ಮೊಬೈಲ್ಗೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದು ಮೆಸೇಜ್ ಬಂದರೆ ನಂಬಬೇಡಿ ಸುಳ್ಳಾಗಿರಬಹುದು
ಮೊಬೈಲ್ನಲ್ಲಿ ಯುವರ್ ಅಕೌಂಟ್ ಹ್ಯಾಸ್ ಬೀನ್ ಕ್ರೆಡಿಟೆಡ್ ಎಂದು ಮೆಸೇಜ್ ಬಂದರೂ ಕೂಡ ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ಪರೀಕ್ಷಿಸಲೇಬೇಕು. ಮುಂದಿನ ಬಾರಿ ನಿಮ್ಮ ಬ್ಯಾಂಕ್‌ನಿಂದ ನಿಮ್ಮ ಖಾತೆಗೆ ಹಣ ಜಮೆಯಾಗಿದೆ ಎಂಬ ಸಂದೇಶ ಬಂದಾಗ, ಬ್ಯಾಂಕಿನ ಆ್ಯಪ್ ಅಥವಾ ನಿಮ್ಮ ಖಾತೆ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸುವುದು ಮತ್ತು ಮೊತ್ತವು ನಿಜವಾಗಿ ಇದೆಯೇ ಎಂದು ನೋಡುವುದು ನಿಮ್ಮ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ.
ಮೊಬೈಲ್ನಲ್ಲಿ ಯುವರ್ ಅಕೌಂಟ್ ಹ್ಯಾಸ್ ಬೀನ್ ಕ್ರೆಡಿಟೆಡ್ ಎಂದು ಮೆಸೇಜ್ ಬಂದರೂ ಕೂಡ ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ಪರೀಕ್ಷಿಸಲೇಬೇಕು. ಮುಂದಿನ ಬಾರಿ ನಿಮ್ಮ ಬ್ಯಾಂಕ್‌ನಿಂದ ನಿಮ್ಮ ಖಾತೆಗೆ ಹಣ ಜಮೆಯಾಗಿದೆ ಎಂಬ ಸಂದೇಶ ಬಂದಾಗ, ಬ್ಯಾಂಕಿನ ಆ್ಯಪ್ ಅಥವಾ ನಿಮ್ಮ ಖಾತೆ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸುವುದು ಮತ್ತು ಮೊತ್ತವು ನಿಜವಾಗಿ ಇದೆಯೇ ಎಂದು ನೋಡುವುದು ನಿಮ್ಮ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ.
ದೆಹಲಿಯ ಆಭರಣ ವ್ಯಾಪಾರಿಯೊಬ್ಬರು ಈ ರೀತಿಯ ಸ್ಕ್ಯಾಮ್ವೊಂದರಲ್ಲಿ ಸಿಕ್ಕಿ ಬಿದ್ದಿದ್ದಾರೆ. 3 ಲಕ್ಷ ಮೌಲ್ಯದ ಆಭರಣವನ್ನು ವಂಚಕನಿಗೆ ನೀಡಿ ಈಗ ಪಾಠ ಕಲಿತಿದಿದ್ದಾರೆ. ಆಭರಣ ವ್ಯಾಪಾರಿ ನವಲ್ ಕಿಶೋರ್ ಖಂಡೇಲ್ವಾಲ್ ಎಂಬುವವರು ದೆಹಲಿಯ ಅತಿದೊಡ್ಡ ಚಿನ್ನ ಹಾಗೂ ಬೆಳ್ಳಿ ವ್ಯಾಪಾರಿಯಾಗಿದ್ದಾರೆ, ಚಾಂದನಿ ಚೌಕದಲ್ಲಿ ಅವರ ಆಭರಣಗಳ ಮಳಿಗೆ ಇದೆ.
ಕಳೆದ ವಾರ ಅವರು ಅಯೋಧ್ಯೆಗೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬರು ಅವರ ಅಂಗಡಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದರು ಹಾಗೂ ಆ ವ್ಯಕ್ತಿ ತನಗೆ ಅಂಗಡಿಗೆ ಬರಲು ಸಾಧ್ಯವಾಗುತ್ತಿಲ್ಲ, ನಾನು ಆನ್ಲೈನ್ನಲ್ಲಿ ಹಣವನ್ನು ಹಾಕುತ್ತೇನೆ ನೀವು ನಾನು ಹೇಳಿದ ಪ್ರದೇಶಕ್ಕೆ ಆಭರಣವನ್ನು ತಲುಪಿಸಬಹುದೇ ಎಂದು ಕೇಳಿಕೊಂಡಿದ್ದರು.
ಮತ್ತಷ್ಟು ಓದಿ: ಹೆಂಡತಿ, ಸಂಬಂಧಿಕರನ್ನೂ ಬಿಡದೆ 20ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸುವುದಾಗಿ ಕೋಟಿ ವಂಚನೆ; ಖತರ್ನಾಕ್ ಆರೋಪಿಗಳು ಅರೆಸ್ಟ್
ಸ್ವಲ್ಪ ಸಮಯದ ಬಳಿಕ ಚಿನ್ನದ ವ್ಯಾಪಾರಿ ಮೊಬೈಲ್ಗೆ ಅವರ ಖಾತೆಗೆ 93,400 ರೂ ಜಮಾವಾಗಿದೆ ಎನ್ನುವ ಸಂದೇಶ ಬಂದಿತ್ತು. ಅವರ ಮಗ ಸ್ಕ್ರೀನ್ ಶಾಟ್ ಕಳುಹಿಸಿದ್ದರು. ನಂತರ ವ್ಯಕ್ತಿ ಹೇಳಿದ ಜಾಗಕ್ಕೆ ಚಿನ್ನದ ಸರವನ್ನು ಕಳುಹಿಸಿಕೊಟ್ಟಿದ್ದಾರೆ. ಮರುದಿನ ಮತ್ತೆ ಕರೆ ಮಾಡಿ 30 ಗ್ರಾಂ ಚಿನ್ನದ ಸರ ಬೇಕು ಎಂದು ಹೇಳಿದ್ದಾರೆ ಖಾತೆಗೆ 1,95,400 ರೂ. ಜಮಾ ಮಾಡಲಾಗಿದೆ ಎನ್ನುವ ಮೆಜೇಸ್ ಕೂಡ ಬಂದಿದೆ. ಆ ಚಿನ್ನದ ಸರವನ್ನೂ ಕಳುಹಿಸಲಾಗಿದೆ.
ವ್ಯಾಪಾರಿಯು ಬ್ಯಾಂಕ್ನ ಮೊಬೈಲ್ ಆ್ಯಪ್ನಲ್ಲಿ ಖಾತೆಯ ವಿವರವನ್ನು ಪರಿಶೀಲಿಸಿದಾಗ ಹಣ ಜಮಾ ಆಗಿಲ್ಲ ಎಂಬುದು ಅರಿವಿಗೆ ಬಂದಿದೆ. ಆಗ ಅದು ತಮ್ಮ ಬ್ಯಾಂಕಿನಿಂದ ಬಂದಿದ್ದಲ್ಲ ಎನ್ನುವುದು ತಿಳಿಯಿತು. ಖಾತೆಗೆ ಸಂಬಂಧಿಸಿದ ಬ್ಯಾಂಕ್ ಆ್ಯಪ್ ತನ್ನ ತಂದೆಯ ಫೋನ್‌ನಲ್ಲಿ ಮಾತ್ರ ಇನ್‌ಸ್ಟಾಲ್ ಆಗಿರುವುದರಿಂದ ಹೇಳಿಕೆಯನ್ನು ತಕ್ಷಣ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಅವರ ಮಗ ಮಯಾಂಕ್ ಹೇಳಿದ್ದಾರೆ. ದೂರು ದಾಖಲಾಗಿದ್ದರೂ ವಂಚಕರ ಪತ್ತೆಗೆ ಪೊಲೀಸರು ಯಶಸ್ವಿಯಾಗಿಲ್ಲ.
ಮಾರುಕಟ್ಟೆ ಮತ್ತು ಇತರೆಡೆಗಳಲ್ಲಿ ಅನೇಕ ಇತರ ವ್ಯಾಪಾರಿಗಳು ಸಹ ಮೋಸಕ್ಕೆ ಬಲಿಯಾಗಿದ್ದಾರೆ. ಗೃಹ ಸಚಿವಾಲಯದ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿಯೂ ದೂರು ದಾಖಲಾಗಿದೆ, ಆದರೆ ಈ ರೀತಿಯ ವಂಚನೆ ಆ ವರ್ಗಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Wed, 30 August 23