ಮಾತು ಪಕ್ಷವನ್ನೇ ಕೆಡಿಸುತ್ತೆ, ಸುಮ್ನಿರಿ ಎಂದ ದೊಡ್ಡಗೌಡರು; ತೋಟದ ಮನೆಯಲ್ಲಿ ಮೌನಕ್ಕೆ ಶರಣಾದ ಕುಮಾರಸ್ವಾಮಿ

ಮುಂದಿನ ಸ್ಥಳೀಯ ಚುನಾವಣೆ ಮೇಲೆ ಈ ಬೆಳವಣಿಗೆಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ, ಬೀಸು ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಉಂಟಾಗುವ ಅಪಾಯವೂ ಇದೆ. ಹೀಗಾಗಿ ಸ್ವಲ್ಪ ದಿನ ಈ ವಿಚಾರವಾಗಿ ಹೇಳಿಕೆ ಬೇಡ ಎಂದು ಹೆಚ್.ಡಿ.ದೇವೇಗೌಡ ಸೂಚನೆ.

ಮಾತು ಪಕ್ಷವನ್ನೇ ಕೆಡಿಸುತ್ತೆ, ಸುಮ್ನಿರಿ ಎಂದ ದೊಡ್ಡಗೌಡರು; ತೋಟದ ಮನೆಯಲ್ಲಿ ಮೌನಕ್ಕೆ ಶರಣಾದ ಕುಮಾರಸ್ವಾಮಿ
ಹೆಚ್​.ಡಿ.ದೇವೇಗೌಡ, ಹೆಚ್​.ಡಿ.ಕುಮಾರಸ್ವಾಮಿ
Follow us
TV9 Web
| Updated By: Skanda

Updated on: Jul 10, 2021 | 12:08 PM

ಮಂಡ್ಯ: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ನಡುವಿನ ಮಾತಿನ ಸಮರ ತಾರಕಕ್ಕೇರುತ್ತಿರುವುದನ್ನು ಗಮನಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಈ ಬಗ್ಗೆ ಯಾರೂ ಅನಗತ್ಯ ಹೇಳಿಕೆ ನೀಡಬಾರದು ಎಂದು ಪಕ್ಷದ ಮುಖಂಡರಿಗೆ ಸೂಚನೆ ನೀಡುವ ಮೂಲಕ ಪಕ್ಷಕ್ಕಾಗಬಹುದಾದ ಹಾನಿ ತಡೆಗಟ್ಟಲು ಮುಂದಾಗಿದ್ದಾರೆ. ಈ ರೀತಿ ಹೇಳಿಕೆಯಿಂದ ಜನರಿಗೆ ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಹಾನಿ ಆಗುತ್ತದೆ. ಇದೇ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ವಿರೋಧಿಗಳು ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಕೆಲಸ ಮಾಡುತ್ತಾರೆ. ಹೀಗಾಗಿ ಯಾರೂ ಅನಗತ್ಯ ಹೇಳಿಕೆ ನೀಡಕೂಡದು ಎಂದು ದೇವೇಗೌಡ ಸೂಚಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಸ್ಥಳೀಯ ಚುನಾವಣೆ ಮೇಲೆ ಈ ಬೆಳವಣಿಗೆಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ, ಬೀಸು ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ ಉಂಟಾಗುವ ಅಪಾಯವೂ ಇದೆ. ಹೀಗಾಗಿ ಸ್ವಲ್ಪ ದಿನ ಈ ವಿಚಾರವಾಗಿ ಹೇಳಿಕೆ ಬೇಡ ಎಂದು ಸೂಚನೆ ನೀಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿದಿನ ಇದೇ ರೀತಿ ಹೇಳಿಕೆ ನೀಡಿದರೆ ಜನರಿಗೆ ಬೇರೆ ರೀತಿಯ ಸಂದೇಶ ಹೊಗುತ್ತದೆ. ಮಾತಿನ ಸಮರದಿಂದ ಪಕ್ಷಕ್ಕೆ ಹೊಡೆತ ಬೀಳುತ್ತದೆ ಹೀಗಾಗಿ ಸುಮಲತಾ, ಕುಮಾರಸ್ವಾಮಿ ಜಟಾಪಟಿ ಬಗ್ಗೆ ಬೇರೆಯವರೂ ಯಾವ ಹೇಳಿಕೆ ಕೊಡಬೇಡಿ ಎಂದು ಸೂಚಿಸಿರುವುದು ತಿಳಿದುಬಂದಿದೆ.

ದೇವೇಗೌಡರ ಈ ಸಲಹೆಯನ್ನು ಪರಿಗಣಿಸಿರುವ ಹೆಚ್.ಡಿ.ಕುಮಾರಸ್ವಾಮಿ ತಟಸ್ಥವಾಗಿರಲು ನಿರ್ಧಾರ ತಳೆದಿದ್ದು, ಇದೀಗ ಮೌನಕ್ಕೆ ಶರಣಾಗಿದ್ದಾರೆ. ಸುಮಲತಾ ಹಾಗೂ ರಾಕ್​ಲೈನ್ ವೆಂಕಟೇಶ್ ವಾಗ್ದಾಳಿ ನಡೆಸಿದರೂ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿರುವ ಹೆಚ್​.ಡಿ.ಕುಮಾರಸ್ವಾಮಿ ವಿವಾದ ದೊಡ್ಡದಾಗುತ್ತಿರುವಂತೆಯೇ ಸುಮ್ಮನಾಗಿದ್ದಾರೆ. ಸದ್ಯ ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಇರುವ ಅವರು, ಕಾರ್ಯಕರ್ತರು ಹಾಗೂ ಮುಖಂಡರನ್ನ ಭೇಟಿ ಆಗುತ್ತಿದ್ದು, ಮುಂದೆ ಸಮಯ, ಸಂದರ್ಭ ನೋಡಿ ಸಿಡಿದೇಳುತ್ತಾರಾ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ, ಆದರೆ ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ: ಸಂಸದೆ ಸುಮಲತಾಗೆ ಕೈಮುಗಿದ ಮಾಜಿ ಸಿಎಂ ಕುಮಾರಸ್ವಾಮಿ 

ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್​ಲೈನ್​ಗೆ ಅನ್ನದಾನಿ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ