AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿ ಭಾರೀ ವಂಚನೆ! ಏನಿದು ಮಹಾವೀರ್ ಜೈನ್ ಆಸ್ಪತ್ರೆಯ ವಂಚನೆ ಪುರಾಣ?

Bhagwan Mahaveer Jain Hospital: ಮಹಾವೀರ್ ಜೈನ್ ಆಸ್ಪತ್ರೆಯು ವಸಂತನಗರದಲ್ಲಿರುವ BBMPಗೆ ಸೇರಿದ 4 ಎಕರೆ ಜಮೀನನ್ನು 1976ರಲ್ಲಿ ಲೀಸ್​ ಆಧಾರದ ಮೇಲೆ ಪಡೆದಿತ್ತು. 200 ಹಾಸಿಗೆಗಳ ವಿಶಾಲ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅದೂ ತಿಂಗಳಿಗೆ 100 ರೂಪಾಯಿಯಂತೆ 99 ವರ್ಷ ಅವಧಿಗೆ ಲೀಸ್​ಗೆ ಪಡೆದಿತ್ತು. ಮಹಾವೀರ್ ಜೈನ್ ಆಸ್ಪತ್ರೆಯು ಈ ಲೀಸ್ ಜಮೀನಿನಲ್ಲಿ ಪಾರ್ಕಿಂಗ್​ ಶುಲ್ಕದಿಂದ ಹಿಡಿದು ಪ್ರತಿಯೊಂದಕ್ಕೂ ಶುಲ್ಕ ವಿಧಿಸುತ್ತದೆ.

ಬಿಬಿಎಂಪಿ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿ ಭಾರೀ ವಂಚನೆ! ಏನಿದು ಮಹಾವೀರ್ ಜೈನ್ ಆಸ್ಪತ್ರೆಯ ವಂಚನೆ ಪುರಾಣ?
ಬಿಬಿಎಂಪಿ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿ ಭಾರೀ ವಂಚನೆ! ಏನಿದು ಮಹಾವೀರ್ ಜೈನ್ ಆಸ್ಪತ್ರೆಯ ವಂಚನೆ ಪುರಾಣ?
TV9 Web
| Edited By: |

Updated on: Jul 09, 2021 | 10:31 AM

Share

ಬೆಂಗಳೂರು: ತುಸು ಹಳೆಯದ್ದೇ ಆದ ಭಾರೀ ವಂಚನೆ ಕೇಸೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಬಿಬಿಎಂಪಿಯಿಂದ 100 ರೂಪಾಯಿ ಲೀಸ್​ಗೆ ಪಡೆದಿದ್ದ ಜಾಗವನ್ನು ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿದೆ ಎಂಬ ಆರೋಪದ ಪ್ರಕರಣ ಇದಾಗಿದೆ.

ಬಿಬಿಎಂಪಿಯ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ 65 ಕೋಟಿ ರೂ. ಸಾಲ ಪಡೆದಿದ್ದ ವಸಂತ ನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆ ವಿರುದ್ಧ ಸರ್ಕಾರಿ ಜಾಗವನ್ನೇ ಅಡವಿಟ್ಟು ಸಾಲ ಪಡೆದು ವಂಚಸಿರುವ ಆರೋಪದ ಮೇಲೆ ಎಫ್​ಐಆರ್ ದಾಖಲಾಗಿದೆ.

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಮಹಾವೀರ್ ಜೈನ್ ಆಸ್ಪತ್ರೆ BBMPಯಿಂದ ವಾರ್ಷಿಕ 100 ರೂ. ಲೀಸ್​ಗೆ ಪಡೆದಿತ್ತು. ಲೀಸ್​ಗೆ ಪಡೆದಿದ್ದ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದೆ.

ಮಹಾವೀರ್ ಜೈನ್ ಆಸ್ಪತ್ರೆಯು ಬಿಬಿಎಂಪಿಯಿಂದ ಪಡೆದಿದ್ದ ಭೂಮಿಯನ್ನ ಕಾನೂನುಬಾಹಿರವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಅಡವಿಟ್ಟು 65 ಕೋಟಿ ರೂಪಾಯಿ ಸಾಲ ಪಡೆದಿತ್ತು. ಸರ್ಕಾರಿ ಜಾಗವನ್ನೇ ಅಡವಿಟ್ಟು ಖಾಸಗಿ ವ್ಯಕ್ತಿ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಎಂಟಿಎಫ್‌ಗೆ 2018ರಲ್ಲಿ ಬಿಬಿಎಂಪಿ ಆಯುಕ್ತರಿಂದ BMTFಗೆ ದೂರು ಸಲ್ಲಿಸಲಾಗಿತ್ತು. ಆಯುಕ್ತರ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿದೆ.

BBMPಯಿಂದ ನಾನಾ ಸಂಘ ಸಂಸ್ಥೆ, ಖಾಸಗಿ ವ್ಯಕ್ತಿಗಳು 4,000 ಕೋಟಿ ರೂಪಾಯಿಗೂ ಅಧಿಕ ಬೆಲೆಯ 350 ಜಾಗಗಳನ್ನು ಲೀಸ್ ಪಡೆದಿದ್ದು, ಲೀಸ್ ಅವಧಿ ಮುಗಿದರೂ 116 ಜಾಗ ವಾಪಸ್​ಗೆ ಹಿಂದೇಟು ಹಾಕಲಾಗಿದೆ. ಖಾಸಗಿ ವ್ಯಕ್ತಿಗಳಿಗೆ ಈ ಆಸ್ತಿಯನ್ನು ವಾರ್ಷಿಕ 100, 50 ರೂಪಾಯಿಗೆಲ್ಲಾ ಮತ್ತೆ ಮತ್ತೆ ಲೀಸ್​ಗೆ ನೀಡಲಾಗಿದೆ.

ಏನಿದು ಮಹಾವೀರ್ ಜೈನ್ ಆಸ್ಪತ್ರೆ ವಂಚನೆ ಪುರಾಣ:

ಮಹಾವೀರ್ ಜೈನ್ ಆಸ್ಪತ್ರೆಯು ವಸಂತನಗರದಲ್ಲಿರುವ BBMPಗೆ ಸೇರಿದ 4 ಎಕರೆ ಜಮೀನನ್ನು 1976ರಲ್ಲಿ ಲೀಸ್​ ಆಧಾರದ ಮೇಲೆ (Lease) ಪಡೆದಿತ್ತು. 200 ಹಾಸಿಗೆಗಳ ವಿಶಾಲ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅದೂ ತಿಂಗಳಿಗೆ 100 ರೂಪಾಯಿಯಂತೆ 99 ವರ್ಷ ಅವಧಿಗೆ ಲೀಸ್​ಗೆ ಪಡೆದಿತ್ತು. ಮಹಾವೀರ್ ಜೈನ್ ಆಸ್ಪತ್ರೆಯು ಈ ಲೀಸ್ ಜಮೀನಿನಲ್ಲಿ ಪಾರ್ಕಿಂಗ್​ ಶುಲ್ಕದಿಂದ ಹಿಡಿದು ಪ್ರತಿಯೊಂದಕ್ಕೂ ಶುಲ್ಕ ವಿಧಿಸುತ್ತದೆ. ಈ ಮಧ್ಯೆ ತಾನು BBMPಯಿಂದ ಪಡೆದಿದ್ದ ಲೀಸ್ ಜಮೀನಿನಲ್ಲಿ ಮಹಾವೀರ್ ಜೈನ್ ಆಸ್ಪತ್ರೆಯು 2 ಭಾಗಗಳನ್ನು ಪಂಜಾಬ್​ ನ್ಯಾಷನಲ್ ಬ್ಯಾಂಕಿಗೆ (Punjab National Bank) ಕಾನೂನುಬಾಹಿರವಾಗಿ ಸಬ್​ ಲೀಸ್​ಗೆ ಸಹ ನೀಡಿದೆ.​

ಏನಿದು ಪ್ರಕರಣ ಅಂದ್ರೆ ದಶಕದ ಹಿಂದೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ತೀವ್ರ ಆರ್ಥಿಕ ನಷ್ಟ ಅನುಭವಿಸಿತೊಡಗಿತ್ತು. ಅದರಿಂದ ಹೊರಬರಲು ತನ್ನ ಕೆಲ ಆಸ್ತಿಪಾಸ್ತಿಗಳನ್ನು ಅಡವಿಟ್ಟು ನೂರಾರು ಕೋಟಿ ರೂಪಾಯಿ ಸಾಲ ಎತ್ತತೊಡಗಿತು.

ಇದನ್ನೇ ಮುಂದಿಟ್ಟುಕೊಂಡು ಮಹಾವೀರ್ ಜೈನ್ ಆಸ್ಪತ್ರೆಯು 1976ರಲ್ಲಿ BBMPಯಿಂದ ಲೀಸ್​ ಪಡೆದಿರುವ ಆಸ್ತಿಯೊಂದು ತನ್ನ ಬಳಿಯೂ ಇದೆ. ಅದರ ಆಧಾರದ ಮೇಲೆ ತಾನು ಸಾಲ ಪಡೆಯಬಹುದಲ್ಲವಾ ಅಂತಾ ಸೀದಾ ಪಂಜಾಬ್​ ನ್ಯಾಷನಲ್​ ಬ್ಯಾಂಕಿಗೆ ಅರ್ಜಿ ಗುಜರಾಯಿಸಿತ್ತು. ಅದು ಮೊನ್ನೆಯಷ್ಟೇ ಪ್ರಧಾನಿ ಮೋದಿ ಸಂಪುಟದಿಂದ ಹೊರಗಾದ ಡಿವಿ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಕಾಲ. ಅವರ ಟೇಬಲ್​ ಮುಂದೆ ಮಹಾವೀರ್ ಜೈನ್ ಆಸ್ಪತ್ರೆ ಸಾಲದ ಅರ್ಜಿ ಆಗ ಬಂದಿತ್ತು. ಅದನ್ನು ಮುಂದಿನ ಕ್ರಮಕ್ಕೆ ಸೂಚಿಸಿ, ಸಿಎಂ ಸದಾನಂದ ಗೌಡರು BBMP ಗೆ ವಾಪಸ್​ ಕಳಿಸಿದ್ದರು.

ಅಂದಿನ BBMP ಆಯುಕ್ತರಾಗಿದ್ದ ಕೆವಿ ಶಂಕರಲಿಂಗೇಗೌಡರು ಕಾಯಿದೆ ಪ್ರಕಾರ (Karnataka Municipal Act 1976) ಮಹಾವೀರ್ ಜೈನ್ ಆಸ್ಪತ್ರೆ ಸಾಲದ ಅರ್ಜಿಗೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್​ ಕೊಡಲು ಬರುವುದಿಲ್ಲ ಎಂದು ಹೇಳಿದರು. ಆದರೆ ಇದೇ ವೇಳೆ, ಟೌನ್ ಪ್ಲಾನಿಂಗ್​​ ಸ್ಟ್ಯಾಂಡಿಂಗ್​ ಕಮಿಟಿಗೆ ಜೈನ್ ಆಸ್ಪತ್ರೆಯ ಅರ್ಜಿಯನ್ನು ವರ್ಗಾಯಿಸಿದರು. ಅದೂ ಸಹ ಮಹಾವೀರ್ ಜೈನ್ ಆಸ್ಪತ್ರೆ ಸಾಲದ ಅರ್ಜಿಯನ್ನು ಪಕ್ಕಕ್ಕಿಟ್ಟಿತು.

(bbmp land taken on lease by Bhagwan Mahaveer Jain Hospital in Vasanthnagar pledged for loan in punjab national bank)

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ