ಯೋಧನ ಹೆಸರಿನಲ್ಲಿ ವಂಚನೆ; ಬೆಳಗಾವಿ ಶಾಲಾ ಆಡಳಿತ ಮಂಡಳಿಯ ಬ್ಯಾಂಕ್ ಖಾತೆಯಿಂದ 90 ಸಾವಿರ ರೂಪಾಯಿ ಹಣ ಲೂಟಿ
ವಾಟ್ಸಪ್ ಮೂಲಕ ಫೋಟೋ ಕಳಿಸಿ ನಂಬಿಸಿದ್ದ ವ್ಯಕ್ತಿ. ಬಳಿಕ ಅಡ್ಮಿಶನ್ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸುವುದಾಗಿ ತಿಳಿಸಿದ್ದು, ಬ್ಯಾಂಕ್ ಖಾತೆ ವಿವರ ಪಡೆದಿದ್ದಾನೆ. ಖಾತೆ ಕನ್ಫರ್ಮ್ ಮಾಡಲು 1 ರೂಪಾಯಿ ವರ್ಗಾಯಿಸುತ್ತಿರುವುದಾಗಿ ಹೇಳಿದ್ದ ವ್ಯಕ್ತಿ. ತಾನು ಆನ್‌ಲೈನ್ ಮೂಲಕ ಕಳಿಸಿದ 1 ರೂಪಾಯಿ ಹಣ ಸ್ವೀಕರಿಸಿ ಖಾತೆ ಕನ್ಫರ್ಮ್ ಮಾಡಿ ಎಂದು ಪುನಃ ಕರೆ ಮಾಡಿದ್ದಾನೆ.
ಬೆಳಗಾವಿ: ಶಾಲಾ ಆಡಳಿತ ಮಂಡಳಿಯ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ದೋಚಿದ ಘಟನೆ ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಬಳಿ ನಡೆದಿದೆ. ಯೋಧನ ಹೆಸರಿನಲ್ಲಿ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿದ್ದು, ಎಲ್ಕೆಜಿಗೆ ಅಡ್ಮಿಶನ್ ಬೇಕಿದೆ ಎಂದು ಬ್ಯಾಂಕ್ ಖಾತೆ ವಿವರ ಪಡೆದು 90 ಸಾವಿರ ರೂಪಾಯಿಯನ್ನು ವ್ಯಕ್ತಿಯೊರ್ವ ದೋಚಿದ್ದಾನೆ. ತಾನು ಜಮ್ಮು ಕಾಶ್ಮೀರದಲ್ಲಿ ವಾಸವಿದ್ದು ಮಗು, ಪತ್ನಿ ಬೆಳಗಾವಿಯಲ್ಲಿ ಇದ್ದಾರೆ. ಬೆಳಗಾವಿಯಲ್ಲಿರುವ ಮಗನಿಗೆ ಎಲ್‌ಕೆಜಿ ಅಡ್ಮಿಶನ್ ಬೇಕಾಗಿದೆ ಎಂದು ಕರೆ ಮಾಡಿದ್ದಾನೆ.
ವಾಟ್ಸಪ್ ಮೂಲಕ ಫೋಟೋ ಕಳಿಸಿ ನಂಬಿಸಿದ್ದ ವ್ಯಕ್ತಿ. ಬಳಿಕ ಅಡ್ಮಿಶನ್ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸುವುದಾಗಿ ತಿಳಿಸಿದ್ದು, ಬ್ಯಾಂಕ್ ಖಾತೆ ವಿವರ ಪಡೆದಿದ್ದಾನೆ. ಖಾತೆ ಕನ್ಫರ್ಮ್ ಮಾಡಲು 1 ರೂಪಾಯಿ ವರ್ಗಾಯಿಸುತ್ತಿರುವುದಾಗಿ ಹೇಳಿದ್ದ ವ್ಯಕ್ತಿ. ತಾನು ಆನ್‌ಲೈನ್ ಮೂಲಕ ಕಳಿಸಿದ 1 ರೂಪಾಯಿ ಹಣ ಸ್ವೀಕರಿಸಿ ಖಾತೆ ಕನ್ಫರ್ಮ್ ಮಾಡಿ ಎಂದು ಪುನಃ ಕರೆ ಮಾಡಿದ್ದಾನೆ.
ಇದನ್ನು ನಂಬಿದ ಶಾಲಾ ಆಡಳಿತ ಮಂಡಳಿ ಸಿಬ್ಬಂದಿ, ಆ ವ್ಯಕ್ತಿ ಕಳಿಸಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಬಳಿಕ ಈ ಖಾತೆಯಿಂದಲೇ 90 ಸಾವಿರ ರೂಪಾಯಿಯನ್ನು ಆ ವ್ಯಕ್ತಿ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಸ್ಟಮರ್ ಕೇರ್ ಹೆಸರಿನಲ್ಲಿ ಪಾಸ್ವರ್ಡ್ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ ಕಸ್ಟಮರ್ ಕೇರ್ ಹೆಸರಿನಲ್ಲಿ ಬ್ಯಾಂಕ್ನ ಪಾಸ್ವರ್ಡ್ ಪಡೆದು ವಂಚನೆ ಮಾಡಿದ ಘಟನೆಯೊಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿ ನಡೆದಿದೆ. ಕೇರಳ ಮೂಲದ ಕೃಷ್ಣನ್ ಉನ್ನಿತನ್ ಆನ್‌ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ಬ್ಲಾಕ್ ಆಗಿದನ್ನು ಸರಿ ಪಡಿಸಲು ಕಸ್ಟಮರ್ ಕೇರ್ಗೆ ಪೋನ್ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಸ್ಟಮರ್ ಕೇರ್ ಹೆಸರಿನ ವ್ಯಕ್ತಿ ಬುಧವಾರ ಹಂತ ಹಂತವಾಗಿ ಕೃಷ್ಣನ್ ಬ್ಯಾಂಕ್ ಖಾತೆಯಿಂದ 13.45 ಲಕ್ಷ ರೂಪಾಯಿ ಡ್ರಾ ಮಾಡಿ, ವಂಚನೆ ಮಾಡಿದ್ದಾರೆ.
ಕೇರಳ ಮೂಲದ ಕೃಷ್ಣನ್ ಸದ್ಯ ದಾವಣಗೆರೆಯಲ್ಲಿ ವಾಸವಾಗಿದ್ದು, ಕೇರಳದ ಅಲಪುಳ ಜಿಲ್ಲೆಯ ನಂಗಿಯಾರ್ಕುಲಂಗರ ನಗರದ ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಎಸ್ಬಿ ಖಾತೆ ಹೊಂದಿದ್ದಾರೆ. ಬುಧವಾರ ಕಸ್ಟಮರ್ ಕೇರ್ ಜತೆ ಮಾತನಾಡಿದ ಕೃಷ್ಣನ್ಗೆ ಮರುದಿನ ಅಂದರೆ ಗುರುವಾರ ಮತ್ತೆ ವ್ಯಕ್ತಿಯೊಬ್ಬ ಅದೇ ಬ್ಯಾಂಕ್ ಹೆಸರು ಹೇಳಿಕೊಂಡು ಪೋನ್ ಮಾಡಿದ್ದು, ನೀವು ಹೌಸಿಂಗ್ ಲೋನ್ಗೆ ಅರ್ಜಿ ಹಾಕಿದ್ದೀರಾ ಎಂದು ಕೇಳಿದ್ದಾನೆ. ಇಲ್ಲಾ ಎಂದಾಗ ನಿಮ್ಮ ಎಸ್ಬಿ ಐಮಿರರ್ ಪ್ಲಸ್ ಅಪ್ಲಿಕೇಶನ್ ಯಾರೋ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆ ವ್ಯಕ್ತಿಯ ಮಾತನ್ನು ಕೇಳಿದ ಕೃಷ್ಣನ್ ಉನ್ನಿತನ್ ಬ್ಯಾಂಕ್ನ ಖಾತೆಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಖಾತೆಯಲ್ಲಿ 13.45 ಲಕ್ಷ ರೂಪಾಯಿ ಕಡಿತಗೊಂಡಿದ್ದ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ದಾವಣಗೆರೆ ಸಿಇನ್ ಪೊಲೀಸ್ ಠಾಣೆಗೆ ಎಸ್ ಕೃಷ್ಣನ್ ದೂರು ಸಲ್ಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕಸ್ಟಮರ್ ಕೇರ್ ಹೆಸರಿನಲ್ಲಿ ಪಾಸ್ವರ್ಡ್ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ; ಬ್ಯಾಂಕ್ನಿಂದ 13.45 ಲಕ್ಷ ರೂಪಾಯಿ ಡ್ರಾ
Published On - 11:43 am, Sat, 10 July 21