೂಚನೆ

ಸಿನಿಮಾದಲ್ಲಿ ಕಥಾ ನಾಯಕನನ್ನು ಬೆನ್ನತ್ತಿ ಬರುವ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್​ಸಿಬಿ ಜೆರ್ಸಿ ಧರಿಸಿರುತ್ತಾನೆ. ಜೊತೆಗೆ ಮಹಿಳೆಯ ಬಗ್ಗೆ ಕೆಟ್ಟ ಭಾಷೆ ಪ್ರಯೋಗಿಸುತ್ತಾನೆ. ಈ ದೃಶ್ಯವನ್ನು ಆರ್​ಸಿಬಿಯ ಕಾನೂನು ತಂಡ ಪ್ರಶ್ನೆ ಮಾಡಿತ್ತು. ಈಗ ಎರಡೂ ಕಡೆಯುವರು ಒಂದು ಒಪ್ಪಂದಕ್ಕೆ ಬಂದಿದ್ದು, ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಆರ್​ಸಿಬಿ ಘನತೆಗೆ ಧಕ್ಕೆ ತಂದ ‘ಜೈಲರ್’; ಸಿನಿಮಾ ದೃಶ್ಯಕ್ಕೆ ಕತ್ತರಿ ಹಾಕಲು ಕೋರ್ಟ್ ಸೂಚನೆ
ರಜನಿ-ಜೈಲರ್ ದೃಶ್ಯ
Follow us
ರಾಜೇಶ್ ದುಗ್ಗುಮನೆ
|

Updated on: Aug 29, 2023 | 7:14 AM

‘ಜೈಲರ್’ ಸಿನಿಮಾ (Jailer Movie) ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದ ಕಲೆಕ್ಷನ್ 600 ಕೋಟಿ ರೂಪಾಯಿ ಸಮೀಪಿಸಿದೆ. ಈ ಮಧ್ಯೆ ‘ಜೈಲರ್’ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್ ಹಾಗೂ ಐಪಿಎಲ್ ತಂಡ ‘ರಾಯಲ್ ಚಾಲೆಂಜರ್ಸ್​ ಬೆಂಗಳೂರು’ (ಆರ್​ಸಿಬಿ) ಮಧ್ಯೆ ಕಾನೂನು ಸಮರ ನಡೆದಿತ್ತು. ಈ ಚಿತ್ರದ ದೃಶ್ಯವೊಂದರಲ್ಲಿ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್​ಸಿಬಿ ಜೆರ್ಸಿ ಧರಿಸಿ ಬರುತ್ತಾನೆ. ಇದನ್ನು ತೆಗೆದು ಹಾಕಬೇಕು ಎಂದು ಕೋರ್ಟ್​ಗೆ ಆರ್​ಸಿಬಿ ಮನವಿ ಮಾಡಿತ್ತು. ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಸನ್​ ಪಿಕ್ಚರ್ಸ್ (Sun Pictures) ಒಪ್ಪಿದೆ. ಈ ದೃಶ್ಯವನ್ನು ಮಾರ್ಪಾಡು ಮಾಡುವ ಭರವಸೆಯನ್ನು ಕೋರ್ಟ್​ಗೆ ನೀಡಿದೆ.

ಸಿನಿಮಾದಲ್ಲಿ ಕಥಾ ನಾಯಕನನ್ನು ಬೆನ್ನತ್ತಿ ಬರುವ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್​ಸಿಬಿ ಜೆರ್ಸಿ ಧರಿಸಿರುತ್ತಾನೆ. ಜೊತೆಗೆ ಮಹಿಳೆಯ ಬಗ್ಗೆ ಕೆಟ್ಟ ಭಾಷೆ ಪ್ರಯೋಗಿಸುತ್ತಾನೆ. ಈ ದೃಶ್ಯವನ್ನು ಆರ್​ಸಿಬಿಯ ಕಾನೂನು ತಂಡ ಪ್ರಶ್ನೆ ಮಾಡಿತ್ತು. ‘ನಮ್ಮ ಜೆರ್ಸಿಯ ಅನಧಿಕೃತ ಬಳಕೆಯು ಬ್ರ್ಯಾಂಡ್‌ನ ಜನಪ್ರಿಯತೆ ಮತ್ತು ಅದರ ಪ್ರಾಯೋಜಕರ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡಬಹುದು’ ಎಂದು ಆರ್​ಸಿಬಿ ದೆಹಲಿ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ‘ಆರ್​ಸಿಬಿ ಜೆರ್ಸಿ ಇರುವ ದೃಶ್ಯಕ್ಕೆ ಕತ್ತರಿ ಹಾಕಿ ಅಥವಾ ಮಾರ್ಪಾಡು ಮಾಡಿ’ ಎಂದು ಸನ್​ ಪಿಕ್ಚರ್ಸ್​ಗೆ ಕೋರ್ಟ್ ಆದೇಶ ನೀಡಿದೆ.

ಈಗ ಎರಡೂ ಕಡೆಯುವರು ಒಂದು ಒಪ್ಪಂದಕ್ಕೆ ಬಂದಿದ್ದು, ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ‘ನಾವು ದೃಶ್ಯವವನ್ನು ಮಾರ್ಪಾಡು ಮಾಡುತ್ತೇವೆ. ಸೆಪ್ಟೆಂಬರ್ 1ರಿಂದ ಥಿಯೇಟರ್​ನಲ್ಲಿ ಮಾರ್ಪಾಡು ಮಾಡಿದ ದೃಶ್ಯ ಬಿತ್ತರ ಆಗಲಿದೆ. ಒಟಿಟಿಯಲ್ಲೂ ಆ ದೃಶ್ಯವನ್ನು ಬದಲಿಸಿ ರಿಲೀಸ್ ಮಾಡಲಾಗುವುದು| ಎಂದು ಸನ್​ ಪಿಕ್ಚರ್ಸ್ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವಾದ್ಯಂತ 550 ಕೋಟಿ ರೂಪಾಯಿ ಗಳಿಸಿದ ‘ಜೈಲರ್​’; ರಜನಿಕಾಂತ್​ ಚಿತ್ರಕ್ಕೆ ಭಾರತದಲ್ಲಿ 295 ಕೋಟಿ ರೂ. ಕಲೆಕ್ಷನ್​

‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್, ತಮನ್ನಾ, ವಿನಾಯಕನ್ ಸೇರಿ ಅನೇಕರು ಇತರ ಪ್ರಮುಖ ಪಾತ್ರ ಮಾಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ