ಯೆಸ್ ಬ್ಯಾಂಕ್​ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ: ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲು

Nitesh Real Estate: ನಿತೇಶ್ ರಿಯಲ್ ಎಸ್ಟೇಟ್ ಕಂಪನಿಗಳ (Nitesh Real Estate) ಹೆಸರಿನಲ್ಲಿ ಸಾಲ ಪಡೆದು ಯೆಸ್ ಬ್ಯಾಂಕ್​ಗೆ ಮರುಪಾವತಿ ಮಾಡದೆ, ಒಪ್ಪಂದ ಉಲ್ಲಂಘಿಸಿದ ಆರೋಪ ಈ 11 ಮಂದಿಯ ವಿರುದ್ಧ ದಾಖಲಾಗಿದೆ.

ಯೆಸ್ ಬ್ಯಾಂಕ್​ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ: ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲು
ಯೆಸ್ ಬ್ಯಾಂಕ್​ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ: ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 06, 2021 | 5:14 PM

ಬೆಂಗಳೂರು: ಪ್ರತಿಷ್ಠಿತ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಯೆಸ್ ಬ್ಯಾಂಕ್​ಗೆ ಬರೋಬ್ಬರಿ 712 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ಬೆಂಗಳೂರಿನ ಕಬ್ಬನ್​ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ನಿತೇಶ್ ರಿಯಲ್ ಎಸ್ಟೇಟ್ ಕಂಪನಿಗಳ (Nitesh Real Estate) ಹೆಸರಿನಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ, ಒಪ್ಪಂದ ಉಲ್ಲಂಘಿಸಿದ ಆರೋಪ ಈ 11 ಮಂದಿಯ ವಿರುದ್ಧ ದಾಖಲಾಗಿದೆ.

ಎಲ್ಲ 11 ಮಂದಿ ಆರೋಪಿಗಳು 2016 ರಿಂದ ಯೆಸ್ ಬ್ಯಾಂಕ್ ನಲ್ಲಿ (Yes Bank) ವ್ಯವಹಾರ ಮಾಡುತ್ತಿದ್ದರು. ಕಂಪನಿಯ ಹೆಸರಿನಲ್ಲಿ ವಿವಿಧ ಯೋಜನೆಗಳಿಗೆಂದು ಸಾಲ ಪಡೆದಿದ್ದರು. ಮುಂದೆ 2019ರ ವರೆಗೆ ಲೋನ್ ಕಟ್ಟಿದ್ದ ಆರೋಪಿಗಳು 2019 ಡಿಸೆಂಬರ್ ನಿಂದ ಲೋನ್ ಮರುಪಾವತಿ ಮಾಡದೇ ಯಾಮಾರಿಸಿದ್ದಾರೆ. ಈಗ ಕೋವಿಡ್ ಹಿನ್ನೆಲೆ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದೂ ಆರೋಪಿಗಳು ಹೇಳುತ್ತಿದ್ದಾರೆ.

ಕಳೆದೆರೆಡು ವರ್ಷದಿಂದ ಇಎಂಐ ಮರು ಪಾವತಿ ಮಾಡದ ಹಿನ್ನೆಲೆ ಕಸ್ತೂರ ಬಾ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್ ಮ್ಯಾನೇಜರ್ 11 ಮಂದಿ ಆರೋಪಿಗಳು ವಿರುದ್ಧ ದೂರು ನೀಡಿದ್ದಾರೆ. ಯೆಸ್ ಬ್ಯಾಂಕ್ ಮ್ಯಾನೇಜರ್ ಆಶೀಶ್ ವಿನೋದ್ ಜೋಶಿ ಇಂದು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

cheating case 11 loan takers fail to re pay loan of 712 crore of rupees to yes bank fir registered in cubbon park police station

ನಿತೇಶ್ ರಿಯಲ್ ಎಸ್ಟೇಟ್ ಕಂಪನಿಗಳ (Nitesh Real Estate) ಹೆಸರಿನಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ, ಒಪ್ಪಂದ ಉಲ್ಲಂಘಿಸಿದ ಆರೋಪ  11 ಮಂದಿಯ ವಿರುದ್ಧ ದಾಖಲು

(cheating case against Nitesh Real Estate failing to re pay loan of 712 crore to yes bank fir registered in cubbon park station )