ಕಸ್ಟಮರ್ ಕೇರ್ ಹೆಸರಿನಲ್ಲಿ ಪಾಸ್ವರ್ಡ್ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ; ಬ್ಯಾಂಕ್ನಿಂದ 13.45 ಲಕ್ಷ ರೂಪಾಯಿ ಡ್ರಾ
ಕೇರಳ ಮೂಲದ ಕೃಷ್ಣನ್ ಉನ್ನಿತನ್ ಆನ್ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ಬ್ಲಾಕ್ ಆಗಿದನ್ನು ಸರಿ ಪಡಿಸಲು ಕಸ್ಟಮರ್ ಕೇರ್ಗೆ ಪೋನ್ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಸ್ಟಮರ್ ಕೇರ್ ಹೆಸರಿನ ವ್ಯಕ್ತಿ ಬುಧವಾರ ಹಂತ ಹಂತವಾಗಿ ಕೃಷ್ಣನ್ ಬ್ಯಾಂಕ್ ಖಾತೆಯಿಂದ 13.45 ಲಕ್ಷ ರೂಪಾಯಿ ಡ್ರಾ ಮಾಡಿ, ವಂಚನೆ ಮಾಡಿದ್ದಾರೆ.
ದಾವಣಗೆರೆ: ಕಸ್ಟಮರ್ ಕೇರ್ ಹೆಸರಿನಲ್ಲಿ ಬ್ಯಾಂಕ್ನ ಪಾಸ್ವರ್ಡ್ ಪಡೆದು ವಂಚನೆ ಮಾಡಿದ ಘಟನೆಯೊಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿ ನಡೆದಿದೆ. ಕೇರಳ ಮೂಲದ ಕೃಷ್ಣನ್ ಉನ್ನಿತನ್ ಆನ್ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ಬ್ಲಾಕ್ ಆಗಿದನ್ನು ಸರಿ ಪಡಿಸಲು ಕಸ್ಟಮರ್ ಕೇರ್ಗೆ ಪೋನ್ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಸ್ಟಮರ್ ಕೇರ್ ಹೆಸರಿನ ವ್ಯಕ್ತಿ ಬುಧವಾರ ಹಂತ ಹಂತವಾಗಿ ಕೃಷ್ಣನ್ ಬ್ಯಾಂಕ್ ಖಾತೆಯಿಂದ 13.45 ಲಕ್ಷ ರೂಪಾಯಿ ಡ್ರಾ ಮಾಡಿ, ವಂಚನೆ ಮಾಡಿದ್ದಾರೆ.
ಕೇರಳ ಮೂಲದ ಕೃಷ್ಣನ್ ಸದ್ಯ ದಾವಣಗೆರೆಯಲ್ಲಿ ವಾಸವಾಗಿದ್ದು, ಕೇರಳದ ಅಲಪುಳ ಜಿಲ್ಲೆಯ ನಂಗಿಯಾರ್ಕುಲಂಗರ ನಗರದ ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಎಸ್ಬಿ ಖಾತೆ ಹೊಂದಿದ್ದಾರೆ. ಬುಧವಾರ ಕಸ್ಟಮರ್ ಕೇರ್ ಜತೆ ಮಾತನಾಡಿದ ಕೃಷ್ಣನ್ಗೆ ಮರುದಿನ ಅಂದರೆ ಗುರುವಾರ ಮತ್ತೆ ವ್ಯಕ್ತಿಯೊಬ್ಬ ಅದೇ ಬ್ಯಾಂಕ್ ಹೆಸರು ಹೇಳಿಕೊಂಡು ಪೋನ್ ಮಾಡಿದ್ದು, ನೀವು ಹೌಸಿಂಗ್ ಲೋನ್ಗೆ ಅರ್ಜಿ ಹಾಕಿದ್ದೀರಾ ಎಂದು ಕೇಳಿದ್ದಾನೆ. ಇಲ್ಲಾ ಎಂದಾಗ ನಿಮ್ಮ ಎಸ್ಬಿ ಐಮಿರರ್ ಪ್ಲಸ್ ಅಪ್ಲಿಕೇಶನ್ ಯಾರೋ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆ ವ್ಯಕ್ತಿಯ ಮಾತನ್ನು ಕೇಳಿದ ಕೃಷ್ಣನ್ ಉನ್ನಿತನ್ ಬ್ಯಾಂಕ್ನ ಖಾತೆಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಖಾತೆಯಲ್ಲಿ 13.45 ಲಕ್ಷ ರೂಪಾಯಿ ಕಡಿತಗೊಂಡಿದ್ದ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ದಾವಣಗೆರೆ ಸಿಇನ್ ಪೊಲೀಸ್ ಠಾಣೆಗೆ ಎಸ್ ಕೃಷ್ಣನ್ ದೂರು ಸಲ್ಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯೆಸ್ ಬ್ಯಾಂಕ್ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ ಪ್ರತಿಷ್ಠಿತ ಖಾಸಗಿ ಬ್ಯಾಂಕ್ಗಳಲ್ಲಿ ಒಂದಾದ ಯೆಸ್ ಬ್ಯಾಂಕ್ಗೆ ಬರೋಬ್ಬರಿ 712 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ನಿತೇಶ್ ರಿಯಲ್ ಎಸ್ಟೇಟ್ ಕಂಪನಿಗಳ (Nitesh Real Estate) ಹೆಸರಿನಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ, ಒಪ್ಪಂದ ಉಲ್ಲಂಘಿಸಿದ ಆರೋಪ ಈ 11 ಮಂದಿಯ ವಿರುದ್ಧ ದಾಖಲಾಗಿದೆ.
ಎಲ್ಲ 11 ಮಂದಿ ಆರೋಪಿಗಳು 2016 ರಿಂದ ಯೆಸ್ ಬ್ಯಾಂಕ್ ನಲ್ಲಿ (Yes Bank) ವ್ಯವಹಾರ ಮಾಡುತ್ತಿದ್ದರು. ಕಂಪನಿಯ ಹೆಸರಿನಲ್ಲಿ ವಿವಿಧ ಯೋಜನೆಗಳಿಗೆಂದು ಸಾಲ ಪಡೆದಿದ್ದರು. ಮುಂದೆ 2019ರ ವರೆಗೆ ಲೋನ್ ಕಟ್ಟಿದ್ದ ಆರೋಪಿಗಳು 2019 ಡಿಸೆಂಬರ್ ನಿಂದ ಲೋನ್ ಮರುಪಾವತಿ ಮಾಡದೇ ಯಾಮಾರಿಸಿದ್ದಾರೆ. ಈಗ ಕೋವಿಡ್ ಹಿನ್ನೆಲೆ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದೂ ಆರೋಪಿಗಳು ಹೇಳುತ್ತಿದ್ದಾರೆ.
ಕಳೆದೆರೆಡು ವರ್ಷದಿಂದ ಇಎಂಐ ಮರು ಪಾವತಿ ಮಾಡದ ಹಿನ್ನೆಲೆ ಕಸ್ತೂರ ಬಾ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್ ಮ್ಯಾನೇಜರ್ 11 ಮಂದಿ ಆರೋಪಿಗಳು ವಿರುದ್ಧ ದೂರು ನೀಡಿದ್ದಾರೆ. ಯೆಸ್ ಬ್ಯಾಂಕ್ ಮ್ಯಾನೇಜರ್ ಆಶೀಶ್ ವಿನೋದ್ ಜೋಶಿ ಇಂದು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಯೆಸ್ ಬ್ಯಾಂಕ್ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ: ಕಬ್ಬನ್ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲು