ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಆದಾಯ ಗಳಿಸಿದ ರೈತ; ಬಿಬಿಎಂ ಪದವೀಧರನ ಕೃಷಿ ಒಲವು

ಮೊದಲ ವರ್ಷ ಮಾರಾಟ ಮಾಡುವಷ್ಟು ಬೆಳೆ ಬಂದಿರಲಿಲ್ಲ. ಆದರೆ ಎರಡನೇ ವರ್ಷದಿಂದ ಉತ್ತಮ ಬೆಳೆ ಬರಲು ಶುರುವಾಗಿದೆ. ಮೊದಲು ಒಂದು ಗಿಡಕ್ಕೆ 10 ಕೆಜಿಯಂತೆ ಫಲ ಸಿಗುತ್ತದೆ. ಆ ನಂತರದ ವರ್ಷದಿಂದ ಪ್ರತಿ ಗಿಡ ಮೂರು ಪಟ್ಟು ಅಂದರೆ ಒಂದು ಗಿಡಕ್ಕೆ 30 ಕೆಜಿಯಂತೆ ಫಲ ಬರತೊಡಗುತ್ತದೆ.

ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಆದಾಯ ಗಳಿಸಿದ ರೈತ; ಬಿಬಿಎಂ ಪದವೀಧರನ ಕೃಷಿ ಒಲವು
ಡ್ರ್ಯಾಗನ್ ಫ್ರೂಟ್
Follow us
| Updated By: preethi shettigar

Updated on: Jul 10, 2021 | 12:41 PM

ದಾವಣಗೆರೆ: ಕಷ್ಟಗಳಿವೆ ಎಂದು ಕೈ ಕಟ್ಟಿ ಕುಳಿತುಕೊಂಡರೆ ಏನು ಮಾಡಲು ಸಾಧ್ಯವಿಲ್ಲ. ದಿಟ್ಟ ನಿರ್ಧಾರದಿಂದ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇರಬೇಕು. ಆಗ ಮಾತ್ರ ಜಯ ಗಳಿಸಲು ಸಾಧ್ಯ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎನ್ನುವಂತೆ ಕೇವಲ ಮುಕ್ಕಾಲು ಎಕರೆ ಜಮೀನಲ್ಲಿ ಅಪರೂಪದ ಬೆಳೆ ಬೆಳೆದು ಬಿಬಿಎಂ ಓದಿದ ಯುವ ರೈತರೊಬ್ಬರು ಸಾಧನೆ ಮಾಡಿದ್ದಾರೆ. ಮೂರು ಲಕ್ಷ ರೂಪಾಯಿ ಬಂಡವಾಳ ಹಾಕಿ, 10 ರಿಂದ 15 ಲಕ್ಷ ಆದಾಯ ಗಳಿಸಿದ್ದು, ಖಾಸಗಿ ಕಂಪನಿಗಳ ಕಚೇರಿಗೆ ಉದ್ಯೋಗಕ್ಕಾಗಿ ಅಲೆದಾಡುವ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.

ದಾವಣಗೆರೆ ತಾಲೂಕಿನ ಸಿದ್ದನೂರು ಗ್ರಾಮದ ರೈತ ಮಲ್ಲಿಕಾರ್ಜುನ ಕೃಷಿ ಎಂದರೆ ನಷ್ಟ ಎಂಬ ಮಾತನ್ನು ಸುಳ್ಳು ಮಾಡಿದ್ದಾರೆ. ಗುಡ್ಡದಂತಿರುವ ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿ ಡ್ರ್ಯಾಗನ್​ ಫ್ರೂಟ್ ಬೆಳೆದಿದ್ದಾರೆ. ಈ ಹಣ್ಣು ತಿಂದರೆ ಒಂದು ರೀತಿಯಲ್ಲಿ ಐಸ್​ಕ್ರೀಂ ತಿಂದಂತಾಗುತ್ತದೆ ಮತ್ತು ಅಷ್ಟೇ ರುಚಿ ಕೂಡ. ಸದ್ಯ ಬೆಂಗಳೂರು, ಮುಂಬಯಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಈ ರೈತ ಬೆಳೆದ ಹಣ್ಣುಗಳು ಮಾರಾಟ ಆಗುತ್ತದೆ. 2018 ಡಿಸೆಂಬರ್‌ನಲ್ಲಿ ಮಲ್ಲಿಕಾರ್ಜುನ ಈ ಹಣ್ಣಿನ ಗಿಡ ಹಾಕಿದ್ದಾರೆ. ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ಹಾಕಿ ಅದರ ಮೇಲೆ ಟೈರ್‌ ಅಳವಡಿಸಿದ್ದಾರೆ. ಅದಕ್ಕೆ ಕ್ಲಾಂಪಿಂಗ್‌, ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಂದು ಗಿಡಕ್ಕೆ 600ಕ್ಕೂ ಅಧಿಕ ವೆಚ್ಚ ಮಾಡಿದ್ದು, ಎಕರೆಗೆ 380 ಗಿಡಗಳು ಕೂತುಕೊಳ್ಳುತ್ತವೆ. ಹೀಗಾಗಿ ಎಕರೆಗೆ ಸುಮಾರು 2.80 ಲಕ್ಷ ವೆಚ್ಚವಾಗಿದೆ.

ಡ್ರ್ಯಾಗನ್​ ಫ್ರೂಟ್ ಕ್ಯಾಕ್ಟಸ್‌ಗೆ ಸೇರಿದ ಗಿಡವಾಗಿರುವುದರಿಂದ ಒಮ್ಮೆ ನೆಟ್ಟರೆ ಸಾಯುವುದಿಲ್ಲ. ಗಿಡ ನೆಡುವಾಗ ಮಾತ್ರ ಹೆಚ್ಚು ಖರ್ಚಾಗುತ್ತದೆ. ಬಳಿಕ ಪ್ರತಿ ವರ್ಷ ಎಕರೆಗೆ ಹೆಚ್ಚೆಂದರೆ 15 ಸಾವಿರ ವೆಚ್ಚವಾಗಬಹುದು. ನಿರಂತರ 20 ವರ್ಷ ಈ ಹಣ್ಣಿನಿಂದ ಆದಾಯ ಬರುತ್ತದೆ. ಬಳಿಕವೂ ಗಿಡ ಇರುತ್ತದೆ. ಆದರೆ ಹಣ್ಣು ಬಿಡುವುದು ಕಡಿಮೆಯಾಗುತ್ತದೆ. ಇಂತಹ ಅಪರೂಪದ ಬೆಳೆ ಬೆಳೆಯಲು ಮಲ್ಲಿಕಾರ್ಜುನ ಅವರಿಗೆ ಸಲಹೆ ನೀಡಿದ್ದು, ಡಾ. ಸುನಿಲ್. ಈ ಹಿಂದೆ ದಾಳಿಂಬೆ ಬೆಳೆಯುವ ಸಮಯದಲ್ಲಿ ಸಲಹೆ ನೀಡಲು ಬರುತ್ತಿದ್ದ ಡಾ. ಸುನಿಲ್‌ ಅವರು ಡ್ರ್ಯಾಗನ್‌ ಫ್ರೂಟ್ಸ್‌ ಬೆಳೆಯಲು ಮಲ್ಲಿಕಾರ್ಜುನಾ ಅವರಿಗೆ ಸಲಹೆ ನೀಡಿದರು. ಬಳಿಕ ಆನಗೋಡು ಹೋಬಳಿಯ ಸಹಾಯಕ ತೋಟಗಾರಿಕಾ ಅಧಿಕಾರಿ ರವಿ ಪ್ರೋತ್ಸಾಹ ನೀಡಿದರು. ಮೇಲಾಗಿ ಈ ಬೆಳೆಯ ಬಗ್ಗೆ ಯುಟ್ಯೂಬ್​ನಲ್ಲಿ ನೋಡಿದ್ದ ಮಲ್ಲಿಕಾರ್ಜುನ್ ಗಿಡ ನೆಟ್ಟು 8 ತಿಂಗಳಿಗೆ ಮೊದಲ ಬೆಳೆ ಬಂದಿದೆ.

dragon fruit

ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್

ಮೊದಲ ವರ್ಷ ಮಾರಾಟ ಮಾಡುವಷ್ಟು ಬೆಳೆ ಬಂದಿರಲಿಲ್ಲ. ಆದರೆ ಎರಡನೇ ವರ್ಷದಿಂದ ಉತ್ತಮ ಬೆಳೆ ಬರಲು ಶುರುವಾಗಿದೆ. ಮೊದಲು ಒಂದು ಗಿಡಕ್ಕೆ 10 ಕೆಜಿಯಂತೆ ಫಲ ಸಿಗುತ್ತದೆ. ಆ ನಂತರದ ವರ್ಷದಿಂದ ಪ್ರತಿ ಗಿಡ ಮೂರು ಪಟ್ಟು ಅಂದರೆ ಒಂದು ಗಿಡಕ್ಕೆ 30 ಕೆಜಿಯಂತೆ ಫಲ ಬರತೊಡಗುತ್ತದೆ. ಕೆಜಿಗೆ ನೂರರಿಂದ ಇನ್ನೂರು ವರೆಗೆ ದರ ಸಿಗುತ್ತದೆ. ಮುಕ್ಕಾಲು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಹತ್ತರಿಂದ 15 ಲಕ್ಷ ಆದಾಯ ಖಚಿತ. ಮಲ್ಲಿಕಾರ್ಜುನಾ ಅವರನ್ನು ನೋಡಿ ಗ್ರಾಮದಲ್ಲಿ ಇನ್ನಷ್ಟು ರೈತರು ಈ ಹಣ್ಣು ಬೆಳೆಯಲು ಮುಂದಾಗಿದ್ದಾರೆ.

ನಾನು ಈ ಕೃಷಿಗೆ ಮಾಡಿದ ವೆಚ್ಚ ಮೊದಲ ವರ್ಷ ಮಾತ್ರ. ನಂತರ 20 ವರ್ಷದ ವರೆಗೆ ಆದಾಯ ನಿರಂತರವಾಗಿರುತ್ತದೆ. ಇದಕ್ಕೆ ಹೆಚ್ಚು ನೀರು ಬೇಕಾಗಿಲ್ಲ. ಸ್ವಲ್ಪ ನೀರು ಕೊಟ್ಟರೇ ಸಾಕು ಬದುಕುತ್ತದೆ. ನೀರು ಇಲ್ಲಾ ಅಂದರೆ ಸತ್ತು ಹೋಗಲ್ಲ. ಬೇಸಿಗೆ ಕಾಲದಲ್ಲಿ ಒಂದು ಗಿಡಕ್ಕೆ ವಾರಕ್ಕೆ 10 ಲೀಟರ್‌ ನೀರು ಸಾಕಾಗುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್‌ ವರೆಗೆ ಬೆಳೆ ಬರುತ್ತದೆ. ಒಮ್ಮೆ ನೆಡುವುದು ಕಷ್ಟದ ಕೆಲಸ. ಬಳಿಕ ನಿರ್ವಹಣೆ ಸುಲಭ. ಮಹಾರಾಷ್ಟ್ರದ ಸಾಂಗ್ಲಿಯಿಂದ ಈ ಗಿಡ ತಂದು ನೆಟ್ಟಿದ್ದೇನೆ ಈಗ ಯಾರಿಗೆ ಬೇಕಾದರೂ ನೀಡುವಷ್ಟು ಸಸಿಗಳನ್ನು ಹೊಂದಿದ್ದೇನೆ. ಮೆಕ್ಕೆಜೋಳ ಬೆಳೆದು ಮಳೆಗೆ ಕಾದು ಸುಸ್ತಾಗುವ ಬದಲು ಇಂತಹ ಪರ್ಯಾಯ ಬೆಳೆಗಳ ಕಡೆ ಗಮನ ಹರಿಸಬೇಕಾಗಿದೆ ಎಂದು ರೈತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಇದನ್ನೂ ಓದಿ: 80 ಕಿ.ಮೀ ಪ್ರಯಾಣ ಬೆಳೆಸಿ ಮಾಡಿದ ಕೃಷಿಯಿಂದ ಲಕ್ಷಗಟ್ಟಲೆ ಆದಾಯಗಳಿಸಿದ ನಿವೃತ್ತ ಅಧಿಕಾರಿ

ಜಿಂಕೆಗಳ ಕಾಟಕ್ಕೆ ಹೊಲದಲ್ಲಿದ್ದ ಬೆಳೆ ನಾಶ; ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದರ್​ ರೈತರ ಆಕ್ರೋಶ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ